Author: editor.udayarashmi@gmail.com

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹುಟ್ಟಿದ ಮೇಲೆ ಸಾವು ಖಚಿತ. ನಮ್ಮ ಸಾವಿನ ಬಳಿಕ ಜನ ನಮ್ಮನ್ನು ಗುರುತಿಸಬೇಕೆಂದರೆ ನಮ್ಮ ಜೀವಿತ ಕಾಲದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೆ ಮಾತ್ರ ನಮ್ಮ ಹೆಸರು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.ತಾಲೂಕಿನ ಬಿದರಕುಂದಿಯ ಆರ್.ಎಂ.ಎಸ್.ಎ ಶಾಲೆಯ ರಸ್ತೆಯಲ್ಲಿರುವ ಮನಿಯಾರ್ ಶಾಲಾ ಆವರಣದಲ್ಲಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯೂಬ ಮನಿಯಾರ ಅವರ ತಂದೆ ತಾಯಿಗಳ ಸ್ಮರಣಾರ್ಥ ಹಾಗೂ ಶ್ರಾವಣ ಮಾಸದ ನಿಮಿತ್ಯ ಹಮಿಕೊಳ್ಳಲಾಗಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ವಿತರಣೆ ಮತ್ತು ಮಾಶಾಸನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಗವಂತ ನೀಡಿದ ಸಂಪತ್ತನ್ನು ಸಮಾಜದಲ್ಲಿರುವ ಅಶಕ್ತ ಜನತೆಗೆ ಧಾರೆ ಎರೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಆ ಕಾರ್ಯವನ್ನು ಸತತ ೧೨ ವರ್ಷಗಳಿಂದ ಕಣ್ಣಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ಎಲೆಕ್ಟಿçÃಕ್ ಮೆಕ್ಯಾನಿಕ್ ಹಾಗೂ ಇಂಡಸ್ಟಿçÃಯಲ್ ರೊಬೋಟಿಕ್ ಆ್ಯಂಡ್ ಡಿಜಿಟಲ್ ಮ್ಯಾನುಪ್ಯಾಕ್ಚರಿಂಗ್ ಕೋರ್ಸ್ಗಳಿಗೆ ಖಾಲಿ ಇರುವ ಸೀಟುಗಳ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಪಾಸ್ ಹಾಗೂ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೩೦ರವರೆಗೆ ಅವಧಿ ವಿಸ್ತರಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಅಥವಾ cite.karnataka.gov.inವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : ೯೯೮೬೧೨೩೮೯೩, ೯೦೦೮೬೯೨೨೭೦, ೯೯೦೨೮೩೫೬೨೬ ಹಾಗೂ ೯೯೮೦೨೩೦೭೧೦ ಸಂಪರ್ಕಿಸಬಹುದಾಗಿದೆ ಎಂದು ನಾಲತವಾಡ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೯ನ್ನು ರೂಪಿಸಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ೩೩ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿಯಡಿ ಗುರುತಿಸಿ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ರಾಜ್ಯದ ಜಿಲ್ಲೆಗಳಿಗೆ ಸಂಬಂಧಿಸಿದ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ರಾಜ್ಯದ ೧೨೭೫ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿ ೨೦೨೪-೨೯ರಡಿ ಸರ್ಕಾರ ಅನುಮೋದನೆ ನೀಡಿದೆ.ಜಿಲ್ಲೆಯ ಪ್ರವಾಸಿ ತಾಣಗಳಾದ ಗೋಲಗುಮ್ಮಟ, ಇಬ್ರಾಹಿಂರೋಜಾ, ದ್ಯಾಬೇರಿ ಗ್ರಾಮದ ಶ್ರೀ ವಾಗ್ದೇವಿ ದೇವಸ್ಥಾನ, ಕುಮಟಗಿ ಬೇಸಿಗೆ ಅರಮನೆ, ಶಿವಗಿರಿ ಶಿವನಮೂರ್ತಿ, ಸಾರಿಪುತ್ರ ಬೋಧಿಧಮ್ಮ ಬೌದ್ಧ ವಿಹಾರ ಪ್ರವಾಸಿ ತಾಣ, ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಮಠ, ತೊರಗಿ ಗ್ರಾಮದ ಶ್ರೀ ನರಸಿಂತಹ ದೇವಸ್ಥಾನ, ಸಂಗೀತ ಮಹಲ್, ತೊರವಿ ಶ್ರೀ ಲಕ್ಷ್ಮಿ ದೇವಸ್ಥಾನ, ಕನಮಡಿ ಗ್ರಾಮದ ಶ್ರೀ ದರಿದೇವರ ದೇವಸ್ಥಾನ, ಅರಕೇರಿಯ ಶ್ರೀ ಅಮೋಘಸಿದ್ದ ದೇವಸ್ಥಾನ, ತಿಕೋಟಾದ ಹಾಜಿಮಸ್ತಾನ ದರ್ಗಾ,…

