Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬರದ ನಾಡನ್ನು ತಮ್ಮ ಭಗೀರಥ ಪ್ರಯತ್ನದ ಮೂಲಕ ನೀರಾವರಿಗೆ ಒಳಪಡಿಸಿ ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ ಎಂ ಬಿ ಪಾಟೀಲರು ಇಂದು ಕೈಗಾರಿಕಾ ಸಚಿವರಾಗಿ ನಾಡು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವದಾರ ಜೊತೆಗೆ ನೂರಾರು ಕೋಟಿ ಸಿ ಎಸ್ ಆರ್ ಅನುದಾನವನ್ನು ತರುವದರ ಮೂಲಕ ಸರಕಾರಿ ಶಾಲೆಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ. ನಮ್ಮ ಮತಕ್ಷೇತ್ರದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅವುಗಳಿಗೆ ಕಟ್ಟಡ ಮಾತ್ರವಲ್ಲದೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿ ಖಾಸಗಿ ಶಾಲೆಯಲ್ಲಿ ಓದುವ ಮಗು ಸರಕಾರಿ ಶಾಲೆ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ ಕೀರ್ತಿ ಎಂ. ಬಿ ಪಾಟೀಲರಿಗೆ ಸಲ್ಲುತ್ತದೆ. ತುಂಬಾ ಹಳೆಯದಾದ ಕಟ್ಟಡಗಳನ್ನು ನೆ ಲಸಮಗೊಳಿಸಿ ಅಗತ್ಯವಿರುವಲ್ಲಿ ಹೊಸಕಟ್ಟಡ ನಿರ್ಮಿಸಿದ್ದಾರೆ. ಕೆಲವು ಶಾಲಾ ಕಟ್ಟಡಗಳನ್ನು ನವಿಕರಿಸಲಾಗಿದೆ. ಬರೀ ಕಟ್ಟಡ ಮಾತ್ರವಲ್ಲ ಜೊತೆಗೆ ಸ್ಮಾರ್ಟ್ಕ್ಲಾಸ್ ಅಳವಡಿಸಲಾಗಿದೆ. ಕಲಿಕೆಗೆ ಮಾತ್ರ ವಲ್ಲದೇ ಉತ್ತಮ ಆಟದ ಮೈದಾನ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಟದ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಆದರ್ಶ ಆಡಳಿತ, ಆದರ್ಶ ರಾಜ ಹೇಗಿರಬೇಕು ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಜೀವನ ಮೌಲ್ಯಗಳಿರುವದರಿಂದಾಗಿ ವಾಲ್ಮೀಕಿ ರಾಮಾಯಣವು ಒಂದು ಸಾಂಸ್ಕ್ರತಿಕ ಸಂವಿಧಾನವಾಗಿದೆ ಎಂದರೆ ತಪ್ಪಾಗಲಾರದು ಎಂದು ಮಡಿಕೇಶ್ವರ ಪ್ರೌಢಶಾಲೆಯ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾಯಣದಲ್ಲಿರುವ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಾಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದರು.ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಜಗತ್ತಿಗೆ ವಾಲ್ಮೀಕಿ ರಚಿಸಿರುವ ರಾಮಾಯಣವು ಪ್ರತಿಯೊಬ್ಬರೂ ಪರಿವರ್ತನೆ ಮಾಡಿಕೊಳ್ಳಲು ಪೂರಕವಾಗಿದೆ. ಈ ಮಹಾಕಾವ್ಯ ಎಲ್ಲ ಸಮಾಜಕ್ಕೂ ಅಗತ್ಯವಿದೆ. ಪರಿವರ್ತನೆ ಯಾರ ಸ್ವತ್ತಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ,…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅದು ದೇಶದಲ್ಲಿಯೇ ಪ್ರಖ್ಯಾತವಾದ ವಿಶ್ವವಿದ್ಯಾಲಯ. ಆ ವಿಶ್ವವಿದ್ಯಾಲಯದ ತರಗತಿಯ ಕೋಣೆಯೊಂದರಲ್ಲಿ ಅತ್ಯಂತ ತಲ್ಲಿನತೆಯಿಂದ ಬೋರ್ಡಿನ ಮೇಲೆ ಚಿತ್ರ ಒಂದನ್ನು ಅಲ್ಲಿಯ ಪ್ರೊಫೆಸರ್ ಬಿಡಿಸಿದರು. ಪ್ರೊಫೆಸರ್ ಏನು ಹೇಳಬಹುದು ಎಂಬ ಕುತೂಹಲ ಮಕ್ಕಳಿಗೆ ಕಾಡತೊಡಗಿತು. ಅಂತಿಮವಾಗಿ ತಮ್ಮ ಕಾರ್ಯವನ್ನು ಸಂಪೂರ್ಣಗೊಳಿಸಿದ ಪ್ರೊಫೆಸರ್ ಮಕ್ಕಳತ್ರ ತಿರುಗಿ ಈ ಚಿತ್ರವನ್ನು ಗಮನವಿಟ್ಟು ನೋಡಿ ಎಂದು ಹೇಳಿದರು.ಪ್ರೊಫೆಸರ್ ಅವರ ಮಾತನ್ನು ಕೇಳಿದ ವಿದ್ಯಾರ್ಥಿಗಳುಚಿತ್ರದ ಕಡೆ ಗಮನಹರಿಸಿದರು. ದೊಡ್ಡದಾದ ಮರವೊಂದರ ಟೊಂಗೆಯ ಮೇಲೆ ನಾಲ್ಕು ಹಕ್ಕಿಗಳು ಕುಳಿತಿದ್ದವು. ಇದನ್ನೇ ಮಕ್ಕಳು ಪ್ರೊಫೆಸರರಿಗೆ ಹೇಳಿದರು.ವಿದ್ಯಾರ್ಥಿಗಳ ಮಾತನ್ನು ಕೇಳಿದ ಪ್ರೊಫೆಸರ್ ನಗುತ್ತಾ… ಈ ದೊಡ್ಡ ಮರದ ಟೊಂಗೆಯ ಮೇಲೆ ಇರುವ ನಾಲ್ಕು ಹಕ್ಕಿಗಳಲ್ಲಿ ಮೂರು ಹಕ್ಕಿಗಳು ಮೇಲಕ್ಕೆ ಹಾರಿಹೋಗಲು ನಿರ್ಧರಿಸಿದವು. ಹಾಗಾದರೆ ಮರದ ಮೇಲೆ ಎಷ್ಟು ಹಕ್ಕಿಗಳು ಉಳಿದುಕೊಂಡವು? ಎಂದು ಪ್ರೊಫೆಸರ್ ಪ್ರಶ್ನಿಸಿದರು.ಇದೇನು ಮಹಾ ಪ್ರಶ್ನೆ! ಎಂಬಂತೆ ಕೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ನಗಾಡುತ್ತಾ ಒಂದು ಹಕ್ಕಿ ಎಂದು ಒಕ್ಕೊರಲಿನಿಂದ ಉತ್ತರಿಸಿದರು.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ ಪ್ರತಿಯೊಬ್ಬರ ವೃತ್ತಿಪರ ಜೀವನದ ಅವಿಭಾಜ್ಯ ಅಂಶವಾಗಿದೆ. ಯಾವುದೇ ಕ್ಷೇತ್ರದಲ್ಲಿರಲಿ, ಯಶಸ್ಸನ್ನು ಸಾಧಿಸಲು ಕೇವಲ ವಿಷಯಜ್ಞಾನ ಮಾತ್ರ ಸಾಕಾಗದೆ, ಸರಿಯಾದ ರೀತಿಯಲ್ಲಿ ಮಾತನಾಡುವ, ಆಲಿಸುವ ಹಾಗೂ ಅಭಿವ್ಯಕ್ತಗೊಳ್ಳುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ವಿಜಯಪುರದ ನವಬಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ, ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರ, ಮತ್ತು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಮಂಡಳಿಯ ಅನುದಾನದ ಅಡಿಯಲ್ಲಿ ಇತ್ತಿಚಿಗೆ ನಡೆದ “ವೃತ್ತಿ ಕೌಶಲ್ಯವಾಗಿ ಸಂವಹನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಂವಹನ ಕೌಶಲ್ಯಗಳ ಅಭ್ಯಾಸ ಅತ್ಯಂತ ಮುಖ್ಯವಾಗಿದೆ. ಭಾಷೆಯ ಜತೆಗೆ ಹಾವಭಾವ, ಮುಖಚರ್ಯೆ, ಮಾತಿನ ಶೈಲಿ, ಧ್ವನಿಯ ಟೋನ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ಐದು ತಿಂಗಳಿಂದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಪ್ರತಿ ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಎಲ್ಲ ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಯಾವುದೇ ಸಮಯವನ್ನು ಹಾಳು ಮಾಡದೆ ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ರೈತರಿಗೂ ಒಣ ಬೇಸಾಯಕ್ಕೆ 50,000 ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕೊಡಬೇಕೆಂದು ಈ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅಗ್ರಹ ಮಾಡಿದರುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದೇವರ ಹಿಪ್ಪರಗಿ ತಾಲೂಕು ದಂಡಧಿಕಾರಿಗಳಾದ ಪ್ರಕಾಶ ಸಿಂದಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ವಿಪರೀತ ಮಳೆಯಿಂದಾಗಿ ತಾಲೂಕಿನ ಕೃಷಿ ಬೆಳೆಗಳಾದ ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ ದ್ರಾಕ್ಷಿ ದಾಳಿಂಬ್ರಿ ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳಲ್ಲಿ ನೀರು ನಿಂತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶವು ಭವ್ಯ ಭಾರತವಾಗಿ ಬೆಳೆಯಲು ಪಿಡಿಜೆ ಸಂಸ್ಥೆಯ ಶಿಕ್ಷಕರ ಹಾಗೂ ಇಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳ ಕಾಣಿಕೆ ಅಪಾರವಾದುದು ಎಂದು ೯೨ರ ಹರೆಯದ ಮಾಜಿ ಮುಖ್ಯ ಗುರು ಎಂ.ಆರ್.ಕುಲಕರ್ಣಿ ಹೇಳಿದರು.ಪಿಡಿಜೆ ೧೯೮೨ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಪಿಡಿಜೆ ಂ ಃ ಹಾಗೂ bಜe soಛಿieಣಥಿ giಡಿಟ ಊigh sಛಿhooಟ ೧೯೮೨ ವಿಧ್ಯಾರ್ಥಿ ವಿದ್ಯಾರ್ಥಿನಿಯರ ಬಳಗದಿಂದ ಗುರುಗಳಿಗೆ ಸನ್ಮಾನ, ಪಿಡಿಜೆ ರತ್ನ ಪ್ರಶಸ್ತಿ ಹಾಗೂ ವಿಧ್ಯಾರ್ಥಿ ವಿದ್ಯಾರ್ಥಿನಿಯರ ಪುನರ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಪಿಡಿಜೆ ಒಂದು ಸಮುದ್ರ ಅದರಲ್ಲಿ ಮುತ್ತು ರತ್ನಗಳೇ ಅಪಾರ, ಇಲ್ಲಿ ಶಿಸ್ತು, ಸಂಸ್ಸೃತಿಯ ಬೋಧನೆ ಫಲವಾಗಿ ದೇಶ ಉದ್ದರಿಸುವ ವಿದ್ಯಾರ್ತಗಳು ಹೊರ ಬಂದಿದ್ದಾರೆ. ಅದಕ್ಕೆ ತಕ್ಕ ರೀತಿಯಲ್ಲಿ ಇಲ್ಲಿಯ ಶಿಕ್ಷಕರು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡಿದ್ದರಿಂದಲೇ ಎಲ್ಲಾ ರಂಗದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಬೆಳೆದಿದ್ದಾರೆ ಎಂದರು.