Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಕ್ಕಮಹಾದೇವಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆತ್ಮರಕ್ಷಣಾ ತರಬೇತಿ ಶಿಬಿರಗಳು ಮಹಿಳೆಯರಿಗೆ ಅಗತ್ಯ ಕೌಶಲ್ಯ ಮತ್ತು ಆತ್ಮವಿಶ್ವಾಸ ನೀಡುತ್ತವೆ ಎಂದು ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯ ಶಿವಯೋಗಪ್ಪ ಮಾಡ್ಯಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಿಎಂ ಉಷಾ ಯೋಜನೆ ಅಡಿಯಲ್ಲಿ ‘ಆತ್ಮ ರಕ್ಷಣಾ ತರಬೇತಿ ಶಿಬಿರವನ್ನು’ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಸಮಾಜದಲ್ಲಿ ಮಹಿಳೆಯರು ಏಕಾಂಗಿಯಾಗಿ ಸಂಚರಿಸುವ ಸ್ವಾತಂತ್ರ‍್ಯವನ್ನು ಪಡೆದಿದ್ದರೂ, ಕೆಲ ಅಸಾಮಾಜಿಕ ಅಂಶಗಳು ಮತ್ತು ದುಷ್ಟರ ಕಾಟದಿಂದ ತಪ್ಪಿಸಿಕೊಳ್ಳಲು ಆತ್ಮರಕ್ಷಣಾ ತರಬೇತಿ ಶಿಬಿರಗಳು ಅತ್ಯಂತ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀಡುತ್ತವೆ. ಆದ್ದರಿಂದ ಇಂತಹ ತರಬೇತಿ ಶಿಬಿರಗಳು ಎಲ್ಲಾ ಮಹಿಳೆಯರಿಗೆ ದೊರೆಯುವಂತಾಗುವುದು ಅತ್ಯವಶ್ಯಕ. ಅಂದಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಣ ಅಧ್ಯಯನ ಮತ್ತು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನಿಂದ ಡಾ ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ದಿಕ್ಷೆಯನ್ನು ಪಡೆದ ಪವಿತ್ರ ಭೂಮಿ ನಾಗಪುರ ಕ್ಕೆ ಹೋಗುತ್ತಿರುವ ಯಾತ್ರಾರ್ಥಿಗಳು ಭಾರತ ರತ್ನ , ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನದ ಸಿದ್ಧಾಂತಗಳನ್ನು , ಆದರ್ಶಗಳನ್ನು ಪಾಲಿಸಬೇಕು, ಆ ಪುಣ್ಯ ಭೂಮಿಯನ್ನು ಸ್ಪರ್ಶಿಸುವವರು ಪುಣ್ಯವಂತರೆಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯ್ಕೆಗೊಂಡು ನಾಗಪುರ ದೀಕ್ಷಾ ಭೂಮಿ ಗೆ ತೆರಳುತ್ತಿರುವ ಬಸ್ಸ್ ಗೆ ಯುವ ನಾಯಕ ಸತ್ಯಜೀತ್ ಪಾಟೀಲ್ ಅವರು ಚಾಲನೆ ನೀಡಿ ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸಿ ಎಸ್ ಗಿಡಪ್ಪಗೋಳ, ಕಲ್ಲು ದೇಸಾಯಿ, ಆರ್ ಬಿ ಪಕಾಲಿ, ತಾನಾಜಿ ನಾಗರಾಳ, ಶಿವಾನಂದ ಅಂಗಡಿ, ದಶರಥ ಈಟಿ, ಮಾರುತಿ ಕುದರಿ , ಶೇಖು ಈಟಿ, ಸಚಿನ್ ಈಟಿ, ಮುತ್ತು ಕೊರ್ತಿ, ಯಮನೂರಿ ಮಾದರಿ, ಮಲ್ಲು ಪೂಜಾರಿ, ತಾಲೂಕಿನ ಡಿಎಸ್ ಎಸ್ ಮುಖಂಡರು ಹಾಗೂ ತಹಶೀಲ್ದಾರ್ ಸಂತೋಷ ಮ್ಯಾಗೇರಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಮದ್ದೀನ್,…
