Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದಲ್ಲಿ ೧೦೨ ನೂತನ ನಗರ ಸಾರಿಗೆ ವಾಹನಗಳಿಗೆ ಚಾಲನೆ | ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಒಂದು ಸಾವಿರ ಹಾಗೂ ನೇರ ನೇಮಕಾತಿ ೯೦೦೦ ಸೇರಿದಂತೆ ಹತ್ತು ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹೇಳಿದರು.ನಗರದ ದರಬಾರ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ೧೦೨ ನೂತನ ನಗರ ಸಾರಿಗೆ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ನಗರಗಳ ವ್ಯಾಪ್ತಿ ವೃದ್ಧಿಸುತ್ತಿದೆ. ಬೆಳೆಯುತ್ತಿರುವ ನಗರಗಳಲ್ಲಿನ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಮತ್ತು ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿ ೧೧೨ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಸ್ತುತವಾಗಿ ನೂತನ ೧೦೨ ಹೊಸ ನಗರ ಸಾರಿಗೆ ವಾಹನ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಆಯ-ವ್ಯಯ (ಬಜೆಟ್) ಅಂದಾಜು ಪತ್ರಿಕೆ ತಯಾರಿಸಲು ಸಾರ್ವಜನಿಕರಿಮದ ಸಲಹೆ-ಸೂಚನೆ ಪಡೆದುಕೊಳ್ಳಲು ದಿನಾಂಕ:೨೩-೧೨-೨೦೨೫ ರಂದು ಬೆಳಿಗ್ಗೆ ೧೧ ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ದ್ವೀತಿಯ ಸುತ್ತಿನ ಆಯ-ವ್ಯಯ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ವ್ಯಾಪಾರ ಮತ್ತು ಕೈಗಾರಿಕೆ ಸಂಸ್ಥೆ ಒಕ್ಕೂಟಗಳ ಸದಸ್ಯರು ಮತ್ತು ಇತರೆ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಸೈನಿಕ ಶಾಲೆಯಲ್ಲಿ ಒಪ್ಪಂದದ ಆಧಾರದ ಮೇಲೆ ವಿವಿಧ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಸೈನಿಕ ಶಾಲೆಯ ವೆಬ್‌ಸೈಟ್ www.ssbj.inನಿಂದ ಡೌನ್‌ಲೋಡ್ ಮಾಡಲಾದ ನಿಗದಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ದೃಢೀಕರಿಸಿದ ದಾಖಲೆಗಳನ್ನು ಪ್ರಾಂಶುಪಾಲ ಸೈನಿಕ ಶಾಲೆ ವಿಜಯಪುರ-೫೮೬೧೦೮ ಇವರಿಗೆ ದಿನಾಂಕ : ೦೫-೦೧-೨೦೨೬ರೊಳಗೆ ಸಲ್ಲಿಸಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ದೂ: ೦೮೩೫೨-೨೫೦೯೧೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲರ್-ಶಿಕ್ಷಣ ಸಂಸ್ಥೇಗಳು ಹಾಗೂ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಪ್ರತಿ ವರ್ಷ ಜನವರಿ ೦೧ರಿಂದ ೧೫ನೇ ತಾರೀಖಿನೊಳಗೆ ಮಂಡಳಿಗೆ ವಂತಿಕೆ ಪಾವತಿಸಬೇಕಾಗಿರುತ್ತದೆ.ಸರ್ಕಾರದ ಆದೇಶದಂತೆ ಪ್ರತಿ ಕಾರ್ಮಿಕರಿಂದ ೫೦ ರೂ. ಹಾಗೂ ಮಾಲೀಕರಿಂದ ೧೦೦ ರೂ. ರಂತೆ ಒಬ್ಬ ಕಾರ್ಮಿಕರಿಗೆ ಒಟ್ಟು ೧೫೦ ರೂ.