ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮೆಗಾ ಪಿ ಟಿ ಎಂ ಪಾಲಕರ, ಶಿಕ್ಷಕರ ಮಹಾಸಭೆ ಶುಕ್ರವಾರ ನಡೆಯಿತು.
ಚಡಚಣ ಕ್ಷೆeತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯಲ್ಲಿ ಶಾಲೆಯ ಮಕ್ಕಳ 100 ಕ್ಕೂ ಹೆಚ್ಚು ಪಾಲಕ/ಪೋಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಪಾಲಕರೊಂದಿಗೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಿದರು. ಬಿ.ಆರ್.ಪಿ.ಗಳಾದ ಆರ್. ಕೆ. ಕಾಮಗೊಂಡ ನಿಗಡಿ ಅವರು ಬಾಲ ಕಾರ್ಮಿಕ ನಿರ್ಮೂಲನೆಯ ಬಗ್ಗೆ ಮಾತನಾಡಿದರು.
ಸಿ.ಆರ್.ಪಿ. ಸಂಪನ್ಮೂಲ ವ್ಯಕ್ತಿ ಬಿ.ಕೆ. ವಾಘಮೋರೆ ಅವರು ಶಾಲೆಯಲ್ಲಿ ನೂತನವಾಗಿ ಪ್ರಾರಂಭವಾದ ಸ್ಮಾರ್ಟ್ ಕ್ಲಾಸ್ ನ ಬಗ್ಗೆ ಪ್ರಾಯೋಗಿಕವಾಗಿ ಪಾಲಕರೊಂದಿಗೆ ವಿಷಯ ಹಂಚಿಕೊಂಡರು.
ಶಾಲೆಯ ಮುಖ್ಯ ಗುರು ಎಸ್.ಎಸ್. ಪಾಟೀಲ ಅವರು ಮಾತನಾಡಿ ಶಾಲೆಯ ಪ್ರಗತಿ, ಸರಕಾರದ ಸೌಲಭ್ಯಗಳನ್ನು ಕುರಿತು ಪಾಲಕರಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಶಾಲೆಯ ಮಕ್ಕಳೇ ನಿರೂಪಿಸಿ ನಿರ್ವಹಿಸಿದರು.
ನಂತರ ಆಗಮಿಸಿದ ಎಲ್ಲ ಪಾಲಕ/ ಪೋಷಕರಿಗೆ ಸವಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು ಮಧ್ಯಾಹ್ನದ ಅವಧಿಯ ನಂತರ ಪಾಲಕರು ಹಾಗೂ ಮಕ್ಕಳು ಸೇರಿಕೊಂಡು ವಿವಿಧ ಆಟಗಳನ್ನು ಆಡಿ ಸಂತೋಷಪಟ್ಟರು.

