Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ, ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಸಮುದಾಯ ವೈದ್ಯಕೀಯ ವಿಭಾಗದ, ಎರಡನೆ ಮಹಡಿಯಲ್ಲಿ ಡೆಮಾಕ್ರಸಿ ರೂಮ್, ಡೆಮಾಕ್ರಸಿ ವಾಲ್ ಹಾಗೂ ಇಎಲ್‌ಸಿ ವೆಬ್‌ಪೇಜ್ ನ್ನು ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಬುಧವಾರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವಲ್ಲಿ ಇಂಥ ಶೈಕ್ಷಣಿಕ ಮತ್ತು ಡಿಜಿಟಲ್ ವೇದಿಕೆಗಳು ಅಗತ್ಯವಾಗಿವೆ. ಡೆಮಾಕ್ರಸಿ ರೂಮ್ ಮತ್ತು ಡೆಮಾಕ್ರಸಿ ವಾಲ್‌ಗಳು ಭಾರತೀಯ ಚುನಾವಣೆ ವ್ಯವಸ್ಥೆ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಮತದಾರರ ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿವೆ. ಇವು ಪ್ರಜಾಪ್ರಭುತ್ವದ ಅರಿವು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಬೆಳೆಸುವ ಶೈಕ್ಷಣಿಕ ವೇದಿಕೆಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.ಚುನಾವಣೆ ಸಾಕ್ಷರತೆ ಕ್ಲಬ್ ನೋಡಲ್ ಅಧಿಕಾರಿ ಡಾ. ಸಂದೀಪ ಯಂಕಂಚಿ ಮಾತನಾಡಿ, ಸಾಕ್ಷರತೆ ಕ್ಲಬ್ ವತಿಯಿಂದ ಮತದಾರ ಜಾಗೃತಿ ಕಾರ್ಯಕ್ರಮಗಳು, ಶೈಕ್ಷಣಿಕ ಅಭಿಯಾನಗಳು, ವಿದ್ಯಾರ್ಥಿ ತೊಡಗಿಸಿಕೊಳ್ಳುವ ಚಟುವಟಿಕೆಗಳು ಹಾಗೂ ಸಮುದಾಯ ಸಂಪರ್ಕ ಕಾರ್ಯಕ್ರಮಗಳನ್ನು…

Read More

ಸಿಂದಗಿಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಸಾರಂಗ ಮಠ ನೀಡಲಾಗುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಾರತವು ವಿಶ್ವಗುರು ಸ್ಥಾನವನ್ನು ಪಡೆಯಬೇಕಾದರೆ ವಿಜ್ಞಾನ–ತಂತ್ರಜ್ಞಾನ, ಜ್ಞಾನಾಧಾರಿತ ಚಿಂತನೆ ಹಾಗೂ ಗುಣಮಟ್ಟದ ಶಿಕ್ಷಣವೇ ಅದರ ಬಲಿಷ್ಠ ಅಡಿಪಾಯವಾಗಬೇಕು ಎಂದು ಖ್ಯಾತ ಪರಮಾಣು ವಿಜ್ಞಾನಿ, ಪದ್ಮಶ್ರೀ–ಪದ್ಮವಿಭೂಷಣ ಪುರಸ್ಕೃತ ಡಾ. ಅನಿಲ್ ಕಾಕೋಡಕರ ಹೇಳಿದರು.ಅವರು ಸಿಂದಗಿಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಸಾರಂಗ ಮಠ–ಸಿಂದಗಿ ವತಿಯಿಂದ ಪ್ರತಿವರ್ಷ ನೀಡಲಾಗುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳ ಅಭಿವೃದ್ಧಿಗೆ ಬಲ ನೀಡಿದೆ ಎಂದು ಅವರು ತಿಳಿಸಿದರು.ಸ್ವದೇಶಿ ಸಂಶೋಧನೆ, ನವೀನ ಆವಿಷ್ಕಾರಗಳು ಹಾಗೂ ತಾಂತ್ರಿಕ ಆತ್ಮನಿರ್ಭರತೆಯೇ ಭಾರತದ ಆರ್ಥಿಕ ಬಲವಾಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸಂಪನ್ಮೂಲಗಳಿಗಿಂತ ಜ್ಞಾನ ಸಂಪತ್ತಿನ ಮೇಲೆ ವಿಶ್ವಾಸವಿಟ್ಟಾಗ ಮಾತ್ರ ಭಾರತ ಜಾಗತಿಕ ನಾಯಕತ್ವ ಸಾಧಿಸಲಿದೆ ಎಂದರು. ಯುವಜನರಲ್ಲಿ ಅಡಗಿರುವ…