Read More

ಪಾಕಿಸ್ತಾನ ಜಿಂದಾಬಾದ್ ಕೂಗುವವರ ವಿರುದ್ಧ ಕ್ರಮವಿಲ್ಲ | ಸಿ.ಟಿ ರವಿ ವಿರುದ್ಧ ಮಾತ್ರ ಎಫೈಆರ್ | ಬಿಜೆಪಿ ಕಿಡಿ ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಕೂಗುವವರು, ಪಾಕಿಸ್ತಾನ್ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ, ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಭಾವೋದ್ವೇಗದಲ್ಲಿ ಮಾತನಾಡಿರುವ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ವಿದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವುದನ್ನು ಸಾಕ್ಷೀಕರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬುಧವಾರ ನಡೆದ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಪಾಕಿಸ್ತಾನ್ ಜಿಂದಾಬಾದ್ ಕೂಗುವವರು, ಪಾಕಿಸ್ತಾನ್ ಧ್ವಜ ಹಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವ ಕಾಂಗ್ರೆಸ್ ಸರ್ಕಾರ ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದ…

Read More

ವಿಜಯಪುರ ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಮೋಬೈಲ್ ಸ್ವೀಚ್ ಆಫ್ ಮಾಡುತ್ತಿರಿ ಮತ್ತು ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳಿವೆ ಮೊದಲು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ. ನಮ್ಮ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗಬೇಕು. ನಿಮ್ಮ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದು ಜಿಪಂ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸದರು.ಸಿಂದಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಇರುವುದರಿಂದ ಬೆಳೆ ನಾಶ ಮತ್ತು ಮೆನೆಗಳು ಬಿದ್ದಿವೆ. ಹಾಗೂ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದ್ದು ಅದಕ್ಕೆ ಬೇಕಾದ ಮುಂಜಾಗೃತ ಕ್ರಮಕೈಗೊಳ್ಳಬೇಕು. ತಾಲೂಕಿನಲ್ಲಿ ಈ ಬಾರಿ ಮಳೆ ಹೆಚ್ಚಾಗಿದ್ದು, ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲಾಗಿದೆಯೇ ಎಂದ ಪ್ರಶ್ನೆಗೆ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಉತ್ತರಿಸಿ, ಆಲಮೇಲ ಸರ್ವೇಯ ಬೀಮಾ ನದಿಯ ಸುತ್ತಮುತ್ತಲಿನ ೭೬೪ಹೆಕ್ಟರ್ ಹಾಗೂ ಮಳೆಯಿಂದಲೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಜ್ಯೋತಿ ಬಸ್ಸಿನಕರ್ ಅವರು ಸಲ್ಲಿಸಿದ್ದ “ಇಂಪ್ಯಾಕ್ಟ್ ಆಫ್ ಡಾ. ಬಿ.ಆರ್ ಅಂಬೇಡ್ಕರ್ ಡೆವಲಪ್ಮೆಂಟ್ ಕಾರ್ಪೋರೇಷನ್ ಆನ್ ವುಮನ್ ಎಂಪವರ್ಮೆಂಟ್ ಇನ್ ಕರ್ನಾಟಕ: ಅ ಸ್ಟಡಿ ಆಫ್ ಸೆಲ್ಫ ಎಂಪ್ಲಾಯಿಮೆಂಟ್ ಸ್ಲೀಮ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಜ್ಯೋತಿ ಬಸ್ಸಿನಕರ್ ಅವರು ಅರ್ಥಶಾಸ್ತ್ರ ವಿಭಾಗದ ಡಾ. ಸುರೇಶ ಕೆ.ಪಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಜ್ಯೋತಿ ಬಸ್ಸಿನಕರ್ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರು ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು. ಪರಂಪರೆ, ಸಂಸ್ಕೃತಿ, ಜಾಗೃತಿ ಹಾಗೂ ಸಮಾಜದಲ್ಲಿರುವ ಬಡ ಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಏಳ್ಗೆಗೆ ಶ್ರಮಿಸಿದ ಕೀರ್ತಿ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭವ ಗೋಷ್ಠಿಯಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಅನುಭಾವ ಕುರಿತು ಮಾತನಾಡುತ್ತ ಶರಣರ ವಿಚಾರಗಳೇ ನಮಗೆ ಆದರ್ಶ ನಿತ್ಯ ಸ್ಪೂರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಂದಿನ ಹಿರಿಯರು ಸಂಸ್ಥೆಯ ಏಳ್ಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಪೂಜ್ಯರ ಸ್ಮರಣೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾಪುರುಷರು ಎಂದರು.ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರ…

