ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಇಂಡಿಯನ್ ಕೇನ್ ಶುಗರ‍್ಸ್ ಸಕ್ಕರೆ ಕಾರ್ಖಾನೆ ಘಟಕಕ್ಕೆ ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ಇವರ ನೇತೃತ್ವದಲ್ಲಿ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿ, ಕಬ್ಬಿನ ತೂಕದ ಕುರಿತು ಪರಿಶೀಲನೆ ಮಾಡಿದರು.
ಕಾರ್ಖಾನೆಯಲ್ಲಿ ಕಬ್ಬಿನ ತೂಕದ ಮಸೀನು, ಮತ್ತು ಇಳುವರಿ ಪರಿಶೀಲಿಸಿದರಲ್ಲದೇ, ಕಬ್ಬಿನ ತೂಕದ ಮಶೀನು ಡಿಜಿಟಲ್ ಇರಬೇಕು ಮತ್ತು ಎರಡು ತೂಕದ ಮಸೀನು ಇರುವದು ಪರಿಶೀಲಿಸಿದರು.
ಅದರಂತೆ ೨೬೫ ಕಬ್ಬಿಗೆ ೮.೮ ರಿಕವರಿ ೮೬೦೩೨ ಕಬ್ಬಿಗೆ ೯.೧ ರಿಕವರಿ ಬಂದಿದ್ದು ರೈತರ ಸಮ್ಮುಖದಲ್ಲಿ ಪ್ರಯೋಗಾಲದಲ್ಲಿ ಖಚಿತಪಡಿಸಿಕೊಳ್ಳಲಾಯಿತು.
ಕಾರ್ಖಾನೆ ಸಿಬ್ಬಂದಿಗೆ ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ತಿಳಿಸಿದರು.
ಎಷ್ಟು ಕಬ್ಬು ನುರಿಸಿದ್ದಾರೆ. ಎಷ್ಟು ಕಬ್ಬಿಗೆ ಹಣ ನೀಡಿದ್ದಾರೆ ಎಂಬ ಕುರಿತು ಪರಿಶಿಲನೆ ಮಾಡಿದರಲ್ಲದೆ, ಕಬ್ಬಿಗೆ ಹಣ ೧೫ ದಿವಸಕ್ಕೊಮ್ಮೆ ನೀಡುತ್ತಿದ್ದುದು ಖಚಿತಪಡಿಸಿದರು.
ಉಪ ಕೃಷಿ ನಿರ್ದೇಶಕರು ಚಂದ್ರಕಾಂತ ಪವಾರ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಅಧಿಕಾರಿ ಎಸ್.ಎಸ್.ಗುರುಬೇಟ ಪೋಲಿಸ ಇಲಾಖೆ ಎ.ಎಸ್.ಐ ಅಂಗಡಿ ಅಬಕಾರಿ ನಿರೀಕ್ಷಕರು ರಾಹುಲ ನಾಯಕ, ಅಹಾರ ನಿರಿಕ್ಷಕರು ಪರಮಾನಂದ ಹೂಗಾರ ಅಳತೆ ಮತ್ತು ತೂಕ ಅಧಿಕಾರಿ ಲಮಾಣಿ ರೈತ ಮುಖಂಡರಾದ ಎಸ್.ಬಿ.ಕಂಬೋಗಿ. ಸಿದ್ದರಾಮ ತಳವಾರ, ಮಲ್ಲಿಕಾರ್ಜುನ ನಾವದಗಿ, ಗಿರಿಮಲ್ಲಗೌಡ ಬಿರಾದಾರ , ಕಾರ್ಖಾನೆಯ ಮುಖ್ಯಸ್ಥ ಸೂರ್ಯಪ್ರಕಾಶ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

