ಮೋರಟಗಿಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾರ್ಯಕ್ರಮ | ಎಎಸ್ಐ ನದಾಫ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ಉಳ್ಳಂತ ದೇಶ ನಮ್ಮದು, ಹೀಗಾಗಿ ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ, ತಾವೆಲ್ಲರೂ ಕಾನೂನು ಪಾಲನೆ ಮಾಡುವುದರ ಜೊತೆಗೆ ಪ್ರತಿಯೊಂದು ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಹೊರ ಪೊಲೀಸ್ ಠಾಣೆಯ ಎಎಸ್ಐ ಎಲ್ ಯು ನದಾಫ್ ಹೇಳಿದರು.
ಗ್ರಾಮದ ಶ್ರೀ ಸಿದ್ದರಾಮೇಶ್ವರ ಕಾಲಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಲೈಂಗಿಕ ದೌರ್ಜನ್ಯ ತಡೆ ಹಾಗೂ ಕಾನೂನು ಪಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಇತ್ತೀಚಿಗೆ ಪೋಕ್ಸೋ, ಅತ್ಯಾಚಾರ, ಅಪಹರಣದಂತ ದೂರುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಕಾನೂನು ಜಾಗ್ರತಿ ಮೂಡಿಸುವ ಮೂಲಕ ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಬದುಕಿನಲ್ಲಿ ಒಮ್ಮೆ ಈ ತರಹದ ದೂರುಗಳಲ್ಲಿ ಶಾಮಿಲು ಆದರೆ ಇಡೀ ಜೀವನವೇ ಸರ್ವನಾಶವಾಗುತ್ತದೆ ವಿದ್ಯಾರ್ಥಿಗಳಾದ ತಾವುಗಳು ಕಾನೂನು ಪಾಲನೆ ಮಾಡುವುದರ ಜೊತೆಗೆ ಇತರರನ್ನು ತಿಳಿಹೇಳಬೇಕು ಎಂದರು.
ನಂತರ ಪ್ರಾಚಾರ್ಯ ಡಾ. ವೀರಭದ್ರ ಗೋಲಾ ಮಾತನಾಡಿ ವಿದ್ಯಾರ್ಥಿಗಳು ಸ್ವಸ್ಥ ಹಾಗೂ ಸಮೃದ್ಧ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು, ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ ತಾವುಗಳು ಸಹೋದರತ್ವ ಭಾವನೆ ಬೆಳಿಸಿಕೊಂಡು ಅಧ್ಯಯನದಿಂದ ಹಿಂದೆ ಸರಿಯದೆ ಹಿರಿಯರ ಆದರ್ಶಗಳು ಅಳವಡಿಸಿಕೊಂಡು ಶಿಕ್ಷಕರ ಹಾದಿಯಲ್ಲಿ ನಡೆದು ಬದುಕು ರೂಪಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಮದ್ಯದಲ್ಲಿ ವಿದ್ಯಾರ್ಥಿನಿ ಮಾಜಿಯಾ ಮುಲ್ಲಾ, ಯಶೋದಾ ಮುಡೆ, ಹೀನಾ ಕೌಸರ, ಮಂಜುಳಾ ಮಿರಗಿ, ದಾನಮ್ಮ ರಾಮಗೊಂಡ, ಕಾನೂನು ಅರಿವು ಕುರಿತು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಪಾಟೀಲ್, ಆರಕ್ಷಕ ಭೀಮು ಲಮಾಣಿ,ಡಾ,ಐ ಜಿ ಕೋಣಸಿರಸಗಿ, ಪ್ರೊ ಆರ್ ವೈ ಕಂಬಾರ,ಎಸ್ ಎಂ ಹರನಾಳ, ವ್ಹಿ ಎಸ್ ಶಹಾಪುರ, ಇದ್ದರು.

