ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆಯಿಂದ ಕುಟುಂಬಗಳು ಉಳಿದು ಹೋಗಿದ್ದರೆ ಅಥವಾ ಕುಟುಂಬದ ಸದಸ್ಯರು ಬಿಟ್ಟು ಹೋಗಿದ್ದರೆ ಸಾರ್ವಜನಿPರು ಗಾಂಧಿ ಚೌಕ ಹತ್ತಿರದ ಮಹಾನಗರ ಪಾಲಿಕೆಯ ಹಳೇ ಕಟ್ಟಡದ ವಲಯ ಕಚೇರಿ-೦೧ ರಲ್ಲಿ ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆ ೦೮೩೫೨-೨೨೨೪೭೪ ಸಂಪರ್ಕಿಸಬಹುದಾಗಿದೆ. ಈ ಸಹಾಯವಾಣಿ ಕೇಂದ್ರ ಬೆಳಿಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.