ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಬದುಕಿನುದ್ದಕ್ಕೂ ಮರಗಳನ್ನು ಮಕ್ಕಳಂತೆ ಬೆಳೆಸಿ ,ಆರೈಕೆ ಮಾಡುತ್ತಾ , ಹಸಿರೇ ಉಸಿರಾಗಿಸಿಕೊಂಡ ಸಾಲುಮರದ ತಿಮ್ಮಕ್ಕನ ಹೆಸರು ಅಜರಾಮರ ಎಂದು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಸ್ಮರಣಾರ್ಥವಾಗಿ ಶನಿವಾರ ಸಸಿ ಕಾಲೇಜು ಆವರಣದಲ್ಲಿ ನೆಟ್ಟು ನಮನ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನೆ ಹೊಲ ಗದ್ದೆಗಳಲ್ಲಿ ಗಿಡ ಮರ, ಬಳ್ಳಿಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ ನಾಗಪ್ಪ ಚಾವಲ್ಕರ್ ಸಾಲು ಸಾಲು ಮರ ಗಿಡ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಬದುಕಿದ ತಿಮ್ಮಕ್ಕ ನಮಗೆಲ್ಲ ಮಾದರಿ ಎಂದರು.
ತಿಮ್ಮಕ್ಕನ ಸಾಧನೆಯನ್ನು ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು, ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ ಎಂದು ಹೇಳಿದರು.
ದೈಹಿಕ ನಿರ್ದೇಶಕ ಡಾ ಪ್ರಸಾದ ಭಂಡಾರಿ, ಮಲ್ಲಿಕಾರ್ಜುನ ಮರಡ್ಡಿ, ಶಶಿಕುಮಾರ ಎತ್ತಿನಮನಿ, ನಸ್ರೀನ್ ತಾಜ್, ಶರಣಪ್ಪ ಸಾಹು, ಸಿಡಿಸಿ ಸದಸ್ಯರಾದ ಡಾ ಯಂಕನಗೌಡ ಪಾಟೀಲ್, ಡಾ ಮಲ್ಲಣ್ಣ ಬಿಳೆಬಾವಿ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಮಾಸುಮ ಅಲಿ ನಾಶಿ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