Read More

ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ ನೀಡಿದ ಶಿಕ್ಷಕ ರಾಜಕುಮಾರ ಮಾಳಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಜಂಬಗಿ (ಆ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜಕುಮಾರ ಮಾಳಿ ಅವರಿಗೆ 2025-26 ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪಡೆದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಸಾರೋಟದಲ್ಲಿ ಮುಖ್ಯೋಪಾಧ್ಯಾಯನಿ ಎಲ್.ಎಂ‌.ದಿಗ್ಗಾಯಿ ಆಸಿನರಿದ್ದರು.ಶಿಕ್ಷಕ ಮಾಳಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಗ್ರಾಮಸ್ಥರು, ಹಿರಿಯರು, ಯುವಕರು, ಮಕ್ಕಳು ಖುಷಿ ಇಮ್ಮಡಿಗೊಂಡಿತ್ತು. ಮೆರವಣಿಗೆ ಸಾಗುವಾಗ ವಾದ್ಯ ವೃಂದಗಳೊಂದಿಗೆ ಮಕ್ಕಳು ಹೆಜ್ಜೆ ಹಾಕುತ್ತಾ ಗೌರವ ಸಮರ್ಪಿಸಿದರು.ಶಿಕ್ಷಕ ಸಂತರಾಮಸಿಂಗ್ ರಜಪೂತ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಾಧಕರನ್ನಾಗಿ ಮಾಡಿಸುತ್ತಾ ಹಗಲಿರುಳು ಸೇವೆ ಮಾಡುತ್ತಿರುವ ಶಿಕ್ಷಕನಿಗೆ ಈ ಪ್ರಶಸ್ತಿ ಒಲಿದಿದೆ. ಗ್ರಾಮದಲ್ಲಿ ಇನ್ನೂ ಹೆಚ್ಚು ಸಾಧಕರು ತಯರಾಗಲಿ ಎಂದು ಶುಭ ಹಾರೈಸಿದರು.ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ ಸಾಲಿನ ನಿಡಗುಂದಿ “ಬಿ” ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ -೨ ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು ಅಮೋಘ ಜಯ ದಾಖಲಿಸಿದ್ದಾರೆ.ವಿವಿಧ ಸ್ಪಧೆ೯ಗಳಲ್ಲಿ ವೀರೋಚಿತ ಗೆಲುವು ಸಾಧಿಸಿ ಕ್ರೀಡಾಕೂಟದಲ್ಲಿ ಸಾಧನೆ ಮೆರೆದಿದ್ದಾರೆ.ಈ ಬಾರಿಯೂ ಬಾಲಕರ ಕಬಡ್ಡಿ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತವಾಗಿ ೪ ನೇ ಬಾರಿಗೆ ಚಾಂಪಿಯನ್ ಶಿಪ್ ಪಟ್ಟ ತಮ್ಮದಾಗಿಸಿಕೊಂಡಿದ್ದು ವಿಶೇಷ.