ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಬಸ್ ನಿಲ್ದಾಣ 1 ರಲ್ಲಿ ಡಾಂಬರೀಕರಣ ಹಾಗೂ ಬಣ್ಣ ಹಚ್ಚುವ ಕಾರ್ಯ ಪ್ರಾರಂಭಿಸಲು ಕೊಲ್ಹಾರ ಅಭಿವೃದ್ಧಿ ಸಮೀತಿ ತಾಲ್ಲೂಕು ದಂಡಾಧಿಕಾರಿ ಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣವು ತಾಲ್ಲೂಕಿನ ಪ್ರಮುಖ ನಿಲ್ದಾಣವಾಗಿದ್ದು, ಪ್ರತಿ ದಿನ 300ಕ್ಕೂ ಹೆಚ್ಚು ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಸುಮಾರು 15 ವರ್ಷಗಳ ಹಿಂದೆ ಬಸ್ ನಿಲ್ದಾಣ 1ರಲ್ಲಿ ಡಾಂಬರೀಕರಣ ಕಾರ್ಯ ನಡೆದಿದ್ದು ಆ ಬಳಿಕ ಯಾವುದೇ ರೀತಿ ದುರಸ್ತಿ ಅಥವಾ ಡಾಂಬರೀಕರಣ ನಡೆದಿಲ್ಲ ಹೀಗಾಗಿ ಬಸ್ ನಿಲ್ದಾಣದ ನೆಲವು ಸಂಪೂರ್ಣ ಹಾಳಾಗಿದ್ದು, ಬಸ್ ಹಾಗೂ ಖಾಸಗಿ ವಾಹನಗಳು ಸಂಚರಿಸುವ ವೇಳೆಯಲ್ಲಿ ಭಾರೀ ಪ್ರಮಾಣದ ಧೂಳಿನ ಮಬ್ಬು ಉಂಟಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ.
ಈ ಧೂಳಿನಿಂದ ಕ್ಯಾಂಟೀನ್, ಅಂಗಡಿಗಳು ಮತ್ತು ಪಕ್ಕದಲ್ಲಿರುವ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ತೀರ್ವ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳು ಬಸ್‌ಗಾಗಿ ಕಾಯುವ ವೇಳೆ ಧೂಳಿನ ಪರಿಣಾಪುದಿಂದ ಅಲರ್ಜಿ, ಉಸಿರಾಟದ ತೊಂದರೆ ಮತ್ತು ಅನಾರೋಗ್ಯ ಉಂಟಾಗುತ್ತಿದೆ. ಬಸ್ ನಿಲ್ದಾಣದ ಸಿಬ್ಬಂದಿಗಳು ಸಹ ಮಾಸ್ಕ ಧರಿಕೊಂಡೇ ಕರ್ತವ್ಯ ನಿರ್ವಹಿಸುವಂತಾಗಿದೆ. ಇದಲ್ಲದೆ ತಾಯಿಯಂದಿರಿಗೆ ಶಿಶುವಿಗೆ ಹಾಲುಣಿಸಲು ಪ್ರತೇಕ ಕೊಠಡಿ ಅಗತ್ಯವಿದ್ದು, ಆ ಸೌಲಭ್ಯ ಇಲ್ಲದಿರುವುದು ದೊಡ್ಡ ತೊಂದರೆಯಾಗುತ್ತಿದೆ. ಹಾಗೂ ನಿಲ್ದಾಣದ ಕಟ್ಟಡಕ್ಕೆ 15 ವರ್ಷಗಳ ಹಿಂದೆ ಬಣ್ಣ ಹಚ್ಚಲಾಗಿದ್ದು, ಆ ಬಳಿಕ ಬಣ್ಣ ಹಚ್ಚುವ ಯಾವುದೇ ಕೆಲಸ ನಡೆದಿಲ್ಲ. ಹೀಗಾಗಿ ಕಟ್ಟಡವು ಹಾಳಾಗಿರುತ್ತದೆ. ದುರಸ್ಥಿ ಹಾಗೂ ಬಣ್ಣ ಹಚ್ಚುವ ಕೆಲಸ ಅಗತ್ಯವಿದೆ. ಮತ್ತು ತಾತ್ಕಾಲಿಕ ಧೂಳಿನ ನಿಯಂತ್ರಣಕ್ಕಾಗಿ ನೀರು ಸಿಂಪಡಣೆ ವ್ಯವಸ್ಥೆ ಕೈಗೊಳ್ಳಬೇಕು. ಅಂತಾ ಈ ಮನವಿಯನ್ನು ಸ್ವೀಕರಿಸಿ, 15 ದಿನಗಳೊಳಗಾಗಿ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿಸುತ್ತೇವೆ. ಬೇಡಿಕೆಗಳನ್ನು ಪೂರೈಸದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕೊಲ್ಹಾರ ಅಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಸಂತೋಷ ಮ್ಯಾಗೇರಿ, ಮುಖ್ಯಾಧಿಕಾರಿ ವೀರೇಶ ಹಟ್ಟಿ, ಸಂಗಮೇಶ್ ಬಾಟಿ, ಪರಶುರಾಮ ಚಿಮ್ಮಲಗಿ, ರೇವಣಸಿದ್ಧ ಗಡ್ಡಿ,
ವಿಶ್ವನಾಥ್ ಬಾಟಿ, ಕುಮಾರ್ ಹಿರೇಮಠ್, ನಾಗರಾಜ ಕುಂಬಾರ, ಅಭಿಜಿತ್ ಭಾರಸ್ಕಳ, ಶ್ರೀಧರ್ ಬಾಟಿ ಹಾಗೂ ಪಟ್ಟಣದ ನಾಗರೀಕರು ಯುವಕರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.