ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ವಿವಿಧ ಕಲಾ ಪ್ರಕಾರದ ಸಾಂಸ್ಕರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ ೨೬ ಹಾಗೂ ೨೭ರಂದು ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆಯುವ ವಲಯ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರತಿಭೆ ಪ್ರಸ್ತುತಪಡಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಕ್ಕಳ ಮತ್ತು ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಹಾಗೂ ಕಲಾ ನೈಪುಣ್ಯತೆಯ ವೃದ್ಧಿಗೊಳಿಸುವತ್ತ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ನಗರದ ಕಂದಗಲ್ಲ ಶ್ರೀ ಹನಮಂತ್ರಾಯ ರಂಗಮಂದಿರ ಹಾಗೂ ವಾರ್ತಾ ಇಲಾಖೆಯ ಆವರಣದಲ್ಲಿ ಇದೇ ಡಿಸೆಂಬರ್ ೧೮ ಹಾಗೂ ೧೯ ರಂದು ಆಯೋಜಿಸಲಾಗಿತ್ತು.
ಬಾಲ ಪ್ರತಿಭೆ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ-ಆರಾಧ್ಯಾ ಹೂಗಾರ, ಸುಗಮ ಸಂಗೀತ-ರಶ್ಮಿ ಬಗಲಿ, ಚಿತ್ರಕಲೆ-ಪ್ರಜ್ವಲ ಚವ್ಹಾಣ, ಜನಪದ ಗೀತೆ-ಪ್ರತೀಕ ರಾಠೋಡ, ಹಿಂದೂಸ್ಥಾನಿ-ಕರ್ನಾಟಕ ವಾದ್ಯ ಸಂಗೀತ-ಅನಂತ ಆಧ್ಯ, ಹಿಂದೂಸ್ಥಾನಿ-ಕರ್ನಾಟಕ ಶಾಸ್ರ‍್ತೀಯ ಸಂಗೀತ-ಸಮೀರ ಶೇಖ ಹಾಗೂ ಕಿಶೋರ ಪ್ರತಿಭೆ ವಿಭಾಗದ ಶಾಸ್ತ್ರೀಯ ನೃತ್ಯ-ಸಾನ್ವಿ ದೊಡಮನಿ, ಚಿತ್ರಕಲೆ-ಸ್ನೇಹಾ ನಾಯಕ, ಜನಪದ ಗೀತೆ-ಸಾಚಿ ರಾಠೋಡ, ಹಿಂದೂಸ್ಥಾನಿ-ಕರ್ನಾಟಕ ವಾದ್ಯ ಸಂಗೀತ-ಓಂಕಾರ ಅಳ್ಳಗಿ, ಹಿಂದೂಸ್ಥಾನಿ-ಕರ್ನಾಟಕ ಶಾಸ್ರ‍್ತೀಯ ಸಂಗೀತ- ಸಮರ್ಥ ಹಿರೇಮಠ ಆಯ್ಕೆಯಾಗಿದ್ದಾರೆ.
ಯುವ ಪ್ರತಿಭೆ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ-ಐಶ್ವರ್ಯ ಗಾಯಕವಾಡ, ಸುಗಮ ಸಂಗೀತ- ಬಸವರಾಜ ನಾಟಿಕಾರ, ಚಿತ್ರಕಲೆ-ವಿಶ್ವನಾಥ ಕೆಂಭಾವಿ, ಹಿಂದೂಸ್ಥಾನಿ-ಕರ್ನಾಟಕ ವಾದ್ಯ ಸಂಗೀತ-ಸಚಿನ ಭಜಂತ್ರಿ ಹಿಂದೂಸ್ಥಾನಿ-ಕರ್ನಾಟಕ ಶಾಸ್ರ‍್ತೀಯ ಸಂಗೀತ-ಕಾಶೀನಾಥ ಭೋಸಲೆ, ಸಮೂಹ ಸ್ಪರ್ಧೆ ನಾಟಕ- ದೇವು ಕೆ. ಅಂಬಿಗ ಹಾಗೂ ಅವರ ತಂಡ ಬೆಳಗಾವಿಯಲ್ಲಿ ನಡೆಯುವ ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
