ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ತಾಲೂಕಿನ ಆರೇಶಂಕರ (ಬಡಾವಣೆ) ಗ್ರಾಮದಲ್ಲಿ ನೂತನ ಮಾರುತೇಶ್ವರ ರ‍್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ದೇವಸ್ಥಾನ ಉದ್ಘಾಟನೆ ಸಮಾರಂಭ ನವೆಂಬರ್ ೨೫/೨೬ ರಂದು ಎರಡು ದಿನ ಜಾತ್ರೆ ಜರುಗಲಿದೆ.
ನ,೨೫ ರಂದು ನೂತನ ಮಾರುತೇಶ್ವರ ಮೂರ‍್ತಿಯನ್ನು ಸಕಲ ವಾದ್ಯ ವೈಭವಗಳಿಂದ ಬರಮಾಡಿಕೋಳ್ಳಲಾಗುವುದು
ಅಂದೇ ರಾತ್ರಿ ೯ ಗಂಟೆಗೆ ಸುಪ್ರಸಿದ್ಧ ಗೀ ಗೀ ಪದಗಳು, ಜರುಗಲಿವೆ. ಹುಲಿಕಾಂತೇಶ್ವರ ಹರದೇಶಿ ಗೀ ಗೀ ಪದ ಕಲಾ ಮೇಳ ಬಣದಾಳ, ಹಾಗೂ ಮಹಾಲಕ್ಷ್ಮಿ ಗೀ ಗೀ ಪದ ನಾಗೇಶ್ ಮೇಳ ದೇವರ ಗೆಣ್ಣೂರ ಈ ಎರಡು ಕಲಾ ತಂಡದಿಂದ ಗೀ ಗೀ ಪದಗಳು ಜರುಗಲಿವೆ .
ನ ೨೬ ರಂದು ನೂತನ ಮಾರುತೇಶ್ವರ ಮೂರ‍್ತಿಗೆ ಹೋಮ ಹವನ ಮತ್ತು ರುದ್ರಾಭಿಷೇಕ ದೊಂದಿಗೆ ಪ್ರತಿಷ್ಠಾಪನೆ ಮಾಡಲಾಗುವುದು. ಕಳಸಾಹರೋಣ ಮತ್ತು ನೂತನ ದೇವಸ್ಥಾನ ಉದ್ಘಾಟನೆ ನೆರವೇರಲಿದೆ.