Read More

ಜಮಖಂಡಿಯಲ್ಲಿ ಕೌಮಿ ಏಕತಾ ಸಮ್ಮೇಳನ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ದಲಿತರ ಮುಸಲ್ಮಾನರು ಸಮಸ್ಯೆಗಳನ್ನು ಒಂದೆಯಾಗಿವೆ, ಸಮಸ್ಯೆಗಳ ಬಗ್ಗೆ ಚಿಂತನೆಗಳು ನಡೆಯಬೇಕಿದೆ, ಒಗ್ಗಟ್ಟಿನಿಂದ ಹೋರಾಟಮಾಡಬೇಕು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಅಬುಬಕರ ದರ್ಗಾ ಮೈದಾನದಲ್ಲಿ ನಡೆದ ಶಹೀದ ಹಜರತ ಟಿಪು ಸುಲ್ತಾನ ಜಯಂತ್ಯೋತ್ಸವ ಸಮೀತಿ ಹಮ್ಮಿಕೊಂಡಿದ್ದ ಕೌಮಿ ಏಕತಾ(ಸರ್ವಧರ್ಮ ಸಮ್ಮೇಳನ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಕಳೆದ 12 ವರ್ಷಗಳಿಂದ ಭಾರತ ಬದಲಾಗಿದೆ. ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತಿವೆ, ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳಬೇಕು, ಶಿಕ್ಷಣ ಇಲ್ಲದೇ ಬದುಕು ಸಾಗಿಸುವ ಕಾಲ ಇಲ್ಲ ಶಿಕ್ಷಣಕ್ಕೆ ಬಹಳ ಮಹತ್ವವಿದೆ, ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.ಟಿಪು ಸುಲ್ತಾನರ ಆಡಳಿತ, ಜಾರಿಗೆ ತಂದ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ, ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡಿದ ಅವರ ದೇಶಭಕ್ತಿಯ ಕುರಿತು ಎಲ್ಲರಿಗೂ ಮಾಹಿತಿ ನೀಡುವ ಕೆಲಸವಾಗಬೇಕು. ಇತಿಹಾಸವನ್ನು ತಿಳಿದುಕೊಳ್ಳಬೇಕು ಅದಕ್ಕಾಗಿ…

