ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ತಾಕೀತು
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ೬, ೭ ಮತ್ತು ೮ನೆಯ ವಾರ್ಡಿನಲ್ಲಿ ಸಿಸಿ ಮತ್ತು ಚರಂಡಿ ನಿರ್ಮಿಸುವುದು. ಜೊತೆಗೆ ೬ಲಕ್ಷ ರೂ. ಹಣದಲ್ಲಿ ಭೀಮಾಶಂಕರ ಮಠವನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಎಲ್ಲ ಕಾರ್ಯಗಳಿಗೆ ವಾರ್ಡಿನ ನಾಗರಿಕರು ಸಹಕರಿಸಬೇಕು. ಗುತ್ತಿಗೆದಾರರು ಒಳ್ಳೆಯ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಹಳೆಯ ಬಜಾರ್‌ದಲ್ಲಿ ಪುರಸಭೆ ಕಾರ್ಯಾಲಯದಿಂದ ೨೦೨೫-೨೬ನೆಯ ಸಾಲಿನ ೧೫ನೇ ಹಣಕಾಸಿನ ಯೋಜನೆಯಡಿಯಲ್ಲಿ ಮತ್ತು ೨೦೧೮-೧೯ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿಯಲ್ಲಿ ಹಮ್ಮಿಕೊಂಡ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಿಂದಗಿ ನಗರದಲ್ಲಿ ೩೦ಲಕ್ಷ ರೂ. ಅನುದಾನದ ಕಾಮಗಾರಿಯನ್ನು ೧೫ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನದಲ್ಲಿ ನಾಲ್ಕು ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆಯನ್ನು ಭರಣ ಮಾಡಿದರೆ ನಗರವನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಆದ್ದರಿಂದ ನಗರ ವಾಸಿಗಳು ಸಮಯಕ್ಕೆ ಸರಿಯಾಗಿ ತೆರಿಗೆಯನ್ನು ಭರಣ ಮಾಡಬೇಕು. ಈ ಹಣವನ್ನು ಪುರಸಭೆ ಒಳ್ಳೆಯ ರೀತಿಯಿಂದ ಸದ್ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ೨೩ ವಾರ್ಡಿನ ಸದಸ್ಯರು ಕ್ರಿಯಾಶೀಲವಾಗಿ ಕಾರ್ಯವನ್ನು ನಿರ್ವಹಿಸಿ ವಾರ್ಡ್ಗಳನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಜೆಇ ಅಜರ್ ನಾಟೀಕಾರ ಸದಸ್ಯರಾದ ಹಣಮಂತ ಸುಣಗಾರ, ಭಾಸಾಷಾಬ ತಾಂಬೊಳ್ಳಿ, ರಾಜಣ್ಣ ನಾರಾಯಣಕರ, ಸಿದ್ದು ಮಲ್ಲೇದ, ಚನ್ನಪ್ಪ ಗೋಣಿ, ಸೈಪನ್ ನಾಟೀಕಾರ, ಪ್ರವೀಣ ಕಂಠಿಗೊAಡ, ರಾಜು ಖೇಡ, ಸುನಂದ ಯಂಪುರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಮುತ್ತು ಅರಳಗುಂಡಗಿ ಸೇರಿದಂತೆ ವಾರ್ಡಿನ್ ನಿವಾಸಿಗಳು ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.