ಗಳನ್ನು ಕಾರ್ಖಾನೆ-ಕಾರ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮತ್ತು ಕಾರ್ಮಿಕರ ಸಂಖ್ಯೆಗನುಗುಣವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ.ಈ ಕಾಯ್ದೆಯಡಿಯಲ್ಲಿ ªÉ¨ï¸ÉÊmï www.klwb.karnataka.gov.inಆನ್‌ಲೈನ್ ಮೂಲಕ ವಂತಿಗೆ ಪಾವತಿಸಬಹುದಾಗಿದೆ. ವಂತಿಗೆ ಪಾವತಿಗೆ ದಿನಾಂಕ : ೧೫-೦೧-೨೦೨೬ ಕೊನೆಯ ದಿನವಾಗಿದ್ದು, ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ ೩ ತಿಂಗಳಿಗೆ ಶೇಕಡ ೧೨% ರಂತೆ ಹಾಗೂ ನಂತರದ ತಿಂಗಳಿಗೆ ಶೇ.೧೮% ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು ಹಾಗೂ ಕಲ್ಯಾಣ ಆಯುಕ್ತರಿಂದ ತಪಾಸಣೆ ಮತ್ತು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಓಲೇಮಠವು ಯಾವುದೇ ದವಸ, ದಾನ್ಯ, ಧನ, ಹಣವನ್ನು ಕೇಳದೆ, ನನ್ನ ಜೋಳಿಗಿಗೆ ಗುಟ್ಕಾ, ಸಿಗರೇಟ್, ಸಾರಾಯಿ ಮಾರಾಟ ಮಾಡುವ ಪ್ರತಿಯೊಂದು ಅಂಗಡಿಯ ಮಾಲಿಕರು ನನ್ನ ಜೋಳಿಗಿಗೆ ಹಾಕಿ ದುಶ್ಚಟಗಳಿಂದ ಜನರನ್ನು ದೂರ ಮಾಡಲು ಗ್ರಾಮವನ್ನು ವ್ಯಸನ ಮುಕ್ತ ಗ್ರಾಮ ಮಾಡಿದಕ್ಕಾಗಿ ಶ್ಲಾಘನೀಯ ಎಂದು ಓಲೇಮಠದ ಆನಂದ ದೇವರು ಹೇಳಿದರು.ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ದುಶ್ಚಟಗಳ ಬಿಕ್ಷೆ, ಸದ್ಗುಣಗಳ ದೀಕ್ಷೆ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲವನ್ನು ವ್ಯಸನ ಮುಕ್ತ ಗ್ರಾಮವನ್ನು ಮಾಡಲಾಗುತ್ತದೆ. ಮಹಿಳೆಯರು, ಮಕ್ಕಳು ಸೇರಿಕೊಂಡು ಸಾರಾಯಿ ನಿಷೇಧ ಮಾಡಲು ನನ್ನ ಜೊತೆಗೆ ಕೈ ಜೋಡಿಸಿದರು. ಹಣ ಗಳಿಕೆ ಮಾಡುವ ಉದ್ದೇಶ ನಮ್ಮದು ಇಲ್ಲ. ವ್ಯಸನ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಮನೆ, ಮನೆಗೆ, ಅಂಗಡಿಗಳಿಗೆ ಪಾದಯಾತ್ರೆ ಮಾಡುವ ಮೂಲಕ ನಿಮ್ಮ ಊರಿಗೆ ಬಂದು ನನ್ನ ಜೋಳಿಗೆಗೆ ಹಾಕಿದ್ದಿರಿ. ಇಂದಿನಿಂದ ಗ್ರಾಮ ವ್ಯಸನಮುಕ್ತ ಗ್ರಾಮವಾಗಿದೆ ಎಂದರು.ಈ ವೇಳೆ ಸದಾಶಿವ ಮಠದ ಸಂಗಯ್ಯ…
ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಸುದ್ದಿಗೋಷ್ಠಿ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಕ್ಕಳು ಸಾಹಿತ್ಯಿಕವಾಗಿ ಬೆಳೆಯಬೆಕು ಎಂಬ ಸದುದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳಲಾಗಿದೆ ಎಂದು ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಹ.ಮ ಪೂಜಾರ ಹೇಳಿದರು.ಶನಿವಾರ ಪಟ್ಟಣದ ವಿಶೇಶ್ವರ ಬಾಲಭಾರತಿ ಶಾಲೆಯಲ್ಲಿ ಡಿ. 