ನೂತನ ವಿಜಯಪುರ ಸೌಹಾರ್ದ ಸಹಕಾರಿ ಒಕ್ಕೂಟಕ್ಕೆ ಅವಿರೋಧ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೂತನ ವಿಜಯಪುರ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿ ಸಂಜಯ ಪಾಟೀಲ (ಕನಮಡಿ) ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ ಕವಟಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಸಿ.ಕುದಾಪುರ ಪ್ರಕಟಿಸಿದರು.
ಶನಿವಾರ ನಡೆದ ಸಭೆಯಲ್ಲಿ ವಿಜಯಪುರ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ್,
ಸುರೇಶ ಬಿರಾದಾರ್,
ಸಿದ್ದು ಮಲ್ಲಿಕಾರ್ಜುನಮಠ, ಅರುಣಮಠ,
ಮೋನೇಶ ಪತ್ತಾರ,
ಸತೀಶ ಶಿಂತ್ರೆ,
ವಿವೇಕಾನಂದ ಶಿರೋಳ್ಕರ್, ಯಮನಪ್ಪ ಸಾತಿಹಾಳ್ (ವಿಜಯಪುರ ಗ್ರಾಮಾಂತರ),
ಭಾಲಚಂದ್ರ ಮುಂಜಾನೆ (ಬಸವನ ಬಾಗೇವಾಡಿ )
ರಾಜು ಹಂಚಾಟೆ
( ಮುದ್ದೇಬಿಹಾಳ ), ಆರ್.ಡಿ.ಕುಲಕರ್ಣಿ (ಸಿಂದಗಿ), ಚಂದ್ರಕಾಂತ ಪಾಟೀಲ (ಚಡಚಣ ತಾ. ಇಂಡಿ),
ಮಲಕಪ್ಪ ರೊಟ್ಟಿ (ತಾಂಬಾ, ಇಂಡಿ) ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನೆ ಕಾರ್ಯದರ್ಶಿ ದೀಪಕ ಶಿಂತ್ರೆ ಮತ್ತು ಪ್ರಧಾನ ಕಾರ್ಯದರ್ಶಿ ಪರಶ್ರಾಮ ಚಿಂಚಲಿ ಉಪಸ್ಥಿತರಿದರು .

