ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಜಿಟಲ್ ವೇದಿಕೆಗಳು ಪತ್ರಿಕೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದು, ಜಗತ್ತಿನ ಪ್ರತಿಯೊಂದು ಘಟನೆಯು ಕ್ಷಣಾರ್ಧದಲ್ಲಿ ಅಂಗೈ ತಲುಪುತ್ತಿದೆ ಎಂದು ಪ್ರೋ. ಪವನಕುಮಾರ ಮಹೇಂದ್ರಕರ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನ.೧೪ ರಂದು ಹಮ್ಮಿಕೊಳ್ಳಲಾಗಿದ್ದ ‘ಡಿಜಿಟಲ್ ವೇದಿಕೆಗಳು ಮತ್ತು ಪತ್ರಿಕೋದ್ಯಮದಲ್ಲಿ ಅವುಗಳ ಪಾಮುಖ್ಯತೆ’ ಎಂಬ ವಿಷಯದ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಪತ್ರಿಕೋದ್ಯಮದ ವ್ಯಾಪ್ತಿ ಇಂದು ವಿಶಾಲವಾಗಿದೆ. ಇದು ಡಿಜಿಟಲ್ ಯುಗ, ಮಾಹಿತಿ ತಂತ್ರಜ್ಞಾನದ ಯುಗ ಎಲ್ಲ ಮಾಹಿತಿಗಳು ನಮ್ಮ ಬೆರಳ ತುದಿಯಲ್ಲಿಯೇ ಸಿಗುತ್ತವೆ. ಯುವ ಪತ್ರಕರ್ತರು ವಿದ್ಯಾರ್ಥಿ ದೆಸೆಯಿಂದಲೇ ನವ ಮಾಧ್ಯಮಗಳು ಅಂದರೆ ಡಿಜಿಟಲ್ ವೇದಿಕೆಗಳನ್ನು ಬಳಸುವುದನ್ನು ಕಲಿತುಕೊಳ್ಳಬೇಕು ಎಂದರು.
ವೆಬ್ ಪುಟಗಳು, ಯೂಟ್ಯೂಬ್, ಫೇಸ್ಬುಕ್, ವಾಟ್ಸಪ್ಪ್, ಬ್ಲಾಗ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ನವ ಮಾಧ್ಯಮಗಳನ್ನು ಪತ್ರಿಕೋದ್ಯಮದಲ್ಲಿ ಬಳಕೆ ಮಾಡಿಕೊಂಡು ಆನ್ಲೈನ್ ಪತ್ರಿಕೋದ್ಯಮ ಜಗತ್ತನ್ನು ಚಿಕ್ಕದಾಗಿಸಿದೆ. ಇಂದು ಆನ್ಲೈನ್ ಪತ್ರಿಕೋದ್ಯಮ ಸಾಂಪ್ರದಾಯಿಕ ಮಾಧ್ಯಮಗಳಾದ ಪ್ರಿಂಟ್, ರೇಡಿಯೋ, ಟಿವಿಗಳಿಗೆ ಪೂರಕವಾಗಿ ಹಾಗೂ ಪರ್ಯಾಯವಾಗಿ ಕೆಲಸ ಮಾಡುತ್ತಿವೆ. ನಾವುಗಳು ಕೂಡಾ ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ವೃತ್ತಿ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಈ ಡಿಜಿಟಲ್ ವೇದಿಕೆಗಳು ಪ್ರತಿಯೊಬ್ಬರನ್ನು ಪತ್ರಕರ್ತರನ್ನಾಗಿಸಿವೆ ಹಾಗಾಗಿ ಪತ್ರಿಕೋದ್ಯಮವೂ ಸಹಿತ ಇಂದು ವಿವಿಧ ಕೌಶಲ್ಯಗಳನ್ನು ಬೇಡುವ ವೃತ್ತಿಯಾಗಿ ಬದಲಾಗಿದೆ. ನವ ಮಾಧ್ಯಮಗಳ ನಾವಿನ್ಯತೆ ತಿಳಿದುಕೊಂಡು ವೃತ್ತಿ ಬದುಕನ್ನು ಉತ್ಸಾಹದಿಂದ ಕಳೆಯಬೇಕು ಎಂದರು.
ಈ ವೇಳೆಯಲ್ಲಿ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗವು ಅತ್ಯಂತ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ವೃತ್ತಿ ಬದುಕಿನ ಮಾರ್ಗದರ್ಶನ ಮಾಡುತ್ತಿದೆ. ವಿದ್ಯಾರ್ಥಿಗಳೇ ಮಹಾವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವರದಿ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಗಿ ಕಲಿಗೆಗೆ ಉತ್ತೇಚನ ನೀಡಲು ವಿನೂತನ ಪ್ರಯತ್ನವಾದ ವಿದ್ಯಾರ್ಥಿಗಳಿಗೆ ಸಿದ್ಧ ಪಡಿಸಲಾದ ಟಿ ಶರ್ಟ್ ಬಿಡುಗಡೆ ಮಾಡಲಾಯಿತು ಹಾಗೂ ಇತ್ತೀಚೆಗೆ ಬಿಜಾಪುರ ಆದಿಲ್ ಶಾಹಿ ಬೇಸಿಗೆ ಅರಮೆನ ಹಾಗು ಕುಮಟಗಿ ಕೆರೆಗೆ ಕ್ಷೇತ್ರ ಭೇಟಿ ನೀಡಿದ್ದ ಸಂದರ್ಭದಲ್ಲಿನ ವಿಶೇಷ ವರದಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಮಲಿಕ್ ಎಲ್ ಜಮಾದಾರ, ಡಾ.ತರನ್ನುಮ್ ಜಬೀನ್‌ಖಾನ್, ಡಾ.ರಾಜೇಶ್ವರಿ ಪುರಾಣಿಕ, ಪ್ರೊ.ಐ.ಎಸ್.ಹೂಗಾರ, ಪ್ರೊ.ಶೋಭಾ ರುದ್ರಗೌಡರ್,ಲಕ್ಷಿö್ಮ ಮೇಟಿ ಮಹಾವಿದ್ಯಾಲಯದ ಬೋಧಕರು,ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು ಪ್ರತೀಕ್ಷಾ ನಿಡೋಣಿ ನಿರೂಪಿಸಿದರು. ಕು ಸ್ವಪ್ನ ಪ್ರಾರ್ಥಿಸಿದರು. ಕು ಶಶಿಕಲಾ ವಂದಿಸಿದರುಕುಮಾರಿ ಶ್ರೇಯ,ಸ್ಫೂರ್ತಿ ಅಭಿಪ್ರಾಯ ವ್ಯಕ್ತಪಿಡಿಸಿದರು.