ಗುರುವಂದನೆ ಸ್ವೀಕರಿಸಿ ಮಾತನಾಡಿದ ಕೆ.ವಿ.ಪಾಟೀಲ ಅವರು, ಪಿಡಿಜೆ ಸಂಸ್ಥೆಯ ಹೆಸರು ಹೇಳಿದ ತಕ್ಷಣ ಒಂದು ಗೌರವ ಹೆಮ್ಮೆ ಬರುವಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಯುವ ಸಬಲೀಕರಣ ಮಂತ್ರಾಲಯ ಕೊಡಮಾಡುವ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಮೈ ಭಾರತ ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರಪತಿ ಪ್ರಶಸ್ತಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತೆಲಗಿಯ ಯುವ ಪ್ರತಿಭೆ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಅವರಿಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಪ್ರಧಾನ ಮಾಡಿ ಗೌರವಿಸಿದರು.ರಾಷ್ಟ್ರಪತಿ ಭವನದಲ್ಲಿ ನಡೆದ ಅಪೂರ್ವ ಕಾರ್ಯಕ್ರಮದಲ್ಲಿ ಸಂಜಯಕುಮಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ, ಸಂಸದೆ ರಕ್ಷಾ ಖಡಸೆ, ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕಿ ವಂದಿತಾ ಶರ್ಮಾ, ಯುವ ಸಬಲೀಕರಣ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ನಿತೇಶಕುಮಾರ ಮಿಶ್ರಾ ಈ ವೇಳೆ ಉಪಸ್ಥಿತರಿದ್ದರು.ಪ್ರಶಸ್ತಿ ಪ್ರಧಾನದ ವೇಳೆ ಸಂಜಯಕುಮಾರ ಅವರ ಕೈಗೊಂಡ ರಕ್ತದಾನ, ಸಾವಿರಾರು ಸಸಿಗಳನ್ನು ನೆಡುವ ಕಾರ್ಯ, ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಕಾರ್ಯಗಳ ಕುರಿತು ನಿರೂಪಕರು ವಿವರಿಸಿದರು. ನಂತರ ರಾಷ್ಟ್ರಪತಿಗಳು ಸಂಜಯಕುಮಾರ ಅವರಿಗೆ ಪದಕ ಪ್ರಧಾನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ರಹವಾಸಿಯಾಗಿರುವ ೯೩ ವರ್ಷದ ಖಾಜಾಸಾಬ ತಂದೆ ರಸೂಲಸಾಬ ಮಂಡೆ ಎಂಬ ವ್ಯಕ್ತಿಯು ಸೆ.೧೫ರಿಂದ ಕಾಣೆಯಾಗಿರುವ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿ ಪತ್ತೆಗೆ ಠಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾದ ವ್ಯಕ್ತಿಯು ೫.೮ಅಡಿ ಎತ್ತರ, ಮೈಯಿಂದ ತೆಳ್ಳಗೆ, ಉದ್ದನೆಯ ಮುಖ, ಚೂಪ ಮೂಗು ಸಾದಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕೈಯಲ್ಲಿ ಬಡಿಗೆ, ಕನ್ನಡಕ ಧರಿಸಿದ್ದು, ನೀಲಿ ಬಣ್ಣದ ಫುಲ್ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ ಭಾಷೆ ಬಲ್ಲವನಾಗಿದ್ದಾರೆ.ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲಿ ಸಾರ್ವಜನಿಕರು ತಿಕೋಟಾ ಪೊಲೀಸ್ ಠಾಣೆ ದೂ: ೦೮೩೫೨-೨೩೧೫೩೩, ಮೊ: ೯೪೮೦೮೦೪೨೪೮, ಗ್ರಾಮೀಣ ವೃತ್ತ ಸಿಪಿಐ ದೂ: ೦೮೩೫೨-೨೫೧೨೧೭, ೯೪೮೦೮೦೪೨೩೧, ಕಂಟ್ರೂಲ್ ರೂಂ ದೂ: ೦೮೩೫೨-೨೫೦೮೪೪ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವನಿಧಿ ಯೋಜನೆಯಡಿ ನೊಂದಾಯಿಸಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಹಾಗೂ ಪಡೆದಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇತಿಯನ್ನು ಪಡೆಯಲು ಞಚಿushಚಿಟಞಚಿಡಿ.ಛಿom ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.ಯುವನಿಧಿ ಫಲಾನುಭವಿಗಳು ಕಡ್ಡಾಯವಾಗಿ ತರಬೇತಿ ಪಡೆಯಲು ನೊಂದಾಯಿಸಿಕೊಳ್ಳಬೇಕು. ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳುವುದರಿಂದ ಪ್ರಸ್ತುತ ತಾವು ಪಡೆಯುತ್ತಿರುವ ನಿರುದ್ಯೋಗ ಭತ್ಯೆ ಯಾವುದೇ ಕಾರಣಕ್ಕಾಗಿ ಸ್ಥಗಿತಗೊಳ್ಳವುದಿಲ್ಲ ಮತ್ತು ಈ ಕುರಿತು ಅಭ್ಯರ್ಥಿಗಳು ಆತಂಕಪಡುವ ಅವಶ್ಯಕತೆ ಇಲ್ಲ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಹತ್ತಿರ, ಬಾಗಲಕೋಟ ರಸ್ತೆ, ವಿಜಯಪುರ ದೂ: ೦೮೩೫೨-೨೯೭೦೧೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕಳೆದ ಐದು ತಿಂಗಳಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ವಿಪರೀತ ಮಳೆಯಿಂದ ಎಲ್ಲ ಬೆಳೆಗಳು ಹಾಳಾಗಿವೆ. ಜಂಟಿ ಸಮೀಕ್ಷೆ ನೆಪದಲ್ಲಿ ಸಮಯ ಹಾಳು ಮಾಡದೇ ಪ್ರತಿಯೊಬ್ಬ ರೈತನ ಒಣ ಬೇಸಾಯಕ್ಕೆ ೫೦ ಸಾವಿರ ರೂ. ಹಾಗೂ ನೀರಾವರಿ ಭೂಮಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಮೂಲಕ ಜಿಲ್ಲಾಡಳಿತ ಹಾಗೂ ರಾಜ್ಯಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅಗ್ರಹಿಸಿದರುಪಟ್ಟಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ವಿಪರೀತ ಮಳೆಯಿಂದ ತಾಲ್ಲೂಕಿನ ಕೃಷಿ ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಸಮಸ್ತ ಬೆಳೆಗಳು ಹಾಳಾಗಿವೆ. ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಸೇರಿದಂತೆ ಎಲ್ಲ ಬೆಳೆಗಳು ಹಾಳಾಗಿವೆ. ಆದ್ದರಿಂದ ಯಾವುದೇ ಜಂಟಿ ಸಮೀಕ್ಷೆ, ವೈಮಾನಿಕ ಸಮೀಕ್ಷೆ ಎಂದು ನೆಪ ಹೇಳದೆ ೧೫ ದಿನದ ಒಳಗಾಗಿ ಜಿಲ್ಲೆಯ ಎಲ್ಲರಿಗೂ ಪರಿಹಾರ ನೀಡಲು ಒತ್ತಾಯಿಸಿದರು.ತಾಲ್ಲೂಕ ಅಧ್ಯಕ್ಷ…