ಸಚಿವ ಶಿವಾನಂದ ಪಾಟೀಲರನ್ನು ಸನ್ಮಾನಿಸಿದ ರೈತರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿ ನಗರದಲ್ಲಿ ಖಾಸಗಿ ಹಿಡಿತದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡ ಕಾರಣ ರೈತರು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಇವರನ್ನು ಸನ್ಮಾನಿಸಿದರು.ಮಂಗಳವಾರ ನಗರದಲ್ಲಿರುವ ಸಚಿವರ ಗೃಹ ಕಛೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಚುನ್ನಪ್ಪ ಪೂಜಾರಿ ಬಣ) ಕೊಲ್ಹಾರ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ರೈತರು ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕ ಅಧ್ಯಕ್ಷ ಸೋಮು ಬಿರಾದಾರ, ಬೆಳಗಾವಿ ನಗರದಲ್ಲಿ ಜೈಕಿಸಾನ್ ಹೆಸರಿನಲ್ಲಿ ನಡೆಯುತ್ತಿದ್ದ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಡೆಯುತ್ತಿತ್ತು. ಖಾಸಗೀಯವರ ಕಪಿಮುಷ್ಟಿಯಲ್ಲಿ ಸಿಲುಕಿ ರೈತರು ತಾವು ಪರಿಶ್ರಮದಿಂದ ಬೆಳೆದಿದ್ದ ತರಕಾರಿ ಬೆಳೆಯನ್ನು ವರ್ತಕರ ಮೋಸದ ದರಕ್ಕೆ ಮಾರುವ ದುಸ್ಥಿತಿ ಇತ್ತು ಎಂದು ಖಾಸಗಿ ತರಕಾರಿ ಮಾರುಕಟ್ಟೆ ಸೃಷ್ಟಿಸಿದ್ದ ಸಂಕಷ್ಟದ ದುಸ್ಥಿತಿಯನ್ನು ವಿವರಿಸಿದರು.ತಮ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2024-25ನೇ ಸಾಲಿನಲ್ಲಿ 25.59 ಲಕ್ಷ ಲಾಭ ಮಾಡಿ,ಶೇಕಡಾ 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.ಅವರು ರವಿವಾರದಂದು ನಗರದ ವನಶ್ರೀ ಭವನದಲ್ಲಿದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಲಾಭದಾಯಕವಾದ ಬದುಕನ್ನು ರೂಪಿಸಿಕೊಳ್ಳಲು ಸಹಕರಿಸುತ್ತಿದೆ ಎಂದು ಹೇಳಿದರು.ನಿರ್ದೇಶಕ ಎಸ್ ಎಸ್ ಶಿರಾಡೋಣ ಮಾತನಾಡಿ,ನಮ್ಮ ಸೊಸೈಟಿಯಲ್ಲಿ ಗ್ರಾಹಕರ ಧರ್ಮ, ಲಿಂಗ ಮತ್ತು ಜಾತಿಯನ್ನು ಲೆಕ್ಕಿಸದೇ, ಸದಸ್ಯತ್ವವು ಎಲ್ಲರಿಗೂ ಮುಕ್ತವಾಗಿದೆ. ಇದು ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ಸೊಸಾಯಿಟಿ ಆಗಿದೆ ಎಂದು ಹೇಳಿದರು.ನಿರ್ದೇಶಕರಾದ ಬಿ ಜಿ ಪಾಟೀಲ ಹಲಸಂಗಿ, ಎಸ್ ಎಸ್ ಶಿರಾಡೋಣ, ಜಿ ಟಿ ಪಾಟೀಲ, ಎ ಎಸ್ ಹೊಸಮನಿ, ಎಸ್ ಡಿ ಶಹಾಪೇಟಿ,ಎಸ್ ಸಿ…
