ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ೧ದಿನದ ಕಾರ್ಯಗಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಜಿನಿಯರಿಂಗ್ ಕಂಪ್ಯೂಟರ್ ಕ್ಷೇತ್ರಗಳಿಗಷ್ಟೇ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಎಐ ಅವಶ್ಯಕತೆ ಇದೆ ಎಂದು ಹಿರಿಯ ಸಾಪ್ಟವೇರ್ ಇಂಜಿನಿಯರ್ ರಮೇಶ್ ಉಪ್ಪಲದಿನ್ನಿ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಐಐಸಿ ಇಂಟರ್ನಶಿಪ್ ಚಟುವಟಿಕೆ ಕೋಶ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಶುಕ್ರವಾರದಂದು ಜರುಗಿದ “ಅವಿಷ್ಕಾರಕರು ಮತ್ತು ಉದ್ಯಮಶೀಲರಿಗೆ ಎಐ ಮತ್ತು ೧೪.೦ ಉಪಕರಣಗಳು ” ಎಂಬ ವಿಷಯದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನ ಎಐ ಅದರ ಬಳಕೆ ಮತ್ತು ವಿದ್ಯಾರ್ಥಿಗಳು ಪ್ರೊಜೆಕ್ಟ್ ಅಥವಾ ಯಾವುದೇ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಟ್ ಜಿಪಿಟಿ, ಜೆಮಿನಿ, ಬಳಿಸುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ
ಎಐ ಎಂದರೇನು, ಹೇಗೆ ಕಾರ್ಯನಿರ್ವಹಿಸುತ್ತದೆ, ಅದಕ್ಕೆ ಯಾರು ತರಬೇತಿ ಮಾಡುತ್ತಾರೆ ಅಲ್ಲದೆ ಮನುಷ್ಯನ ಬುದ್ಧಿಶಕ್ತಿಯ ಮಾಹಿತಿಯನ್ನು ಎಐ ತನ್ನಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ ಎನ್ನುವುದರ ಬಗ್ಗೆ ಎಐ ಸಾಧನಗಳು ಪ್ರಸ್ತುತವಾಗಿವೆ. ಎಐ ತಂತ್ರಜ್ಞಾನದ ಬೆಳವಣಿಗೆಯಿಂದ ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಎಲ್ಲ ಕ್ಷೇತ್ರಗಳಲ್ಲೂ ಎಐ ನವಿಕರಿಸಿಕೊಳ್ಳುತ್ತಿದೆ.ಯಾವುದೇ ಒಂದು ಕ್ಷೇತ್ರಕ್ಕೆ ಎಐ ಸೀಮಿತವಾಗದೆ ಎಲ್ಲ ಕ್ಷೇತ್ರಗಳ್ಳಲ್ಲೂ ತನ್ನ ಕೆಲಸ ನಿರ್ವಹಿಸುತ್ತಿರುವುದು ಕಾಣಬಹುದು.
ಹಾಗೆ ವಿದ್ಯಾರ್ಥಿಗಳಿಗೆ ನೀವು ಪ್ರತಿಯೊಂದು ವಿಷಯಕ್ಕೂ ಎಐ ಉಪಯೋಗಿಸಿದರೆ ನಿಮ್ಮ ಬುದ್ದಿ ಕೆಲಸ ನಿರ್ವಹಿಸುದನ್ನು ನಿಲ್ಲಿಸುಹುದು, ಅದಕ್ಕಾಗಿ ಅವಶ್ಯಕತೆಗೆ ತಕ್ಕಷ್ಟೇ ಮಾತ್ರ ಎಐ ತಂತ್ರಜ್ಞಾನ ಬಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್. ಎಮ್. ಮಿರ್ಧೆ, ಉಪ ಪ್ರಾಚಾರ್ಯ ಡಾ.ಅನಿಲ್ ಪಾಟೀಲ್, ಐಕ್ಯೂಎಸಿ ಸಂಯೋಜಕ ಡಾ. ಪಿ ಎಸ್ ಪಾಟೀಲ ಡಾ. ಪ್ರದೀಪ್ ಚವಾಣ್, ಪ್ರೋ. ಅನಿಲ್ ಪಾಟೀಲ, ಪ್ರೊ.ಎಂ.ಎಸ್ ಜೇವೂರ ಇನ್ನಿತರ ಮಹಾವಿದ್ಯಾಲಯದ ಬೋಧಕ, ಬೋಧಕಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

