Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾಮಧೇನು ಕಲ್ಪವೃಕ್ಷವಾಗಿರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡಲು ಪೂರ್ವ ಜನ್ಮದ ಪುಣ್ಯ ಮಾಡಿರಬೇಕು ಎಂದು ಗುರು ರಾಘವೇಂದ್ರ ಸೇವಾ ಸಮಿತಿಯ ಪ್ರಮುಖ ಪ್ರಕಾಶ ಅಕ್ಕಲಕೋಟ ಹೇಳಿದರು.ಗ್ರಾಮದ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ವಿಜಯಪುರದ ಗುರು ರಾಘವೇಂದ್ರ ಸೇವಾ ಸಮಿತಿಯಿಂದ ಮಂತ್ರಾಲಯ ಪಾದಯಾತ್ರೆ ಹೊರಡುವ ಭಕ್ತಾದಿಗಳಿಗೆ ದಾಸೋಹ ಸೇವೆ ಮಾಡುತ್ತಿರುವ ನಿಮಿತ್ತ ನಡೆದ ೨೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಅವಳಿ ಜಿಲ್ಲೆಯ ಸಾಕಷ್ಟು ಭಕ್ತರು ಯಲಗೂರಿನಿಂದ ಹುಲ್ಲೂರು, ಮುದ್ದೇಬಿಹಾಳ ಮಾರ್ಗವಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಬೆಳೆಸುತ್ತಾರೆ. ಯಲಗೂರಿನಿಂದ ಮುದ್ದೇಬಿಹಾಳದವರೆಗಿನ ೨೫ ಕಿಮೀ ಅಂತರದಲ್ಲಿ ಪಾದಯಾತ್ರಿಗಳಿಗೆ ಯಾವುದೇ ಸೌಲಭ್ಯವಿರಲಿಲ್ಲ. ಇದರಿಂದ ಪಾದಯಾತ್ರಿಕರು ಪ್ರಯಾಸ ಪಡುತ್ತಿದ್ದರು. ಇದನ್ನು ತಪ್ಪಿಸಲು ಮಧ್ಯವರ್ತಿ ಸ್ಥಳವಾದ ಹುಲ್ಲೂರು ಬಸ್ ನಿಲ್ದಾಣದ ಬಳಿ ಗುರು ರಾಘವೇಂದ್ರ ಸೇವಾ ಸಮಿತಿಯಿಂದ ೨೦೦೧ರಿಂದ ದಾಸೋಹ ಸೇವೆ ಆರಂಭಿಸಲಾಗಿದ್ದು ನಿರಂತರವಾಗಿ ನಡೆದುಕೊಂಡು ಬಂದಿದೆ. ರಾಯರ ಕೃಪೆಯಿಂದ ನಮಗೆಲ್ಲ ಒಳ್ಳೆಯದಾಗಿದೆ ಎಂದರು.ಗೋಪಾಲಾಚಾರ್ಯ ಹಿಪ್ಪರಗಿ ಮಾತನಾಡಿ, ಪಾದಯಾತ್ರಿಕರ ಕಷ್ಟಗಳನ್ನು ಅರಿತು ದಾಸೋಹ ಸೇವೆ ಆರಂಭಿಸಿದ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ವಿದ್ಯಾಲಯದ ಮೂಲಭೂತ ಸೌಲಭ್ಯಗಳು, ಅನುದಾನ ಬಳಕೆ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ದಿಸಲು ಕಾಲೇಜು ಅಭಿವೃದ್ದಿ ಸಮೀತಿಯ ಪಾತ್ರವೂ ಮಹತ್ವದ್ದಾಗಿದ್ದು. ಕ್ರಿಯಾಶೀಲ ಸಮೀತಿಯಿಂದ ಅಭಿವೃದ್ಧಿ ಸಾಧ್ಯವೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಹೇಳಿದರು.ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಪಾಲಕರ ಸಭೆಯಲ್ಲಿ ಕಾಲೇಜು ಅಭಿವೃದ್ದಿ ಸಮೀತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಅವರು ವಿದ್ಯಾಲಯದ ಅಗತ್ಯಗಳಿಗೆ ಗ್ರಾಮದ ಪ್ರತಿಯೊಬ್ಬರು ಸ್ಪಂದನೆ ನಿರಂತರವಾಗಿರಲಿದ್ದು ಪಧಾದಿಕಾರಿಗಳು ನಿರಂತರ ಸಂಪರ್ಕದಿಂದ ವಿದ್ಯಾಲಯಕ್ಕೆ ಯಾವುದೇ ಸಮಸ್ಯೆ ಬಾರದಂತೆ ಸ್ಪಂದಿಸಬೇಕೆಂದು