ಸತ್ಸಂಗಅಮೃತಾನಂದ ಶ್ರೀಗಳು ಸಿದ್ದೇಶ್ವರ ಶ್ರೀ ಆಶ್ರಮ ಕಾತ್ರಾಳ – ಬಾಲಗಾಂವ ಅವರಿಂದ ಇಂಡಿಯಲ್ಲಿ ನಡೆದ ಪ್ರವಚನ ಸಾರ
ಸಂಗ್ರಹ
– ಉಮೇಶ ಕೋಳೆಕರ
ಇಂಡಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಸಂತೋಷ ಸಮಾಧಾನ ತರುವ ವಿದ್ಯೆ ನಮಗೆ ಬೇಕು
ಹೊರಗಿನ ವಸ್ತುಗಳ ಬಗ್ಗೆ ಕಲಿಯುವದು ವಿದ್ಯೆ ಎಂದರೆ ಅದು ಸಂತೋಷ ಸಮಾಧಾನ ಕೊಡಬೇಕು. ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿದ್ದು ವಿದ್ಯಾ ಇಲ್ಲದವನ ಮುಖವು ಹಾಳುರ ಹದ್ದಿನಂತಿದೆ ಎಂಬ ಪ್ರತೀತಿ ಇದೆ. ವಿದ್ಯಾ ಜ್ಞಾನದ ಲಕ್ಷಣ. ಮನುಷ್ಯ ಚಿಂತೆಯಿಂದ ಮುಕ್ತನಾಗಬೇಕು. ಮನಸ್ಸಿನಲ್ಲಿ ಕೆಟ್ಟ ಚಿಂತೆ ಆಲೋಚನೆ ಅಸಮಾಧಾನ ಇರಬಾರದು. ಕಲಿತು ಖಿನ್ನರಾದರೆ ಚಿಂತೆ ಹೆಚ್ಚಾದರೆ ಜೀವನವೇ ಅಲ್ಲ. ಹೆಚ್ಚು ಸಮಾಧಾನ ಇರಲು ಕಲಿಯಬೇಕು. ಶಾಲೆ ಕಲಿಯದವನಿಗೆ ಜ್ಞಾನ ಇಲ್ಲ ಎಂದು ಹೇಳುತ್ತೇವೆ. ಕಲಿತವರಿಗೆ ಸಮಸ್ಯೆ ಚಿಂತೆ ದುಃಖ ಅಸಮಾಧಾನವಿದೆ. ಹೊರಗಿನ ವಸ್ತು ತಿಳಿಯಲು ಕಲಿತಿದ್ದೇವೆ. ಆಧ್ಯಾತ್ಮ ನಿಜವಾದ ವಿದ್ಯೆ ಲೌಕಿಕ ವಿದ್ಯೆಗೆ ಸಮಾಧಾನವಿಲ್ಲ, ಆಧ್ಯಾತ್ಮ ನಮ್ಮನ್ನು ಪ್ರಸನ್ನರನ್ನಾಗಿ ಮಾಡುತ್ತದೆ.
ಗುರುಕುಲಗಳಲ್ಲಿ ೧೨ ವರ್ಷದ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಮಕ್ಕಳಿಗೆ ಸ್ವಂತ ಅಧ್ಯಯನ ಸ್ವಾದ್ಯಾಯ ಮತ್ತು ಪ್ರವಚನ ಎಂದೂ ತಪ್ಪಿಸುತ್ತಿರಲಿಲ್ಲ. ಹೀಗಾಗಿ ಅವರಿಗೆ ಒಳ್ಳೆಯ ಸಂಸ್ಕಾರ ವಿತ್ತು. ಇಂದು ಮಾಯಾ ಪ್ರಪಂಚ ನಮ್ಮನ್ನು ಮರೆಸುತ್ತಿದೆ. ಸೂರ್ಯನಿಗೆ ಮೋಡಗಳು ಅಡ್ಡಾದರೂ ಸೂರ್ಯ ಪ್ರಮುಖವಾಗಿಯೇ ಇರುತ್ತಾನೆ. ಹಾಗೆ ನಮ್ಮಲ್ಲಿಯೂ ಜ್ಞಾನ ಸಾಕಷ್ಟಿದ್ದು ಮೋಡ ಬಂದರೆ ನಾವು ಮರೆ ಯಾಗುತ್ತಿದ್ದೇವೆ. ಅದಕ್ಕೆ ಮಾಯಾ ಪ್ರಪಂಚ ಎನ್ನುತ್ತೇವೆ. ಜಗತ್ತು ದೇವನ ವಿಸ್ತಾರ ರೂಪ. ದೇವರು ಇರದ ಸ್ಥಳವಿಲ್ಲ, ಪ್ರಪಂಚ ತೊರಿಕೆಯುಳ್ಳದ್ದು . ಶಾಸ್ವತವಾಗಿ ಇರುವದಿಲ್ಲ, ಸ್ಥಿತಿ ಗತಿ ಬದಲಾಗುತ್ತಿರುತ್ತದೆ. ನಿಮ್ಮ ಬದುಕು ಸುಂದರ ವಾಗಿರಲು ಆಶೆ ಮಾಡಬಾರದು.ಬುದ್ದ ಹೇಳುತ್ತಾರೆ. ಆಶೆ ದುಃಖಕ್ಕೆ ಮೂಲ ಸ್ವಲ್ಪ ಆಶೆ ಇರಲಿ, ಅತಿಆಶೆ ಇರಬಾರದು. ಸಾಕು ಎಂದರೆ ಸ್ವರ್ಗವಿರುತ್ತದೆ. ಆಶೆಗೆ ಲಕ್ಷ ನೀಡಿದರೆ ಬಿಪಿ ಸುಗರ ಬರುತ್ತವೆ.