೧೦೦ ಮೀ ಓಟದಲ್ಲಿ ಸ್ಪಧೆ೯ಯಲ್ಲಿ ಪ್ರಥಮ,ದ್ವೀತಿಯ ಎರಡು ಸ್ಥಾನಗಳನ್ನು ಈ ಶಾಲೆಯ ಮಕ್ಕಳು ಬಾಚಿದ್ದಾರೆ.೧೦೦ಮೀ,ಓಟದಲ್ಲಿ ಮುತ್ತಗಿ ಪ್ರಥಮ ಸ್ಥಾನ ಪಡೆದರೆ ೧ ದ್ವಿತೀಯ ಸ್ಥಾನ ಪ್ರಜ್ವಲ್ ಅಳ್ಳಿಚಂಡಿ ಪಡೆದಿದ್ದಾನೆ. ೨೦೦ಮೀ ಓಟದಲ್ಲಿ ರಾಜು ಮುತ್ತಗಿ ಪ್ರಥಮ, ೮೦೦ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ಪ್ರಥಮ, ೪೦೦ ಮೀ ಓಟದಲ್ಲಿ ಸುದೀಪ್ ತಿಪ್ಪನಗೌಡರ ತೃತೀಯ,೧೫೦೦ ಮೀ ಓಟದಲ್ಲಿ ಪ್ರಜ್ವಲ್ ಅಳ್ಳಿಚಂಡಿ ದ್ವೀತಿಯ ಪಡೆದಿದ್ದಾರೆ. ಬಾಲಕಿಯರ ೩೦೦೦ ಮೀ.ಓಟದಲ್ಲಿ ಲಕ್ಷ್ಮೀ ಲಮಾಣಿ ದ್ವೀತಿಯ ಸ್ಥಾನ ಗಳಿಸಿದರೆ ೪್ಠ೧೦೦ ರಿಲೇ ಓಟದಲ್ಲಿ ದ್ವಿತೀಯ ಶಾಲಾ ತಂಡ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮ್ಯಾಟ್ರಿಕ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ಆಗ್ರಹಿಸಿ ಇಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.ಆಹಾರ ಸಾಮಗ್ರಿಗಳು ಸರಿಯಾಗಿ ಇರುವದಿಲ್ಲ. ಆಹಾರಕ್ಕೆ ಬಳಸುವ ತರಕಾರಿ ಕೋಳೆತದ್ದು ಇರುತ್ತದೆ. ಶೌಚಾಲಯ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರುವದಿಲ್ಲ ಎಂದು ಹೇಳಿದರು.ಈ ಕುರಿತು ಬಿ.ಸಿ.ಎಂ ಅಧಿಕಾರಿಗಳಿಗೆ ಪ್ರತಿ ಬಾರಿಯೂ ಫೋನು ಮೂಲಕ ಸಂಪರ್ಕಿಸಿದಾಗ ಮಿಟಿಂಗನಲ್ಲಿ ಇದ್ದೇನೆ, ನಾನು ಭೇಟಿ ನೀಡಿ ಕ್ರಮ ಕೈಕೊಳ್ಳುವದಾಗಿ ಹೇಳುತ್ತಾರೆ. ಒಮ್ಮೆಯೂ ಸ್ಪಂದಿಸಿಲ್ಲ ಎಂದರು.ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.ಎಬಿವಿಪಿಯ ಭೀಮುಗೌಡ ಬಗಲಿ, ಸಚೀನ ಧನಗೊಂಡ, ಗಣೇಶ ಹಂಜಗಿ, ರಾಹುಲ ಜಾಧವ, ಸೋಮನಾಥ ಕಟಗೇರಿ ಮಾತನಾಡಿದರು.ವಿಕಾಸ ಬಡಿಗೇರ, ಯಲಗೊಂಡ ಹಿರೆಕುರಬರ, ಸಣ್ಣಪ್ಪ ಹಿರೇಕುರಬರ, ಶ್ರೀಕಾಂತ ಬಜಂತ್ರಿ, ಚನ್ನಪ್ಪ ಕುಂಬಾರ, ಪ್ರದೀಪ ಆನೂರ, ನಾಜರಾಜ ಕೊಡಹೊನ್ನ, ಬೀಮರಾಯ ಮೇತ್ರಿ, ವಾಸಿಮ ಚೌಧರಿ ಮತ್ತಿತರಿದ್ದರು.

Read More