ಸಲಹೆ ನೀಡಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ. ಕಾಳಪ್ಪ ಬಡಿಗೇರ ಮಾತನಾಡಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಬೀರಪ್ಪ ಹಳೆಮನಿ, ಶಂಕರಗೌಡ ಬ. ಪಾಟೀಲ, ರಾಚಯ್ಯ ಮಠಮತಿ, ನಿಂಗಣ್ಣ ಪೂಜಾರಿ, ಪ್ರಭು ಮುಧೋಳ, ಪ್ರಕಾಶ ಪಾಟೀಲ, ಪಿರಸಾಬ ನದಾಫ, ಪ್ರಾಶುಪಾಲೆ ಶ್ರೀಮತಿ ಎಸ್.ಕೆ. ರಾಠೋಡ ಉಪಸ್ಥಿತರಿದ್ದರು.ಕಾಲೇಜು ಅಭಿವೃದ್ದಿ ಸಮೀತಿಗೆ ನೂತನ ಅಧ್ಯಕ್ಷರಾಗಿ ಅವ್ವನಪ್ಪ ಮುಗಳಖೋಡ ಉಪಾಧ್ಯಕ್ಷರಾಗಿ ಬಸಪ್ಪ ಮಮದಾಪೂರ, ಗಟಿಗೆಪ್ಪ ಜಂಗನೂರ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಜನವರಿ 29 ರಂದು ಬ್ರಹತ್ ಹಿಂದೂ ಸಮಾಜೋತ್ಸವ ಸಮಾವೇಶ ಹಾಗೂ ಶೋಭಾಯಾತ್ರೆ ಜರುಗಲಿದೆ.ಈ ಕಾರ್ಯಕ್ರಮ ನಿಮಿತ್ಯ ಸೋಮವಾರ ಎಲ್ಲ ಮಠಾದೀಶರು ನೇತೃತ್ವದಲ್ಲಿ ಎಲ್ಲ ಸಮುದಾಯದ ಹಿಂದೂಗಳ ಮನೆಗೆ ತೆರಳಿ ಕಾರ್ಯಕ್ರಮದ ಸಂಪರ್ಕ ಅಭಿಯಾನ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು ಸಂಸ್ಥಾನ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಅರ್ಜುಣಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಕುಮಸಗಿಯ ಶಿವಾನಂದ‌ ಮಹಾಸ್ವಾಮಿಗಳು ನೇತೃತ್ವದಲ್ಲಿ ಪಟ್ಟಣ ಪ್ರತಿಯೊಂದು ನಗರಗಳಿಗೆ ತೆರಳಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನಿಸಿದರು.ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮುಖಂಡ ಜಿ.ಸಿ. ಪಷುಪತಿಮಠ ಮಾತನಾಡಿ, 29 ರಂದು ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಿಮಿತ್ಯ ಶೋಭಾಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಯಲ್ಲಿ ಹಿಂದೂ ಧರ್ಮದ ಎಲ್ಲ ಸಮಾಜದ ಸಾದು ಸಂತರ, ಮಹಾನ ನಾಯಕರ, ಹೋರಾಟಗಾರ ಭಾವ ಚಿತ್ರಗಳೊಂದಿಗೆ ಶೋಭಾಯಾತ್ರೆ ಮಾಡಲಾಗುವದು. ಸೋಮವಾರ ಎಲ್ಲ ಸ್ವಾಮಿಜಿಗಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಸಂಪರ್ಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಭಾನುವಾರ ಅಮವಾಸ್ಯೆಯ ನಿಮಿತ್ತ ಇಲ್ಲಿಯ ಸಮೀಪದ ಯಲಗೂರುದ ಯಲಗೂರೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಕೊಂಡರು. ಅಮವಾಸ್ಯೆಯ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ, ಭಾನುವಾರ ಅಮವಾಸ್ಯೆ ಬಂದರೆ ಭಕ್ತರ ಸಂಖ್ಯೆ ಇನ್ನೂ ಹೆಚ್ಚು.