ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಓಲೇಮಠವು ಯಾವುದೇ ದವಸ, ದಾನ್ಯ, ಧನ, ಹಣವನ್ನು ಕೇಳದೆ, ನನ್ನ ಜೋಳಿಗಿಗೆ ಗುಟ್ಕಾ, ಸಿಗರೇಟ್, ಸಾರಾಯಿ ಮಾರಾಟ ಮಾಡುವ ಪ್ರತಿಯೊಂದು ಅಂಗಡಿಯ ಮಾಲಿಕರು ನನ್ನ ಜೋಳಿಗಿಗೆ ಹಾಕಿ ದುಶ್ಚಟಗಳಿಂದ ಜನರನ್ನು ದೂರ ಮಾಡಲು ಗ್ರಾಮವನ್ನು ವ್ಯಸನ ಮುಕ್ತ ಗ್ರಾಮ ಮಾಡಿದಕ್ಕಾಗಿ ಶ್ಲಾಘನೀಯ ಎಂದು ಓಲೇಮಠದ ಆನಂದ ದೇವರು ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ದುಶ್ಚಟಗಳ ಬಿಕ್ಷೆ, ಸದ್ಗುಣಗಳ ದೀಕ್ಷೆ ಜನಜಾಗೃತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲವನ್ನು ವ್ಯಸನ ಮುಕ್ತ ಗ್ರಾಮವನ್ನು ಮಾಡಲಾಗುತ್ತದೆ. ಮಹಿಳೆಯರು, ಮಕ್ಕಳು ಸೇರಿಕೊಂಡು ಸಾರಾಯಿ ನಿಷೇಧ ಮಾಡಲು ನನ್ನ ಜೊತೆಗೆ ಕೈ ಜೋಡಿಸಿದರು. ಹಣ ಗಳಿಕೆ ಮಾಡುವ ಉದ್ದೇಶ ನಮ್ಮದು ಇಲ್ಲ. ವ್ಯಸನ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಮನೆ, ಮನೆಗೆ, ಅಂಗಡಿಗಳಿಗೆ ಪಾದಯಾತ್ರೆ ಮಾಡುವ ಮೂಲಕ ನಿಮ್ಮ ಊರಿಗೆ ಬಂದು ನನ್ನ ಜೋಳಿಗೆಗೆ ಹಾಕಿದ್ದಿರಿ. ಇಂದಿನಿಂದ ಗ್ರಾಮ ವ್ಯಸನಮುಕ್ತ ಗ್ರಾಮವಾಗಿದೆ ಎಂದರು.
ಈ ವೇಳೆ ಸದಾಶಿವ ಮಠದ ಸಂಗಯ್ಯ ಸ್ವಾಮಿಗಳು, ಶಿವಯ್ಯ ಸ್ವಾಮಿಗಳು ಇದ್ದರು.