Read More

ಸತ್ಸಂಗಅಮೃತಾನಂದ ಶ್ರೀಗಳು ಸಿದ್ದೇಶ್ವರ ಶ್ರೀ ಆಶ್ರಮ ಕಾತ್ರಾಳ – ಬಾಲಗಾಂವ ಅವರಿಂದ ಇಂಡಿಯಲ್ಲಿ ನಡೆದ ಪ್ರವಚನ ಸಾರ ಸಂಗ್ರಹ- ಉಮೇಶ ಕೋಳೆಕರಇಂಡಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸಂತೋಷ ಸಮಾಧಾನ ತರುವ ವಿದ್ಯೆ ನಮಗೆ ಬೇಕುಹೊರಗಿನ ವಸ್ತುಗಳ ಬಗ್ಗೆ ಕಲಿಯುವದು ವಿದ್ಯೆ ಎಂದರೆ ಅದು ಸಂತೋಷ ಸಮಾಧಾನ ಕೊಡಬೇಕು. ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿದ್ದು ವಿದ್ಯಾ ಇಲ್ಲದವನ ಮುಖವು ಹಾಳುರ ಹದ್ದಿನಂತಿದೆ ಎಂಬ ಪ್ರತೀತಿ ಇದೆ. ವಿದ್ಯಾ ಜ್ಞಾನದ ಲಕ್ಷಣ. ಮನುಷ್ಯ ಚಿಂತೆಯಿಂದ ಮುಕ್ತನಾಗಬೇಕು. ಮನಸ್ಸಿನಲ್ಲಿ ಕೆಟ್ಟ ಚಿಂತೆ ಆಲೋಚನೆ ಅಸಮಾಧಾನ ಇರಬಾರದು. ಕಲಿತು ಖಿನ್ನರಾದರೆ ಚಿಂತೆ ಹೆಚ್ಚಾದರೆ ಜೀವನವೇ ಅಲ್ಲ. ಹೆಚ್ಚು ಸಮಾಧಾನ ಇರಲು ಕಲಿಯಬೇಕು. ಶಾಲೆ ಕಲಿಯದವನಿಗೆ ಜ್ಞಾನ ಇಲ್ಲ ಎಂದು ಹೇಳುತ್ತೇವೆ. ಕಲಿತವರಿಗೆ ಸಮಸ್ಯೆ ಚಿಂತೆ ದುಃಖ ಅಸಮಾಧಾನವಿದೆ. ಹೊರಗಿನ ವಸ್ತು ತಿಳಿಯಲು ಕಲಿತಿದ್ದೇವೆ. ಆಧ್ಯಾತ್ಮ ನಿಜವಾದ ವಿದ್ಯೆ ಲೌಕಿಕ ವಿದ್ಯೆಗೆ ಸಮಾಧಾನವಿಲ್ಲ, ಆಧ್ಯಾತ್ಮ ನಮ್ಮನ್ನು ಪ್ರಸನ್ನರನ್ನಾಗಿ ಮಾಡುತ್ತದೆ.ಗುರುಕುಲಗಳಲ್ಲಿ ೧೨ ವರ್ಷದ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಮಕ್ಕಳಿಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ೩೦ ವರ್ಷಗಳಿಂದ ಮನೆಗಳಿಗೆ ಉತಾರೆ ನೀಡುವಂತೆ ೩೦ಕ್ಕೂ ಹೆಚ್ಚು ಅರ್ಜಿಗಳನ್ನು ನೀಡಿದರೂ ಉತಾರೆ ಕೊಡುತ್ತಿಲ್ಲ. ಮತ್ತು ವಾರ್ಡ್ ನಂ ೧೩ ರಲ್ಲಿ ಬೇರೆ ಊರಿನ ಮತ್ತು ಬೇರೆ ಬೇರೆ ವಾರ್ಡುಗಳ ಮತದಾರರ ಹೆಸರುಗಳನ್ನು ಮತದಾರರ ಯಾದಿಯಲ್ಲಿ ಸೇರಿಸಲಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಮುಖಂಡ ಬಸವರಾಜ ಕೊಳೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಇಂದಿರಾ ನಗರದಿಂದಲೇ ಹೋರಾಟ ಪ್ರಾರಂಭಿಸಿದ ನೂರಾರು ಹೋರಾಟಗಾರರು ಹಲಿಗೆ ಬಡಿಯುತ್ತ, ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೋಗುತ್ತ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪುರಸಭೆ ಬಳಿಯ ವಾಲ್ಮೀಕಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯವರೆಗೆ ಸಾಗಿ ಧರಣಿ ಆರಂಭಿಸಿದರು. ಕೆಲ ಸಮಯದ ಬಳಿಕ ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದರ ಧರಣಿ…