ಇಂದು (ಅಕ್ಟೋಬರ-೧, ಬುಧವಾರ) “ರಾಷ್ಟ್ರೀಯ ಹಿರಿಯ ಜೀವಿಗಳ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಾರ್ಕ ಟ್ವೇನ್ ಅವರು “ ಔಟಜ ಚಿge is ಟಿoಣ ಚಿ ಜeಜಿeಚಿಣ, buಣ ಚಿ viಛಿಣoಡಿಥಿ. ಓoಣ ಚಿ ಠಿuಟಿishmeಟಿಣ, buಣ ಚಿ ಠಿಡಿiviಟeಜge” ಎಂದು ಹೇಳಿದ್ದಾರೆ. ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು-ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ ಸದಾ ಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ಎಂದರೆ ಅವಳೇ ತಾಯಿ. ಕೂಲಿ-ನಾಲಿಯನ್ನಾದರೂ ಮಾಡಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಬದುಕಿಗೊಂದು ಆಸರೆ ಕಲ್ಪಿಸಿ ಅವರು ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳನ್ನಾಗಿಸಲು ಯಾವಾಗಲೂ ಚಿಂತಿಸುತ್ತಿರುವ ತಂದೆ-ಪೋಷಕರ ಪಾತ್ರ ಅನನ್ಯವಾದುದು. “ಏನೆಲ್ಲ ಮರೆತರು ತಮ್ಮ, ಹಡೆದವರ ನೀ ಮರಿಬ್ಯಾಡ. ಉಪಕಾರ ತೀರಿಸಬೇಕು ಈ ಮಾತು ತಿಳಿದು ನೋಡು” ಎಂಬ ಭಜನಾ ಪದದ ಹಿಂದಿನ…
ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ.’ ಎನ್ನುವ ಇಂಗ್ಲೀಷ್ ನುಡಿಯಂತೆ ನಾವು ಸಿದ್ಧವಾಗುವವರೆಗೂ ಪ್ರಪಂಚವು ನಮಗಾಗಿ ಕಾಯುವುದಿಲ್ಲ. ಅದು ಬಾಗಿಲು ಬಡೆಯುವದರೊಳಗಾಗಿ ನಾವು ಸಿದ್ಧರಾಗಿರಬೇಕು. ನಾವು ಓದಿದ ಡಿಗ್ರಿಗಳು ಏನೇ ಆಗಿರಬಹುದು. ಅವು ನಮ್ಮನ್ನು ಉಳಿಸುವುದಿಲ್ಲ. ಆದರೆ ನಮಗೆ ನಮ್ಮ ಬಗ್ಗೆ ಇರುವ ಅರಿವು ನಮ್ಮನ್ನು ಮೇಲಕ್ಕೆತ್ತರಿಸುತ್ತದೆ. ಗಾಳಿಯನ್ನು ತಡೆಯೋರು ಯಾರೂ ಇಲ್ಲ. ಹಾಗೆಯೇ ಸ್ವ ಅರಿವನ್ನು ಚೆನ್ನಾಗಿ ತಿದ್ದಿ ತೀಡಿ ಟ್ರಿಮ್ ಮಾಡಿದರೆ ನಮ್ಮನ್ನು ತಡೆಯೋರು ಯಾರೂ ಇಲ್ಲ. ಜಗದ ಯಾವ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸ್ವ ಅರಿವಿಗೆ ಯಾವುದೇ ತರಗತಿಗಳು ಬೇಕಿಲ್ಲ. ಇದನ್ನು ಶಾಲೆ ಕಾಲೇಜುಗಳಲ್ಲಿ ಕಲಿಸಲಾಗುವುದಿಲ್ಲ. ಇದಕ್ಕೆ ಬೇಕಿರುವುದು ನಂದಾದೀಪದಂತೆ ಉರಿಯುವ ತುಡಿತ. ಜೋರಾಗಿ ಮಾತನಾಡುವವನು ಇತರರ ಮೇಲೆ ದಬ್ಬಾಳಿಕೆ ಮಾಡುವವನು ಬಲಿಷ್ಢನಲ್ಲ. ಮೌನವಾಗಿದ್ದು ತನ್ನ ಬಗ್ಗೆ ತಾನು ತಿಳಿದು ತನ್ನನ್ನು ತಾನೇ ತಿದ್ದಿಕೊಳ್ಳುವವನು