ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಆರೋಗ್ಯವಾಗಿರಬೇಕೆಂದರೆ ನಿರಂತರವಾಗಿ ಆಟೋಟದಲ್ಲಿ ಪಾಲ್ಗೊಳ್ಳಬೇಕು. ಮೋಬೈಲ್ ಗೀಳಿನಿಂದ ಹೊರ ಬರಬೇಕೆಂದು ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲಯನ್ಸ್ ಪುಟಬಾಲ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ೧೭ ವರ್ಷದ ವಯೋಮಿತಿ ಬಾಲಕರ ಪುಟ್‌ಬಾಲ್ ಪಂದ್ಯಾವಳಿಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳ ಮಾನಸಿಕ, ದೈಹಿಕ ಆರೋಗ್ಯತ್ತ ಗಮನ ಹರಿಸಬೇಕು. ಮಕ್ಕಳೆ ಮುಂದಿನ ಪ್ರಜೆಗಳು. ನಾವೆಲ್ಲ ಅವರ ಕಡೆ ಗಮನ ಹರಿಸದ ಕಾರಣ ದಾರಿ ತಪ್ಪುತ್ತಿದ್ದಾರೆ. ರಾಜ್ಯೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಲಯನ್ಸ್ ಪುಟಬಾಲ ಕ್ಲಬ್ ಮಕ್ಕಳಿಗಾಗಿ ಹಮ್ಮಿಕೊಂಡ ಪುಟಬಾಲ್ ಪಂದ್ಯಾವಳಿ ಯಶಸ್ವಿಯಾಗಲಿ, ಎಲ್ಲ ಮಕ್ಕಳ ಇದರಲ್ಲಿ ಪಾಲ್ಗೊಂಡು ಆರೋಗ್ಯಕರ ಚಟುವಟಿಕೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಡಾ.ಮಾಸ್ತಿಹೊಳಿ ಮಕ್ಕಳಿಗೆ ಪ್ರೋತ್ಸಾಹ ನುಡಿ ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಅಶೋಕಕುಮಾರ ಜಾಧವ ಮಾತನಾಡಿ, ಪುಟ್‌ಬಾಲ್ ಪಂದ್ಯಾವಳಿಯೂ ಇತ್ತೀಚಿನ ದಿನದಲ್ಲಿ ಮರೆಯಾಗುತ್ತಿದೆ. ಮಕ್ಕಳಿಗೆ ಈ ಆಟ ಅವಶ್ಯಕವಾಗಿದೆ. ಈ ಪಂದ್ಯ ಮಕ್ಕಳ ಬೆಳವಣಿಗೆ ಮೂಲ ಕಾರಣಿಭೂತವಾಗಿದೆ. ಇಂತಹ ಪಂದ್ಯದಲ್ಲಿ ಮಕ್ಕಳು ಪಾಲ್ಗೊಂಡು ತಮ್ಮ ಏಳ್ಗೆಗೆ ಶ್ರಮಿಸಬೇಕು. ಸಮಾಜಕ್ಕೆ ಒಳ್ಳೆ ಸಂದೇಶ ನೀಡುವಲ್ಲಿ ನಾವೆಲ್ಲ ದುಡಿಯೋಣವೆಂದರು.
ಈ ಸಂದರ್ಭದಲ್ಲಿ ಫಯಾಜ ಕಲಾದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ಶರತ ಪಾಟೀಲ, ಕೃಷ್ಣಾ ಬಂಡಿವಡ್ಡರ, ಸಂತೋಷ ರಾಠೋಡ, ದಾರಾಸಿಂಗ ಪವಾರ, ಗಣೇಶ ಭೋಸಲೆ, ಯಲ್ಲಪ್ಪ ಜಂಪ್ಲೆ, ಮೊಹಮ್ಮದ ಹಿಟ್ನಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನೋಜ ದೊಡಮನಿ, ಆಕಾಶ ಅಳಗುಡಕಿ, ಪ್ರಜ್ವಲ ಭೋಸ್ಲೆ ಇದ್ದರು.
ಕಾರ್ಯಕ್ರಮವನ್ನು ಎಂ.ಡಿ. ಹಾದಿಮನಿ ನಿರೂಪಿಸಿದರು, ವಿನಾಯಕ ಶಿಂಗೆ ವಂದಿಸಿದರು.

“ಮಕ್ಕಳು ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ಎಂಬ ಮಾಯೆಗೆ ಅಂಟಿಕೊಳ್ಳುತ್ತಿದ್ದಾರೆ. ಅದರಿಂದ ಮಕ್ಕಳ ಆರೋಗ್ಯ ಹದಗೆಡುತ್ತ್ತಿದೆ. ಮಕ್ಕಳು ಒತ್ತಡದಿಂದ ಹೊರಬಂದು ಯಾವ ಕ್ರೀಡೆಯಲಿ ತೊಡಗಿರುತ್ತಾರೆಯೋ ಅದರಲ್ಲಿಯೇ ಆಸಕ್ತಿ ವಹಿಸಿಕೊಂಡು ಆಟವಾಡಬೇಕು. ಮಕ್ಕಳು ಕ್ರೀಡಾಂಗಣದಲ್ಲಿ ಬಂದು ಆಟೋಟಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಸಧೃಢರಾಗಬೇಕು.”
– ಡಾ.ಶಿವಾನಂದ ಮಾಸ್ತಿಹೊಳಿ
ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸಾರ್ವಜನಿಕ ಆಸ್ಪತ್ರೆ ವಿಜಯಪುರ

