ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೨೦/೧೧೦/೧೧ ಕೆವಿ ಬಸವನ ಬಾಗೇವಾಡಿ ಸ್ವೀಕರಣಾ ಕೇಂದ್ರದ ೨೦ ಎಮ್‌ವಿಎ, ೧೧೦/೩೩ ಕೆವಿ ಪರಿವರ್ತಕ-೧೮೨ ಹಾಗೂ ೨೦ ಎಮ್‌ವಿಎ, ೧೧೦/೩೩ ಕೆವಿ ಪರಿವರ್ತಕ-೩ ಮತ್ತು ೪ ಪರಿವರ್ತಕಗಳ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪರಿವರ್ತಕಗಳ ಮೇಲೆ ಬರುವ ೩೩ ಕೆವಿ ಮತ್ತು ೧೧ಕೆವಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ೩೩ಕೆವಿ ಮಾರ್ಗಗಳಲ್ಲಿ ಬರುವ ಮುತ್ತಗಿ, ಮನಗೂಳಿ, ಹೂವಿನ ಹಿಪ್ಪರಗಿ ೩೩ಕೆವಿ ಉಪಕೇಂದ್ರಗಳಲ್ಲಿಯೂ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿರ್ವಹಿಸಲು ಉದ್ದೇಶಿಸಿರುವುದರಿಂದ ಎಲ್ಲ ೩೩ ಕೆವಿ ಉಪ ಕೇಂದ್ರಗಳು ಹಾಗೂ ಅವುಗಳಿಂದ ಹೊರಹೊಗುವ ೧೧ ಕೆವಿ ಮಾರ್ಗಗಳಲ್ಲಿ ಹಾಗೂ ೨೨೦/೧೧೦/೧೧ ಕೆ ವಿ ಬಸವನ ಬಾಗೇವಾಡಿ ಸ್ವೀಕರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲೂ ಡಿ.೨೭ರ ಬೆಳಿಗ್ಗೆ ೧೦ ರಿಂದ ಸಂಜೆ ೫:೩೦ರವರೆಗೆ ವಿದ್ಯುತ್ ಸರಬಾರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