Read More

ವಾಜಪೇಯಿ ವೃತ್ತದಲ್ಲಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕ ಯತ್ನಾಳ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಮಾಣು ಶಕ್ತಿಯಲ್ಲಿ ಭಾರತ ಮತ್ತೊಂದು ಹಂತಕ್ಕೆ ಹೋಗಲು ವಾಜಪೇಯಿ ಅವರ ದೂರದರ್ಶಿತ್ವ ಮತ್ತು ದೇಶಪ್ರೇಮವೇ ಕಾರಣ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಹೇಳಿದರು.ನಗರದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಗುರುವಾರ ವಾಜಪೇಯಿ ಅವರ 101ನೇ ಜನ್ಮ ದಿನದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ವಾಜಪೇಯಿ ರವರು ಶುದ್ಧ ಸಚ್ಚಾರಿತ್ರ್ಯದ ರಾಜಕಾರಣಿ, ಅಜಾತಶತ್ರುರಾಗಿದ್ದ ಅವರು ರಾಷ್ಟ್ರ ಚಿಂತಕರಾಗಿದ್ದರು ಎಂದರು.ದೂರಸಂಪರ್ಕ ಕ್ರಾಂತಿ ಆದದ್ದು ಭಾರತ ರತ್ನ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ. ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಮೂಲಕ ಅಟಲ್ ಜಿ ಅವರು 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು ಎಂದರು.ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯಲು…

