ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯ ತಿಕೋಟಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ, ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ ಎಸ್ ಭೂಸಗೊಂಡ ಆಯ್ಕೆಯಾಗಿದ್ದಾರೆ.
ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿದ್ದ ಯು ಎಸ್ ಕೌಲಗಿ ಇವರು ಸ್ವಯಂ ನಿವೃತ್ತಿ ಪಡೆದ ನಿಮಿತ್ಯ ತೆರವಾದ ಸ್ಥಾನಕ್ಕೆ ಎಂ ಎಸ್ ಭೂಸಗೊಂಡ ಇವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ ಬಿ ದೊರನಳ್ಳಿ ಮಾತನಾಡಿ, ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎಂ ಎಸ್ ಭೂಸಗೊಂಡ ಅವರು, ಹಲವಾರು ವರ್ಷಗಳಿಂದ ಶಿಕ್ಷಕ ಸಂಘಟನೆಯಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಿ ಉತ್ತಮ ಹೆಸರು ಗಳಿಸಿದ್ದಾರೆ. ಆದರ್ಶ ಶಿಕ್ಷಕ ವೇದಿಕೆ ಚಟುವಟಿಕೆಗಳು ಕ್ರೀಯಾಶೀಲವಾಗಿ ನಿತ್ಯ ನಿರಂತರ ನಡೆಯಲು ವೇದಿಕೆ ಉತ್ತಮ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಕ್ರೀಯಾಶೀಲ ಪದಾಧಿಕಾರಿಗಳನ್ನು ನೇಮಿಸಿಕೊಂಡು ಇಡೀ ಜಿಲ್ಲಾದ್ಯಂತ ಶಿಕ್ಷಕಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಆದರ್ಶ ಶಿಕ್ಷಕರ ವೇದಿಕೆ ನೂತನ ಜಿಲ್ಲಾಧ್ಯಕ್ಷ ಎಂ ಎಸ್ ಭೂಸಗೊಂಡ ಮಾತನಾಡಿ, ನನ್ನ ಮೇಲೆ ಭರವಸೆಯಿಟ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದರಿಂದ ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಂಡು ಹುದ್ದೆಗೆ ಘನತೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಿಕೋಟಾ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ, ಶಿಕ್ಷಕರ ಸಂಘಟನೆ ಪ್ರಮುಖರಾದ ಕಬೂಲ್ ಕೊಕಟನೂರ, ಎಂ ಕೆ ಪಾಟೀಲ, ಸುದರ್ಶನ ಜೇವೂರ, ಎಸ್ ಎಸ್ ಪಟ್ಟಣಶೆಟ್ಟಿ, ಎಸ್ ಎನ್ ಕನ್ನೂರ, ಸಂತೋಷ ಕುಲಕರ್ಣಿ, ಮಲ್ಲಿಕಾರ್ಜುನ ಕಣಬೂರಮಠ, ಶಂಕರ ಶಿವಶಂಕರ ಖಂಡೇಕರ ಸೇರಿದಂತೆ ಶಿಕ್ಷಕ ಸಂಘಟನೆ ಪ್ರಮುಖರು, ಶಿಕ್ಷಕರು ಉಪಸ್ಥಿತರಿದ್ದರು.
ಫೋಟೋ: ಆದರ್ಶ ಶಿಕ್ಷಕ ವೇದಿಕೆ ಜಿಲ್ಲಾಧ್ಯಕ್ಷರಾಗಿ ಎಂ ಎಸ್ ಭೂಸಗೊಂಡ ಇವರನ್ನು ಅವಿರೋಧ ಆಯ್ಕೆ ಮಾಡಲಾಯಿತು.