ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲರ್-ಶಿಕ್ಷಣ ಸಂಸ್ಥೇಗಳು ಹಾಗೂ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಪ್ರತಿ ವರ್ಷ ಜನವರಿ ೦೧ರಿಂದ ೧೫ನೇ ತಾರೀಖಿನೊಳಗೆ ಮಂಡಳಿಗೆ ವಂತಿಕೆ ಪಾವತಿಸಬೇಕಾಗಿರುತ್ತದೆ.
ಸರ್ಕಾರದ ಆದೇಶದಂತೆ ಪ್ರತಿ ಕಾರ್ಮಿಕರಿಂದ ೫೦ ರೂ. ಹಾಗೂ ಮಾಲೀಕರಿಂದ ೧೦೦ ರೂ. ರಂತೆ ಒಬ್ಬ ಕಾರ್ಮಿಕರಿಗೆ ಒಟ್ಟು ೧೫೦ ರೂ.ಗಳನ್ನು ಕಾರ್ಖಾನೆ-ಕಾರ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮತ್ತು ಕಾರ್ಮಿಕರ ಸಂಖ್ಯೆಗನುಗುಣವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಈ ಕಾಯ್ದೆಯಡಿಯಲ್ಲಿ ªÉ¨ï¸ÉÊmï www.klwb.karnataka.gov.inಆನ್‌ಲೈನ್ ಮೂಲಕ ವಂತಿಗೆ ಪಾವತಿಸಬಹುದಾಗಿದೆ. ವಂತಿಗೆ ಪಾವತಿಗೆ ದಿನಾಂಕ : ೧೫-೦೧-೨೦೨೬ ಕೊನೆಯ ದಿನವಾಗಿದ್ದು, ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ ೩ ತಿಂಗಳಿಗೆ ಶೇಕಡ ೧೨% ರಂತೆ ಹಾಗೂ ನಂತರದ ತಿಂಗಳಿಗೆ ಶೇ.೧೮% ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು ಹಾಗೂ ಕಲ್ಯಾಣ ಆಯುಕ್ತರಿಂದ ತಪಾಸಣೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತನಿಖೆಗೊಳಪಡಿಸಲಾಗುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೮೨೭೭೨೯೧೧೭೫, ೮೨೭೭೧೨೦೫೦೫, ೯೧೪೧೬೦೨೫೬೨ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