ಬೆಳಿಗ್ಗೆಯಿಂದಲೇ ಕೃಷ್ಣಾ ತಟದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಚಂದ್ರಗಿರಿ ಚಂದ್ರಮ್ಮಾ ದೇವಿ, ಯಲಗೂರದ ಹನುಮಾನ ದೇವಸ್ಥಾನ ಭಕ್ತರ ಸಂಖ್ಯೆ ಹೆಚ್ಚಿತ್ತು. ಎಲ್ಲೆಡೆಯೂ ಜಾತ್ರೆಯೇ ನೆರೆದಿತ್ತು. ಕಾಯಿ, ಕರ್ಪೂರ, ಹಾರ ಖರೀದಿಯ ಭರಾಟೆ ಜೋರಾಗಿತ್ತು. ಯಲಗೂರದಲ್ಲಿ ಬಂದ ಭಕ್ತರಿಗೆ ಅನ್ನ ಸಾಂಬಾರು, ಶಿರಾ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ೧೪ ಕ್ಷಿಂಟಲ್ ಅಕ್ಕಿಯ ಅನ್ನ ಮಾಡಲಾಗಿತ್ತು ಎಂದು ಯಲಗೂರೇಶ್ವರ ಅನ್ನದಾಸೋಹ ಕಮಿಟಿಯ ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ ಸುತ್ತಲಿನ ಪ್ರದೇಶವನ್ನೆಲ್ಲಾ ಸ್ವಚ್ಛಗೊಳಿಸಲಾಗಿತ್ತು.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಪಟ್ಟಣದ ಹೆಸ್ಕಾಂ ಕಚೇರಿ ಹತ್ತಿರದ ವಿದ್ಯುತ್ ಗುತ್ತಿಗೆದಾರರ ಕಾರ್ಯಾಲಯದಲ್ಲಿ ಭಾನುವಾರ ನೂತನ ತಾಲ್ಲೂಕು ಸಮಿತಿ ರಚನೆ ಮಾಡಲಾಯಿತು. ಪದಾಧಿಕಾರಿಗಳಾಗಿ ಅಬ್ಬಾಸಲಿ ಮಣ್ಣೂರ(ಕೇಂದ್ರ ಸಲಹಾ ಸಮಿತಿ ಸದಸ್ಯ), ರಾಜಶೇಖರ ಹಳ್ಳದಗೆಣ್ಣೂರ( ಅಧ್ಯಕ್ಷರು), ಸಿದ್ಧನಗೌಡ ಬಿರಾದಾರ, ಅಬ್ದುಲ್‌ಸತ್ತಾರ ಮುಲ್ಲಾ(ಉಪಾಧ್ಯಕ್ಷರು), ಬಂದಗೀಸಾಬ್ ಡೆಂಗಿ (ಕಾರ್ಯದರ್ಶಿ), ಬಸಪ್ಪ ಬೊಮ್ಮನಳ್ಳಿ(ಸಹಕಾರ್ಯದರ್ಶಿ), ಅಬ್ದುಲ್‌ಮಜೀದ್ ಮಳಖೇಡ (ಸಂಘಟನಾ ಕಾರ್ಯದರ್ಶಿ), ಲಕ್ಷಿö್ಮÃ ಸತೀಶಕುಮಾರ ಪಾಟೀಲ(ಖಜಾಂಚಿ) ಆಯ್ಕೆಯಾದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ವಿದ್ಯಾನಗರ ೪ನೇ ಕ್ರಾಸ್‌ನಲ್ಲಿ ಶನಿವಾರ ಹಾಡಹಗಲೇ ಮನೆಯೊಂದರ ಬೀಗ ಮುರಿದು ಕಳ್ಳರು ಅಂದಾಜು ೮೦ಗ್ರಾಂ ಬಂಗಾರ, ೧೦೦ಗ್ರಾಂ ಬೆಳ್ಳಿ ಹಾಗೂ ೧ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.ಸಿದ್ದಲಿಂಗಯ್ಯ ಹಿರೇಮಠ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಳಿಗ್ಗೆ ಮನೆಗೆ ಬೀಗ ಹಾಕಿ ಕುಟುಂಬದ ಸದಸ್ಯರೆಲ್ಲ ಅಮಾವಾಸ್ಯೆ ನಿಮಿತ್ಯ ದೇವರಿಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಪಾಟಿನಲ್ಲಿದ್ದ ಅಂದಾಜು ೮೦ಗ್ರಾಂ ಬಂಗಾರ, ೧೦೦ಗ್ರಾಂ ಬೆಳ್ಳಿ ಹಾಗೂ ೧ಲಕ್ಷ ನಗದು ದೋಚಿ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.