24 ರಂದು ಹಮ್ಮಿಕೊಂಡ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಆಲಮೇಲದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕು ಎಂದು ಕಂಡ ಕನಸು ಇಂದು ನನಸಾಗಿದೆ. ಈ ಸಮ್ಮೇಳನ ಅಖಿಲ ಭಾರತ ಸಮ್ಮೇಳನ ರೀತಿ ಆಯೋಜನೆ ಮಾಡಲಾಗಿದ್ದು ಇದು ಅತ್ಯಂತ ಖುಷಿ ನೀಡಿದೆ ಎಂದರು.ನಾನು ಪ್ರಾಥಮಿಕ ಶಿಕ್ಷಣ ಮತ್ತ ಶಿಕ್ಷಕನಾಗಿ ಸೇವೆಗೈದ ಆಲಮೇಲದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕು ಎನ್ನುವ ಬಹುದಿನಗಳ ಕನಸು ನನಸಾಗಿದೆ. ಆಲಮೇಲ ಪಟ್ಟಣ ಸಾಹಿತ್ಯ, ಸಾಂಸ್ಕೃತಿಕ, ದೇಶಿಯ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಜಿಲ್ಲೆಯಲ್ಲಿ ಹೆಸರಿದೆ.…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಇಂಡಿಯನ್ ಕೇನ್ ಶುಗರ‍್ಸ್ ಸಕ್ಕರೆ ಕಾರ್ಖಾನೆ ಘಟಕಕ್ಕೆ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ಇವರ ನೇತೃತ್ವದಲ್ಲಿ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿ, ಕಬ್ಬಿನ ತೂಕದ ಕುರಿತು ಪರಿಶೀಲನೆ ಮಾಡಿದರು.ಕಾರ್ಖಾನೆಯಲ್ಲಿ ಕಬ್ಬಿನ ತೂಕದ ಮಸೀನು, ಮತ್ತು ಇಳುವರಿ ಪರಿಶೀಲಿಸಿದರಲ್ಲದೇ, ಕಬ್ಬಿನ ತೂಕದ ಮಶೀನು ಡಿಜಿಟಲ್ ಇರಬೇಕು ಮತ್ತು ಎರಡು ತೂಕದ ಮಸೀನು ಇರುವದು ಪರಿಶೀಲಿಸಿದರು.ಅದರಂತೆ ೨೬೫ ಕಬ್ಬಿಗೆ ೮.೮ ರಿಕವರಿ ೮೬೦೩೨ ಕಬ್ಬಿಗೆ ೯.೧ ರಿಕವರಿ ಬಂದಿದ್ದು ರೈತರ ಸಮ್ಮುಖದಲ್ಲಿ ಪ್ರಯೋಗಾಲದಲ್ಲಿ ಖಚಿತಪಡಿಸಿಕೊಳ್ಳಲಾಯಿತು.ಕಾರ್ಖಾನೆ ಸಿಬ್ಬಂದಿಗೆ ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ತಿಳಿಸಿದರು.ಎಷ್ಟು ಕಬ್ಬು ನುರಿಸಿದ್ದಾರೆ. ಎಷ್ಟು ಕಬ್ಬಿಗೆ ಹಣ ನೀಡಿದ್ದಾರೆ ಎಂಬ ಕುರಿತು ಪರಿಶಿಲನೆ ಮಾಡಿದರಲ್ಲದೆ, ಕಬ್ಬಿಗೆ ಹಣ ೧೫ ದಿವಸಕ್ಕೊಮ್ಮೆ ನೀಡುತ್ತಿದ್ದುದು ಖಚಿತಪಡಿಸಿದರು.ಉಪ ಕೃಷಿ ನಿರ್ದೇಶಕರು ಚಂದ್ರಕಾಂತ ಪವಾರ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಅಧಿಕಾರಿ ಎಸ್.ಎಸ್.ಗುರುಬೇಟ ಪೋಲಿಸ ಇಲಾಖೆ ಎ.ಎಸ್.ಐ ಅಂಗಡಿ ಅಬಕಾರಿ ನಿರೀಕ್ಷಕರು ರಾಹುಲ ನಾಯಕ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹಿಂದೂಗಳ ಸಂಸ್ಕೃತಿ ಸಮಾವೇಶ ಹಾಗೂ ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂರ್ವ ತಯಾರು ವೀಕ್ಷಿಸಿದರು.ಪಟ್ಟಣದ ಇಂಡಿ ರಸ್ತೆಯಲ್ಲಿಯ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರದ ದಾನಗೊಂಡ ಲೇಔಟ್‌ನ ಸ್ಥಳಕ್ಕೆ ಶನಿವಾರ ಆಗಮಿಸಿದ ಸ್ವಾಮೀಜಿ ಕಾರ್ಯಕ್ರಮದ ರೂಪುರೇಷೆ ಮಾಹಿತಿ ಪಡೆದು ಪೂರ್ವತಯಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನ ಹಾಗೂ ಮೀಸಲಾತಿಗಾಗಿ ಕೈಗೊಂಡ ಸಮಾವೇಶದಲ್ಲಿ ಸಮುದಾಯದ ಎಲ್ಲರೂ ಭಾಗವಹಿಸಲು ಕರೆ ನೀಡಿದರುಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಭಾನುವಾರದ (ಇಂದು) ಸಮಾವೇಶದ ಯಶಸ್ವಿಗಾಗಿ ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ವಿವಿಧ ಕಾರ್ಯಗಳ ಜವಾಬ್ದಾರಿ ನಿರ್ವಹಿಸಲು ಮುಂದಾಗಿರುವುದು ಸಂತೋಷದ ವಿಷಯ ಎಂದರು.ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭೆಯ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲ್ಲೂಕಾಧ್ಯಕ್ಷ ಗುರುರಾಜ ಆಕಳವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ, ಸಿ.ಕೆ.ಕುದರಿ, ಮುದುಕಪ್ಪ ದಾನಗೊಂಡ, ಶಿವನಗೌಡ ಪಾಟೀಲ, ಶ್ರೀಶೈಲ ಮುಳಜಿ, ಶ್ರೀಶೈಲ ದಾನಗೊಂಡ,…
ರೈತರಿಗೆ ಸರಿಯಾಗಿ ಬೆಳೆ ಪರಿಹಾರ ಒದಗಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಡಚಣದಲ್ಲಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾಗೂ ಭೀಮಾ ನದಿ ಪ್ರವಾಹದಿಂದ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರದಿಂದ ರೈತರಿಗೆ ಬೆಳೆ ಪರಿಹಾರ ಸರಿಯಾಗಿ ತಲುಪುತ್ತಿಲ್ಲ ಕಾರಣ ರೈತರಿಗೆ ಸರಿಯಾಗಿ ಪರಿಹಾರ ಕಲ್ಪಿಸುವಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ತಹಶೀಲದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾಗೂ ಭೀಮಾ ನದಿ ಪ್ರವಾಹದಿಂದ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರದಿಂದ ಕೆಲ ರೈತರಿಗೆ ಅಲ್ಪ, ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ಬಂದಿದೆ. ಇನ್ನು ಅನೇಕ ರೈತರಿಗೆ ಪರಿಹಾರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ವೈದ್ಯರು ಪ್ರೀತಿ ಮತ್ತು ಸಮಾಧಾನದಿಂದ ಮಾತನಾಡಿದರೆ ರೋಗಿಗಳು ಅರ್ಧ ಗುಣಮುಖರಾಗುತ್ತಾರೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಸಿದ್ದನಗೌಡ ಎ. ಪಾಟೀಲ ಹೇಳಿದ್ದಾರೆ.ಶನಿವಾರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪ್ರಸಕ್ತ ವರ್ಷದ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಾಘ್ಭಟ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾಗಿದೆ. ರೋಗಿಗಳೊಂದಿಗೆ ಪ್ರೀತಿ ಮತ್ತು ಸಮಾಧಾನದಿಂದ ಮಾತನಾಡಿಸಿದರೆ ಅವರ ಅರ್ಧ ರೋಗ ಗುಣವಾಗುತ್ತದೆ. ಯುವ ವೈದ್ಯರು ವೈದ್ಯರು ಆರೋಗ್ಯ, ಸಮಯ ಹಾಗೂ ಅನುಭವಕ್ಕೆ ಯಾವಾಗಲು ಮಹತ್ವ ನೀಡಬೇಕು. ಈಗ ಪದವಿ ಪಡೆದಿರುವ ಯುವ ವೈದ್ಯರು ಸನ್ಮಾರ್ಗದಲ್ಲಿ ನಡೆಯುತ್ತ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ಬಿ. ಎಲ್.…