ಮನೆಯಲ್ಲಿ ಹುಡುಗ ೯೯ ಅಂಕ ಪಡೆದಿದ್ದಾನೆ ಎಂದು ಖುಷಿ ಪಡಬೇಕು. ೧೦೦ ಅಂಕ ಪಡೆದಿಲ್ಲ ಎಂಬ ದುಃಖ ಇರಬಾರದು. ನಮಗೆ ಎಲ್ಲವೂ ಬೇಕು ಬೇಕು ಎನಿಸುತ್ತದೆ. ಜೀವನ ಸಾಗಿಸುವಷ್ಟು ಮನೆ ಬೇಕು. ಸಾಕು ಎನ್ನುವದು ಇರಬೇಕು. ಅನೇಕ ಶ್ರೀಮಂತರು ತೋಟಕ್ಕೆ ಹೋಗಿ ಗುಡಿಸಲಿನಲ್ಲಿ ಇರುತ್ತಾರೆ. ಕಾರಣ ಆನಂದದಿಂದ ಇರಲು. ಪಟ್ಟಣದಲ್ಲಿ ಒಳ್ಳೆಯ ಮನೆ ಇದ್ದರೂ ಗುಡಿಸಲು ವಾಸದಿಂದ ಸಂತೋಷ ಪಡುತ್ತಿದ್ದರೆ ಅದುವೇ ಜೀವನ, ನಮ್ಮದಿಗಾಗಿ ಏನಿದ್ದರೂ ಸ್ವಾಗತಿಸಬೇಕು. ಕೀಳುರಮೆ ಇರಬಾರದು. ಮನುಷ್ಯನಿಗೆ ಶ್ರೀಮಂತ ನಾಗಲು ಕನಸು ಇರಬೇಕು. ಸಾಕಷ್ಟು ಗಳಿಸುವ ಕನಸು ಬೇಡ. ದುಡಿಯುವದು, ಗಳಿಸುವದು, ಕೂಡಿಸುವದು ಬೇಕು ಆದರೆ ಅದು ಅತೀಯಾಗಬಾರದು. ಜೀವ ಹೋಗುತ್ತದೆ. ಆದರೆ ಗಳಿಸಿದ್ದು ಇಲ್ಲೆ ಉಳಿಯುತ್ತದೆ.
ಆಶೆ ಇದ್ದರೆ ಮನುಷ್ಯ ಸಂತೋಷದಿಂದ ಇರುವದಿಲ್ಲ. ಕೊಟ್ಟು ಸಂತೋಷ ಪಡಿಸಲು ಸಾದ್ಯವಿಲ್ಲ. ಬೇಕು ಎಂದರೆ ಸುಗರ ಬಿಪಿ ಜಗಳ ಬರುತ್ತವೆ. ಇಗಿನ ಜಗತ್ತಿನಲ್ಲಿ ಸಮಯಕ್ಕೆ ಗುಳಗೆ ಸಮಯಕ್ಕೆ ಸರಿಯಾಗಿ ಕೋರ್ಟು ಜಗಳ ಸಾಕಷ್ಟು ಇವೆ. ಸಾಕು ಎಂದರೆ ಸಮಾಧಾನ ವಿದೆ. ಹೆಚ್ಚಾದರೆ ಸಮಾಧಾನವಿರುವದಿಲ್ಲ. ನಮ್ಮ ಜೀವನ ಸ್ವರ್ಗ ಸಮುದ್ರ ಹಾಗೆ ಇದ್ದೇವೆ ಎಂಬ ಭಾವನೆ ಇರಬೇಕು.ಆಶೆ ಕಡಿಮೆ ಮಾಡಬೇಕು. ಸಾಕು ಎನ್ನುವಂತಿರಬೇಕು. ಇದುವೇ ಮೂಲಮಂತ್ರ, ಹಣದಿಂದ ಸಮೃದ್ದಿಯಾಗಲು ಸಾದ್ಯವಿಲ್ಲ, ಹಣದಿಂದ ಮನುಷ್ಯ ಸಂತೃಪ್ತರಾಗಿಲ್ಲ, ಯಾರಿಗೂ ಸಮಾಧಾನವಿಲ್ಲ, ಆಯುಷ್ಯ ಎಷ್ಟು ಇದೆ ಅಷ್ಟೇ ಇರುತ್ತದೆ. ಬೇಕು ಆಶೆ ಅತಿಆಶೆ ಇರಬಾರದು. ಸಾಕು ಎಂಬುದನ್ನು ಯೋಚಿಸಬೇಕು. ಹಣ ಸಮಯ ಸಾಕಷ್ಟು ಕೊಟ್ಟಿದೆ. ಮನಸ್ಸಿನಲ್ಲಿ ಕೊರತೆ ಇದೆ ಬೇಕು ಎಂಬುದು ಮನಸ್ಸಿನಲ್ಲಿ ಬಂದರೆ ಅವರು ಶ್ರೀಮಂತರಾಗುವದಿಲ್ಲ. ಕಾರಣ ಎಲ್ಲಿರುಗೂ ಶ್ರೀಮಂತರೆಂಬ ಭಾವ ಇರಬೇಕು.