ಪಿಎಸ್‌ಐ ಆರೀಫ್ ಮುಷಾಪುರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಬೇಕು ಎನ್ನುವ ದಿಸೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚುಲು ಸ್ವಾನದಳ ಮತ್ತು ಬೆರಳಚ್ಚು ವಿಭಾಗಕ್ಕೆ ಬರಲು ಮಾಹಿತಿ ನೀಡಲಾಗಿದೆ ಎಂದು ಪಿಎಸ್‌ಐ ಆರೀಫ್ ಮುಷಾಪುರಿ ಮಾಹಿತಿ ನೀಡಿದ್ದಾರೆ. ಈ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಭಾರತದಲ್ಲಿರುವ ಯುವ ಸಮೂಹ ಭಾರತ ದೇಶದ ಬೆಳೆವಣಿಗೆಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಒಬ್ಬ ವಿದ್ಯಾರ್ಥಿ ಬೆಳವಣಿಗೆ ಗಣಿತ ಅಷ್ಟೇ ಮುಖ್ಯ ಅಲ್ಲ. ಅದರ ಜೊತೆಗೆ ಸಂಸ್ಕಾರಯುತ ಮನೋಭಾವ ಇರಬೇಕು ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹೇಳಿದರು.ಸಿಂದಗಿ ಪಟ್ಟಣದ ಕಲಕೇರಿ ರಸ್ತೆಯ ಹೊರ ವಲಯದಲ್ಲಿರುವ ಎಲೈಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಎಲೈಟ್ ಯುವೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಸಿರು ಕ್ರಾಂತಿಯು ಭಾರತದಂತಹ ದೇಶಗಳಲ್ಲಿ ಆಹಾರ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ, ದೇಶವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯನ್ನಾಗಿಸಿದೆ, ಹಸಿವು ನೀಗಿಸಿದೆ, ರೈತರ ಆದಾಯ ಹೆಚ್ಚಿಸಿದೆ ಮತ್ತು ಕೃಷಿಯನ್ನು ಆಧುನಿಕ ಕೈಗಾರಿಕಾ ಪದ್ಧತಿಯಾಗಿ ಪರಿವರ್ತಿಸಿದೆ. ಬದ್ಧತೆಯೇ ಕಾಲೇಜುಗಳಿಗೆ ಶ್ರೀರಕ್ಷೆ. ಸಿಂದಗಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಎಲೈಟ್ ಸಹ ಒಂದು. ಜಗತ್ತಿನ ಆರ್ಥಿಕತೆಗೆ ಬಹು ದೊಡ್ಡ ಶಕ್ತಿ ಎಂದರೆ ಭಾರತ. ಇದಕ್ಕೆ ಕಾರಣ ಯುವ ಶಕ್ತಿ ಎಂದರು.ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು, ಬಸವ ಶರಣರ ತತ್ವದ ಆಧಾರದಲ್ಲಿ ತಮ್ಮ ಬದುಕನ್ನು ನಡೆಸಿದ ಸರಳ ನಾಯಕ ಡಾ.ಭೀಮಣ್ಣ ಖಂಡ್ರೆ ಅವರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಹಮ್ಮಿಕೊಂಡ ಬೀದರನ ಲೋಕ ನಾಯಕ, ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನಲೆಯಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೀಮಣ್ಣ ಖಂಡ್ರೆ ಅವರು ತಮ್ಮ ಬದುಕನ್ನು ಬಡ ಜನತೆಗಾಗಿ ಮೀಸಲಿಟ್ಟಂತವರು. ಕರ್ನಾಟಕದ ಏಕೀಕರಣ ಚಳುವಳಿಯಲ್ಲಿಯೂ ಅವರ ಪಾತ್ರ ಹಿರಿಯದು. ಅವರ ಹೋರಾಟದ ಹೆಜ್ಜೆಗಳು ಈ ಮಣ್ಣಿನಲ್ಲಿ ದಾಖಲಾಗಿವೆ. ಖಂಡ್ರೆ ಅವರು ಸಮಾಜದ ಋಣ ತೀರಿಸಿ ಸಾರ್ಥಕ ಬದುಕನ್ನು ಸಾಗಿಸಿ ಇಂದು ನಮ್ಮನೇಲ್ಲ ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ ಸುಂಬಡ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮೇಲ್ವಿಚಾರಕ ವಿಶ್ವನಾಥ ಸದಲಗೆ ಹೇಳಿದರು.