ಬಲಿಷ್ಠ. ನಿನ್ನ ಬಿಟ್ಟು ನಿನ್ನ ಏಳ್ಗೆಯನ್ನು ತಡೆಯುವವರು ಯಾರೂ ಇಲ್ಲ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ ನೇಯ ಶತಮಾನದ ಶರಣರು ಜ್ಞಾನ ದಾಸೋಹ ಮತ್ತು ಶರಣ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಜಾತಿ, ಮತ, ಪಂಥಗಳೆಂಬ ಭೇದವನ್ನು ತೊಲಗಿಸಿ, ಜನರಲ್ಲಿ ಒಗ್ಗಟ್ಟು, ಸಮನ್ವಯ ಭಾವ, ಸಮಾನತೆ, ಧರ್ಮ ಸಹಿಂಷ್ಣುತೆ ಮತ್ತು ಸಮಷ್ಠಿ ಭಾವದೊಂದಿಗೆ ಬಾಳಿ ಬದುಕಿದವರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ, ಮೌಢ್ಯತೆ, ಅನಿಷ್ಟಗಳನ್ನು ಹೊಡೆದೋಡಿಸಿ, ಜನರಲ್ಲಿ ಅಧ್ಯಾತ್ಮಿಕ ಅನುಭಾವವನ್ನು ಮೂಡಿಸಿದರು ಎಂದು ಅಧ್ಯಾಪಕ ಗುರುಬಸಯ್ಯ ಹಿರೇಮಠ ಅಭಿಪ್ರಾಯಪಟ್ಟರು.ಅವರು ನಗರದ ಸೇನಾ ನಗರದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜರುಗಿದ “ದಾನದ ಮಹತ್ವ” ವಿಷಯ ಕುರಿತ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.ತನು-ಮನ ಮತ್ತು ಶುದ್ಧಭಾವದಿಂದ ಮಾಡಿದ ದಾನವು ಸಮಾಜಮುಖಿ, ಸಾಮಾಜಿಕ ಕಾರ್ಯ, ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅನ್ನ ಸಂತರ್ಪಣೆಗಾಗಿ ಮತ್ತು ಸತ್ಪಾತ್ರಕ್ಕೆ ಸಲ್ಲುತ್ತಿದ್ದರೆ ಆ ದಾನವು ಅರ್ಥಪೂರ್ಣವಾಗುತ್ತದೆ. ಬಸವಾದಿ ಶರಣರು ಸಮಾಜೋಧ್ಧಾರಕ, ಸರ್ವಧರ್ಮ, ಸಮನ್ವಯತೆ ಮತ್ತು ಸಮಾನತೆಯ ಸಂದೇಶ ಸಾರಿದರು. ಯಾವುದೇ ವರ್ಗ, ವರ್ಣ, ಲಿಂಗಗಳ ಭೇದವಿಲ್ಲದೇ ಸರ್ವ ಮಾನವ ಶಕ್ತಿಗಳ…
ಸಾಮಾಜಿಕ-ಆರ್ಥಿಕ ಸಮೀಕ್ಷೆ ಯಾರ ವಿರುದ್ಧವೂ ಅಲ್ಲ | ಸಿಎಂ ಸಿದ್ದರಾಮಯ್ಯ ಸಮರ್ಥನೆ | ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹಿಷ್ಕಾರಕ್ಕೆ ಕರೆ ನೀಡಿದ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.ನಮ್ಮ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಹೊರಗೆ ಬಂದು ನಮ್ಮ ಸಮೀಕ್ಷೆಯನ್ನು ಬಹಿಷ್ಕರಿಸುವಂತೆ ಕರೆನೀಡುವ ಮೂಲಕ ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಮೀಕ್ಷೆ ಯಾವುದೇ ಒಂದು ಜಾತಿ-ಧರ್ಮಗಳಿಗೆ ಸೀಮಿತವಾದುದಲ್ಲ. ಇದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಯಾರ ವಿರುದ್ಧವೂ ಅಲ್ಲ, ಇದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾಗ್ಯಲಕ್ಷ್ಮೀ ಯೋಜನೆಯಡಿ ನೊಂದಾಯಿಸಿಕೊಂಡು ಬಾಂಡ್ ಪಡೆದುಕೊಂಡ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಪಾವತಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್-೩೧ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಅರ್ಹ ಫಲಾನುಭವಿಗಳು ಪೂರಕ ದಾಖಲಾತಿಗಳಾದ ಮೂಲ ಭಾಗ್ಯಲಕ್ಷ್ಮೀ ಪ್ರಮಾಣ ಪತ್ರಗಳು ಕನ್ನಡ ಮತ್ತು ಇಂಗ್ಲಿಷ್ ಭಾಗ ಅಥವಾ ಪೋಷಕರ ವಿಮೆಯನ್ನು ಕ್ಲೇಮ್ ಮಾಡಿದ್ದರೆ ಕನ್ನಡ ಭಾಗ ಅಥವಾ ಬಾಂಡ್ ಕಳೆದುಕೊಂಡಲ್ಲಿ ಎಫ್‌ಆರ್‌ಐ ಪ್ರತಿಯೊಂದಿಗೆ ಸಿಡಿಪಿಓ ರವರಿಂದ ದೃಢೀಕರಿಸಿದ ಪ್ರಮಾಣ ಪತ್ರದ ಝೇರಾಕ್ಸ್ ಪ್ರತಿ. ಶಿಕ್ಷಣ ಇಲಾಖೆಯಿಂದ ಅಂಗೀಕೃತವಾಗಿರುವ ಶಾಲೆಯಿಂದ ನೀಡಲಾದ ಇತ್ತೀಚಿನ ಅಧ್ಯಯನ ಪ್ರಮಾಣ ಪತ್ರ.ಜನನ ಮತ್ತು ಮರಣಗಳ ರಿಜೆಸ್ಟ್ರಾರ್ ನೀಡಿದ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಕುಟುಂಬವು ೩ ಮಕ್ಕಳನ್ನು ಹೊಂದಿದ್ದರೆ, ತಾಯಿ ಅಥವಾ ತಂದೆ ಕುಟುಂಬ ಯೋಜನೆ ವಿಧಾನಕ್ಕೆ ಒಳಗಾಗಿರಬೇಕು.ಹೆಣ್ಣು ಮಗು, ತಂದೆ ಮತ್ತು ತಾಯಿಯ ಆಧಾರ ಪ್ರತಿ, ಹೆಣ್ಣು ಮಗುವಿನ ಬ್ಯಾಂಕ್ ಪಾಸಬುಕ್ ನಕಲು, ಹೆಣ್ಣು ಮಗುವಿನ…
ರಾಣಿ ಚೆನ್ನಮ್ಮ ವಿವಿ ಯಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರಕೇಂದ್ರ, ತೊರವಿಯಲ್ಲಿ ವಿಶ್ವ ಪ್ರವಾಸೋಧ್ಯಮ ದಿನ ಮತ್ತು ಎಂ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಅವರು ಪ್ರವಾಸೋಧ್ಯಮ ಇಲಾಖೆಯಲ್ಲಿ ಇದ್ದ ಅವಕಾಶಗಳ ಬಗ್ಗೆ ಹಾಗೂ ಇಂದಿನ ವಿಜಯಪುರದ ಐತಿಹಾಸಿಕ ಸ್ಮಾರಕಗಳು, ಕಲೆ, ಮತ್ತು ಸಾಹಿತ್ಯದ ಕುರಿತು ಮಾಹಿತಿ ನೀಡಿ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ಹೇಳಿದರು.ಶಾಸ್ತ್ರೀಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ಥಳೀಯ ಮುಖ್ಯಸ್ಥರಾದ, ಎಸ್.ಎಂ.ಗಂಗಾಧರಯ್ಯ ಅವರು ಮಾತನಾಡಿ, ಆದಿಲ್ ಶಾಹಿ ಕಾಲವು ಅಮೋಘ ಇತಿಹಾಸವನ್ನು ಹೊಂದಿದ್ದು ಶ್ರೀಮಂತಿಕೆಗೆ ಹೆಸರಾಗಿತ್ತು, ಅಂದಿನ ಸ್ಮಾರಕ ಹಾಗೂ ಆಡಳಿತ ಸುಧಾರಣೆಗಳ ಬಗ್ಗೆ ಕೈಗೊಂಡ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಸಂಯೋಜಕರು ಹಾಗೂ ಸಹ ಪ್ರಾಧ್ಯಾಪಕರಾದ…
