ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರತಿ ಹಳ್ಳಿಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ 50,000 ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಹಾಗೆ ಬಹು ವಾರ್ಷಿಕ ಬೆಳೆಗಳಿಗೆ 2ಲಕ್ಷ ಪರಿಹಾರವನ್ನು ಕೊಡಬೇಕೆಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅಗ್ರಹ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂಡಿ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ ದ್ರಾಕ್ಷಿ ದಾಳಿಂಬ್ರಿ ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳಲ್ಲಿ ನೀರು ನಿಂತು ಹಾಳಾಗಿವೆ ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ 15 ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ಬರಲೇಬೇಕೆಂದು ಒತ್ತಾಯ ಮಾಡಲಾಯಿತು
ತಾಲೂಕು ಅಧ್ಯಕ್ಷ ಮಾಳು ಪೂಜಾರಿ ಮಾತನಾಡಿ, ಪರಿಹಾರ ನೀಡಲು ಒಂದು ವೇಳೆ ತಡವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿ ಮಹದೇವ್ ಬನಸೋಡೆ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅವರು ಈಗಾಗಲೇ ಮೊದಲೇ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರಕ್ಕೆ ಗುರುತಿಸಲಾಗಿತ್ತು, ಮತ್ತೆ ಇತ್ತೀಚಿಗೆ ಹೆಚ್ಚಿನ ಮಳೆ ಉಂಟಾಗಿ ಅನೇಕ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟಗೊಂಡಿರುವ ಕುರಿತು ಪ್ರಥಮ ವರದಿಯನ್ನು ಆಯಾ ಗ್ರಾಮ ಪಂಚಾಯತ್ ಅಥವಾ ತಲಾಟಿ ಕಚೇರಿ ಮುಂದೆ ಅಂಟಿಸಲಾಗಿದೆ. ಇನ್ನು ಯಾವ ರೈತರು ನಷ್ಟಗೊಂಡು ಉಳಿದಿದ್ದರೆ ಅಂಥವರು ದಾಖಲೆಗಳನ್ನು ಕೊಡುವಂತೆ ತಿಳಿಸಿದರು.
ಈ ವೇಳೆ ಚಡಚಣ ತಾಲೂಕಾ ಗೌರವಾಧ್ಯಕ್ಷ ಮುರಗೇಂದ್ರ ಸಿಂಪಿ, ಗೇನಪ್ಪ ಬಿರಾದಾರ, ಗಂಗಾಧರ್ ಮಾನೆ, ಶ್ರೀಶೈಲ ಪೈಕರ್, ಶಂಕ್ರಪ್ಪ ಸಾಲೋಟಗಿ, ಸೋಮನಿಂಗ್ ನಿಂಗಾರಿ, ಧರ್ಮರಾಜ್ ಪಾಟೀಲ್, ಮಾಳಪ್ಪ ಹಿರೇಕುರಬರ, ಮಾಂತೇಶ ಬಡಿಗೇರ್, ನಾಗಪ್ಪ ಗುಡ್ಲ, ದತ್ತು ಹೇಳವಾರ, ಸಂಜು ಹಿರೇಕುರಬರ, ಹನಮಂತ ಹೂಗಾರ, ಚಂದು ಬೆನೂರ, ಮಮ್ಮದ ಮುಲ್ಲಾ, ಸಂತೋಷ್ ಟೆಂಗಳೇ, ಅಮ್ಮಸಿದ್ಧ ಆಸಂಗಿ
ಸೇರಿದಂತೆ ರೈತರು ಇದ್ದರು.