ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹಿಂದೂಗಳ ಸಂಸ್ಕೃತಿ ಸಮಾವೇಶ ಹಾಗೂ ಪಂಚಮಸಾಲಿ ಮೀಸಲಾತಿ ಪ್ರತಿಜ್ಞಾವಿಧಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೂರ್ವ ತಯಾರು ವೀಕ್ಷಿಸಿದರು.
ಪಟ್ಟಣದ ಇಂಡಿ ರಸ್ತೆಯಲ್ಲಿಯ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರದ ದಾನಗೊಂಡ ಲೇಔಟ್‌ನ ಸ್ಥಳಕ್ಕೆ ಶನಿವಾರ ಆಗಮಿಸಿದ ಸ್ವಾಮೀಜಿ ಕಾರ್ಯಕ್ರಮದ ರೂಪುರೇಷೆ ಮಾಹಿತಿ ಪಡೆದು ಪೂರ್ವತಯಾರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನ ಹಾಗೂ ಮೀಸಲಾತಿಗಾಗಿ ಕೈಗೊಂಡ ಸಮಾವೇಶದಲ್ಲಿ ಸಮುದಾಯದ ಎಲ್ಲರೂ ಭಾಗವಹಿಸಲು ಕರೆ ನೀಡಿದರು
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಭಾನುವಾರದ (ಇಂದು) ಸಮಾವೇಶದ ಯಶಸ್ವಿಗಾಗಿ ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ವಿವಿಧ ಕಾರ್ಯಗಳ ಜವಾಬ್ದಾರಿ ನಿರ್ವಹಿಸಲು ಮುಂದಾಗಿರುವುದು ಸಂತೋಷದ ವಿಷಯ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭೆಯ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲ್ಲೂಕಾಧ್ಯಕ್ಷ ಗುರುರಾಜ ಆಕಳವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ, ಸಿ.ಕೆ.ಕುದರಿ, ಮುದುಕಪ್ಪ ದಾನಗೊಂಡ, ಶಿವನಗೌಡ ಪಾಟೀಲ, ಶ್ರೀಶೈಲ ಮುಳಜಿ, ಶ್ರೀಶೈಲ ದಾನಗೊಂಡ, ಪಂಚಾಕ್ಷರಿ ಮಿಂಚನಾಳ, ಸಿದ್ದು ಮಸಬಿನಾಳ, ಜಿ.ಪಿ.ಬಿರಾದಾರ, ಮಡುಗೌಡ ಬಿರಾದಾರ, ಕುಮಾರ ಜೋಗೂರ, ರಮೇಶ ಮಾಳನೂರ, ವೀರೇಶ ಕುದರಿ, ರಾಮು ದೇಸಾಯಿ, ಸೋಮು ದೇವೂರ ಇದ್ದರು.

