ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಸುದ್ದಿಗೋಷ್ಠಿ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಕ್ಕಳು ಸಾಹಿತ್ಯಿಕವಾಗಿ ಬೆಳೆಯಬೆಕು ಎಂಬ ಸದುದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳಲಾಗಿದೆ ಎಂದು ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ಹ.ಮ ಪೂಜಾರ ಹೇಳಿದರು.
ಶನಿವಾರ ಪಟ್ಟಣದ ವಿಶೇಶ್ವರ ಬಾಲಭಾರತಿ ಶಾಲೆಯಲ್ಲಿ ಡಿ. 24 ರಂದು ಹಮ್ಮಿಕೊಂಡ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಲಮೇಲದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕು ಎಂದು ಕಂಡ ಕನಸು ಇಂದು ನನಸಾಗಿದೆ. ಈ ಸಮ್ಮೇಳನ ಅಖಿಲ ಭಾರತ ಸಮ್ಮೇಳನ ರೀತಿ ಆಯೋಜನೆ ಮಾಡಲಾಗಿದ್ದು ಇದು ಅತ್ಯಂತ ಖುಷಿ ನೀಡಿದೆ ಎಂದರು.
ನಾನು ಪ್ರಾಥಮಿಕ ಶಿಕ್ಷಣ ಮತ್ತ ಶಿಕ್ಷಕನಾಗಿ ಸೇವೆಗೈದ ಆಲಮೇಲದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡಬೇಕು ಎನ್ನುವ ಬಹುದಿನಗಳ ಕನಸು ನನಸಾಗಿದೆ. ಆಲಮೇಲ ಪಟ್ಟಣ ಸಾಹಿತ್ಯ, ಸಾಂಸ್ಕೃತಿಕ, ದೇಶಿಯ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಜಿಲ್ಲೆಯಲ್ಲಿ ಹೆಸರಿದೆ. ಅದಕ್ಕಾಗಿ 12ನೇ ಜಿಲ್ಲಾ ಮಕ್ಕಳ ಸಮ್ಮೇಳನ ಆಲಮೇಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಡಿ.24 ರಂದು ನಡೆಯುವ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಜಯಪುರದ ಮಕ್ಕಳ ಸಾಹಿತಿ ಬಿ.ಆರ್. ನಾಡಗೌಡ ಅವರನ್ನು ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಮ್ಮೇಳನದ ಮುಖ್ಯ ವೇದಿಕೆ ಮಕ್ಕಳ ಸಾಹಿತ್ಯ ಸಂಗಮದ ಸಂಸ್ಥಾಪಕ ಅಧ್ಯಕ್ಷ ಶಂ.ಗು. ಬಿರಾದಾರ ವೇದಿಕೆ ಎಂದು ಹೆಸರಿಡಲಾಗಿದೆ ಮತ್ತು ಎರಡು ಮುಖ್ಯ ದ್ವಾರ ಬಾಗಿಲುಗಳಿಗೆ ಮಕ್ಕಳಾ ಸಾಹಿತಿಗಳಾದ ಸಿಸು ಸಂಗಮೇಶ ಮತ್ತು ಬಾಯಿ ಕುಮಠೆ ಇಬ್ಬರ ಹೆಸರು ಇಡಲಾಗಿದೆ. ಸಿಂದಗಿ ಶಾಸಕ ಅಶೋಕ ಮನಗೂಳಿ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಪ್ರೊ. ಎ.ಆರ್ ಹೆಗ್ಗನದೊಡ್ಡಿ ಮಾತನಾಡಿ, ಮಕ್ಕಳಿಗಾಗಿ ಪ್ರಾರಂಭಿಸಲಾದ ಮಕ್ಕಳ ಸಾಹಿತ್ಯ ಸಂಗಮದ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂಬ ಹಿರಿಯ ಮಕ್ಕಳ ಸಾಹಿತಿಗಳ ಆಸೆಯಂತೆ ಮುನ್ನಡೆಸಿಕೊಂಡು ಹೋಗಲಾಗುತ್ತದೆ. ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕರಾದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಹ.ಮ ಪೂಜಾರ ಅವರು ಕಳೆದ 49 ವರ್ಷಗಳಿಂದ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳು ಮಾಡಿಕೊಂಡು ಬಂದಿದ್ದು, ಮಕ್ಕಳಲ್ಲಿರುವ ಸಾಹಿತ್ಯವನ್ನು ಹೊರ ತಂದು ಇನ್ನುಳಿದ ಮಕ್ಕಳಿಗೆ ಪ್ರೇರಣೆ ಆಗುವಂತೆ ನಿರಂತರವಾಗಿ ಮಕ್ಕಳ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ಅವರ ಆಸೆಯಂತೆ ಡಿ. 24 ರಂದು ನಡೆಯುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕವಾಗಿ ದೇಶಿಯ ಕಲೆ, ವಾದ್ಯಗಳೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ಮಾಡಲಾಗುವದು. ಹಾಗೆ ಸಮ್ಮೇಳನದ ಪ್ರತಿಯೊಂದು ಉಪನ್ಯಾಸ, ಗೋಷ್ಠಿ ಮಕ್ಕಳ ಬಗ್ಗೆನೆ ಆಯೋಜನೆ ಮಾಡಲಾಗಿದೆ. ಮತ್ತು 2ನೇ ಗೋಷ್ಠಿ ಚಿಣ್ಣರ ಚಿಂತನಾ ಗೋಷ್ಠಿ ಅದ್ಯಕ್ಷ, ಉಪನ್ಯಾಸ ಎಲ್ಲವೂ ವಿವಿದ ಶಾಲೆಯ ಮಕ್ಕಳೆ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆಯ್. ಜೊಗೂರ, ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ಸಾತಿಹಾಳ, ಶಿವುಕುಮಾರ ಶಿವಶಿಂಪಿ, ತಾಲೂಕು ಅಧ್ಯಕ್ಷ ಲಕ್ಷ್ಮಿಪುತ್ರ ಕಿರನಳಿ, ಬೊಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗೀತಾ ಎಸ್, ಅಪ್ಪು ಶೆಟ್ಟಿ ಉಪಸ್ಥಿತರಿದ್ದರು.