ಪಟ್ಟಣದ ಹೊಸನಗರದ ವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಇತ್ತೀಚೆಗೆ ಜರುಗಿದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಿ:೨೦ ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ಪೂಜೆ ಆರಂಭಗೊಂಡು ನಂತರ ಧಾರ್ಮಿಕಸಭಾ ಜರುಗಲಿದೆ. ಇದರಲ್ಲಿ ಪಟ್ಟಣದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಜಾಲವಾದ ವಲಯ ಮೇಲ್ವಿಚಾರಕ ಸದಾಶಿವಪ್ಪ ಅಂಗಡಿ ಮಾತನಾಡಿ, ಧಾರ್ಮಿಕ ಸಭೆ ಸೇರಿದಂತೆ ಎಲ್ಲ ಪ್ರಾಪಂಚಿಕ ಪ್ರಗತಿದಾಯಕ ಕಾರ್ಯಗಳಲ್ಲಿ ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಪೂಜಾ ವ್ಯವಸ್ಥಾಪನಾ ಸಮಿತಿ ರಚಿಸಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.ಸಮಿತಿ ಅಧ್ಯಕ್ಷ ಈರಣ್ಣ ಒಂಟೆತ್ತಿನ, ಗೌರವ ಅಧ್ಯಕ್ಷರುಗಳಾದ ಗೊಲ್ಲಾಳಪ್ಪ ಚೌಧರಿ, ಪಿ.ಎಸ್.ಮಿಂಚನಾಳ, ಉಪಾಧ್ಯಕ್ಷರುಗಳಾದ ಈರಪ್ಪ ಉಪಳಾಯಿ, ಶಂಕರಗೌಡ ಪಾಟೀಲ, ಸಲಹೆಗಾರರಾದ ಸಿ.ಕೆ.ಕುದರಿ, ಹಸನ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ದಿನಾಂಕ:೦೭.೦೧.೨೦೨೬ರ ಪತ್ರದಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ ರ ೪ನೇ ಪ್ರಕರಣದ ೨ನೇ ಉಪ ಪ್ರಕರಣದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,ವಿಜಯಪುರ ತಾಲ್ಲೂಕಿನ ಐನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆಐನಾಪೂರ ಹಾಗೂ ಬುರಣಾಪೂರ ಗ್ರಾಮಗಳನ್ನು ಮತ್ತು ಜುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಜುಮನಾಳ ಹಾಗೂ ಖತಿಜಾಪೂರ ಗ್ರಾಮಗಳನ್ನು ಒಳಪಡಿಸಿ, ಗ್ರಾಮ ಪಂಚಾಯತಿಗಳನ್ನು ಪುನರ್‌ರಚಿಸಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ.ಈ ಕರಡು ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ:೧೭-೦೧-೨೦೨೬ ರಿಂದ ೨೩-೦೧-೨೦೨೬ರ ಒಳಗಾಗಿ ಅಂತಹ ಆಕ್ಷೇಪಣೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More