Read More

ಸಿದ್ಧಸಿರಿ ಸಂಸ್ಥೆ ಕುರಿತು ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿ ನ್ಯಾಯಾಲಯದಿಂದ ಮಧ್ಯಂತರ ಆದೇಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಎಲ್ಲರಿಗೂ ಚಿರ ಪರಿಚಿತವಾದ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಈಗ ಕೇಂದ್ರ ಸರ್ಕಾರದ ಅಡಿ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿ. ಆಗಿ ನೋಂದಣಿಯಾಗಿರುವದು ಎಲ್ಲ ಗ್ರಾಹಕರಿಗೆ ಮತ್ತು ನಿರ್ದೇಶಕ ಮಂಡಳಿಗೆ ಅತ್ಯಂತ ಸಂತಸದ ಸಂಗತಿ.ಆದರೆ ಇತ್ತಿತ್ತಲಾಗಿ ನಮ್ಮ ಸೊಸೈಟಿಯ ಒಬ್ಬ ನೌಕರನಾದ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಎನ್ನುವ ವ್ಯಕ್ತಿ ನಮ್ಮ ಸೊಸೈಟಿ ಕುರಿತಂತೆ ಫೇಸ್‌ಬುಕ್ (Facebook) ನಲ್ಲಿ ಕೆಲವು ಪೋಸ್ಟಗಳನ್ನು ಹಾಕುತ್ತಾ ನಮ್ಮ ಸೊಸೈಟಿ ನೀಡಿದ ಒಂದು ಪತ್ರವನ್ನು ಪ್ರದರ್ಶಿಸಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ನಮ್ಮ ಸಂಸ್ಥೆಯ ಗಮನಕ್ಕೆ ಬಂದಿದ್ದು, ಇದರಿಂದಾಗಿ ನಮ್ಮ ಗ್ರಾಹಕರಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ ಈ ಪತ್ರಿಕಾ ಪ್ರಕಟಣೆ ಮುಖಾಂತರ ಎಲ್ಲ ವಿಷಯಗಳನ್ನು ಸ್ಪಷ್ಟಪಡಿಸಲು ಆಡಳಿತ ಮಂಡಳಿ ನಿರ್ಧರಿಸಿದಂತೆ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ವಿವಿಧ ಕಲಾ ಪ್ರಕಾರದ ಸಾಂಸ್ಕರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ ೨೬ ಹಾಗೂ ೨೭ರಂದು ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆಯುವ ವಲಯ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರತಿಭೆ ಪ್ರಸ್ತುತಪಡಿಸಲಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಕ್ಕಳ ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಹಾಗೂ ಕಲಾ ನೈಪುಣ್ಯತೆಯ ವೃದ್ಧಿಗೊಳಿಸುವತ್ತ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ನಗರದ ಕಂದಗಲ್ಲ ಶ್ರೀ ಹನಮಂತ್ರಾಯ ರಂಗಮಂದಿರ ಹಾಗೂ ವಾರ್ತಾ ಇಲಾಖೆಯ ಆವರಣದಲ್ಲಿ ಇದೇ ಡಿಸೆಂಬರ್ ೧೮ ಹಾಗೂ ೧೯ ರಂದು ಆಯೋಜಿಸಲಾಗಿತ್ತು.ಬಾಲ ಪ್ರತಿಭೆ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ-ಆರಾಧ್ಯಾ ಹೂಗಾರ, ಸುಗಮ ಸಂಗೀತ-ರಶ್ಮಿ ಬಗಲಿ, ಚಿತ್ರಕಲೆ-ಪ್ರಜ್ವಲ ಚವ್ಹಾಣ, ಜನಪದ ಗೀತೆ-ಪ್ರತೀಕ ರಾಠೋಡ, ಹಿಂದೂಸ್ಥಾನಿ-ಕರ್ನಾಟಕ ವಾದ್ಯ ಸಂಗೀತ-ಅನಂತ ಆಧ್ಯ, ಹಿಂದೂಸ್ಥಾನಿ-ಕರ್ನಾಟಕ ಶಾಸ್ರ‍್ತೀಯ ಸಂಗೀತ-ಸಮೀರ ಶೇಖ ಹಾಗೂ ಕಿಶೋರ ಪ್ರತಿಭೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೨೦/೧೧೦/೧೧ ಕೆವಿ ಬಸವನ ಬಾಗೇವಾಡಿ ಸ್ವೀಕರಣಾ ಕೇಂದ್ರದ ೨೦ ಎಮ್‌ವಿಎ, ೧೧೦/೩೩ ಕೆವಿ ಪರಿವರ್ತಕ-೧೮೨ ಹಾಗೂ ೨೦ ಎಮ್‌ವಿಎ, ೧೧೦/೩೩ ಕೆವಿ ಪರಿವರ್ತಕ-೩ ಮತ್ತು ೪ ಪರಿವರ್ತಕಗಳ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪರಿವರ್ತಕಗಳ ಮೇಲೆ ಬರುವ ೩೩ ಕೆವಿ ಮತ್ತು ೧೧ಕೆವಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ೩೩ಕೆವಿ ಮಾರ್ಗಗಳಲ್ಲಿ ಬರುವ ಮುತ್ತಗಿ, ಮನಗೂಳಿ, ಹೂವಿನ ಹಿಪ್ಪರಗಿ ೩೩ಕೆವಿ ಉಪಕೇಂದ್ರಗಳಲ್ಲಿಯೂ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿರ್ವಹಿಸಲು ಉದ್ದೇಶಿಸಿರುವುದರಿಂದ ಎಲ್ಲ ೩೩ ಕೆವಿ ಉಪ ಕೇಂದ್ರಗಳು ಹಾಗೂ ಅವುಗಳಿಂದ ಹೊರಹೊಗುವ ೧೧ ಕೆವಿ ಮಾರ್ಗಗಳಲ್ಲಿ ಹಾಗೂ ೨೨೦/೧೧೦/೧೧ ಕೆ ವಿ ಬಸವನ ಬಾಗೇವಾಡಿ ಸ್ವೀಕರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲೂ ಡಿ.೨೭ರ ಬೆಳಿಗ್ಗೆ ೧೦ ರಿಂದ ಸಂಜೆ ೫:೩೦ರವರೆಗೆ ವಿದ್ಯುತ್ ಸರಬಾರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಗಾಯಾಳುಗಳಿಗೆ 50 ಸಾವಿರ ರೂ.ಪರಿಹಾರ | ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಮುಖ್ಯ ಕಾರಣ | ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವೆಲ್ಸ್‌ನ ಸ್ಲೀಪರ್ ಬಸ್‌ಗೆ ಎದುರಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್ ದಾಟಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಈ ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವುಅಪಘಾತದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸಂಪೂರ್ಣ ವರದಿ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ…

Read More