ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಮಕ್ಕಳು ಬಾಲ್ಯದಲ್ಲಿರುವಾಗಲೇ ಅವರಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವುದರಿಂದ ಉನ್ನತ ಸಾಧನೆ ಮಾಡುವ ಮೂಲಕ ದೇಶದ ಅಮೂಲ್ಯ ಸಂಪತ್ತಾಗಲು ಸಾಧ್ಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ (ಸಿಆರ್ ಪಿ) ಬಂದೇನವಾಜ್ ನಾಲತವಾಡ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪ್ರಧಾನಿ,ದೇಶದ ಮೊದಲ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರ ಜಯಂತಿ ಅಂಗವಾಗಿ ಮಕ್ಕಳ ದಿನಾಚರಣೆ ಅಂಗವಾಗಿ ” ಪೋಷಕರು ಹಾಗೂ ಶಿಕ್ಷಕರ ಮಹಾ ಸಭೆ ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲಿ ವಿಶೇಷ ಕೌಶಲ್ಯ ಅಡಗಿರುತ್ತದೆ ಅದನ್ನು ಗುರುತಿಸಿ ಶಿಕ್ಷಕರು ಹೊರ ತರುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಹಾಕೋಣ ಬನ್ನಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ದೇವಕಿ. ಎಲ್. ಪಾಲಕರು ನಿಮ್ಮ ಮಕ್ಕಳ ಏಳಿಗೆಗಾಗಿ ನೀವು, ನಾವು ಸೇರಿಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಬೇಕಾಗಿದೆ. ಅದ್ಕಕಾಗಿ ಪ್ರತಿಯೊಬ್ಬ ಪಾಲಕರು ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ನಿಮ್ಮ ಮಕ್ಕಳು ಶಾಲೆಯಲ್ಲಿ ಯಾವ ರೀತಿಯಲ್ಲಿ ಓದುತ್ತಿದ್ದಾರೆ ಎಂಬುವುದು ತಿಳಿಯಲು ತಾವುಗಳು ಶಾಲೆಗೆ ಬೇಟಿ ನೀಡಿ ಶಿಕ್ಷಕರಿಂದ ತಿಳಿದುಕೊಳ್ಳಬೇಕು ಹಾಗೂ ನಿಮ್ಮ ಕಡೆಯಿಂದ ಕೆಲವು ಸಲಹೆ ಸೂಚನೆಗಳನ್ನು ಕೂಡ ಶಿಕ್ಷಕರಿಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಪರಿಚಯ ಮತ್ತು ಮಕ್ಕಳ ಕಾಯೆದೆಗಳ ಬಗ್ಗೆ ಶಾಕೀರಾ ಬೇಗಂ ತಿಳಿಸಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ವಿತರಣೆ, ರಜಿಯಾ ಬೇಗಂ ಮಾಡಿದರು. ನಿರೂಪಿಸಿದರು ನೀಲಮ್ಮ. ಬಿ, ವಂದಿಸಿದರು. ಸವಿತಾ. ಎಚ್. ಸ್ವಾಗತಿಸಿದರು, ಸವಿತಾ. ಎಮ್, ಕಾವ್ಯ, ಸೇರಿದಂತೆ ಪಾಲಕರು ಮತ್ತು ಪೋಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

