ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಗೋಲಗೇರಿ ಶ್ರೀ ಸಿದ್ಧರಾಮ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗೋಲಗೇರಿ ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಂಡ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಗುರುರಾಜ ಹುರಕಡ್ಲಿ ಉದ್ಘಾಟಿಸಿದರು.
ಈ ವೇಳೆ ನಿರ್ದೇಶಕರಾದ ಎಚ್.ಬಿ.ಚಿಂಚೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಎಂ.ಪಿ.ಬೀಸೆ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಶ್ರೀಶೈಲ ಜಾಲವಾದಿ, ಗೋಲಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ, ಪಾರ್ಚಾರ್ಯ ಶ್ರೀಮಂತ ಕೆ.ಎಸ್, ವ್ಹಿ.ಟಿ.ಹಿರೇಕುರುಬರ, ಪ್ರಕಾಶ ಓಂಕಾರ, ಶಿವಶಂಕರ ಬಿರಾದಾರ, ಮುಖ್ಯೋಪಾಧ್ಯಾಯ ವೈ.ಎಚ್.ಪೂಜಾರಿ, ಎಸ್.ಎಚ್.ಕುಂಬಾರ, ಪ್ರಕಾಶ್ ನಾಯಕ್,ಪಿ.ಎಂ.ಶೇಖ್, ಜೆ.ಎಸ್.ದೊಡಮನಿ, ಎಸ್.ಕೆ.ಬಿರಾದಾರ, ಎಂ.ಎಸ್.ಚೌಧರಿ, ಡಿ.ಎಸ್.ಹಿರೇಮಠ ಸಿ.ಎಸ್.ಹಿರೇಮಠ ಸೇರಿದಂತೆ ಕ್ಲಸ್ಟರ್‌ನ ಶಿಕ್ಷಕರು ಉಪಸ್ಥಿತರಿದ್ದರು. ಕಿರಿಯ, ಹಿರಿಯ, ಪ್ರೌಢ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಕ್ಲಸ್ಟರ್ ಹಂತದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

