Author: editor.udayarashmi@gmail.com

ದೇವರಹಿಪ್ಪರಗಿ: ಸುರಕ್ಷತೆ ಹಾಗೂ ಜಾಗೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಪಿ.ಎಮ್.ಚೌರ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶನಿವಾರ ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಂದಗಿ ಇವರ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಜರುಗಿದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳು ರಸ್ತೆಯ ಕುರಿತಾದ ನಿಯಮಗಳನ್ನು ಅರಿತು ಇತರರಿಗೂ ತಿಳುವಳಿಕೆ ನೀಡಬೇಕು ಎಂದು ಹೇಳುತ್ತಾ, ತುರ್ತು ಸೇವೆಗೆಂದು ಇರುವ ವಿವಿಧ ಸೇವೆಗಳ ಬಗ್ಗೆ ಸವಿವರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.ವಕೀಲ ಕಾಶೀನಾಥ ಚವ್ಹಾಣ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅಹಿತಕರ ಘಟನೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸುತ್ತಾ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಅವಶ್ಯಕತೆಯನ್ನು ತಿಳಿಸಿದರು.ವಕೀಲರುಗಳಾದ ರವಿ ನಾಯಕ, ರಾಜಕುಮಾರ ಬಿರಾದಾರ, ಪ್ರೌಢಶಾಲೆ ಮುಖ್ಯಶಿಕ್ಷಕ ಈರಣ್ಣ ನರೂಣಿ ಹಾಗೂ ಶಿಕ್ಷಕ ಜಿ.ಪಿ.ಬಿರಾದಾರ ಮಾತನಾಡಿದರು.ವಕೀಲ ಮಲ್ಲಿಕಾರ್ಜುನ ಪಡಗಾನೂರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಳಿ ಏದ್ದೇಳಿ ! ಎಂದು ವಿವೇಕಾನಂದರು ದೇಶದ ಯುವಕರು ಜಾಗೃತಗೊಳ್ಳಲು ಹೇಳಿದ ಮಾತು ಎಂದು ಜಿ ಆರ್ ಕುಲಕರ್ಣಿ ಹೇಳಿದರು.ಜ.11 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ ನಡೆದ ವಿವೇಕಾನಂದ 163 ನೇ ಜಯಂತೋತ್ಸವ ಅಂಗವಾಗಿ ಆನಂದ ಗೋಡಸೆ ದಂಪತಿಗಳ ಪ್ರಾಯೋಜಿತ, “ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು (ರಿ) ವಿಜಯಪುರ ಜಿಲ್ಲಾ ಸಮಿತಿ” ಆಯೋಜನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ‘ ವಿವೇಕಾನಂದರಿಗೆ ಹಿಂದೂಧರ್ಮ ಆಳ ಅಧ್ಯಯನ ಜೊತೆಗೆ ಅಪರಿಮಿತವಾದ ದೇಶಭಕ್ತಿ , ರಾಷ್ಟ್ರೀಯ ಕಲ್ಪನೆ ಇತ್ತು. ಮಹಾತ್ಮ ಗಾಂಧಿಜೀ , ಅರವಿಂದರು , ಸುಭಾಷ್ ಚಂದ್ರ ಬೋಸ್ , ಡಾ.ಹೆಡ್ಗೆವಾರ್ , ಸಾವರ್ಕರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು , ರವೀಂದ್ರನಾಥ್ ಟಾಗೋರ್ ಅವರಿಗೂ ವಿವೇಕಾನಂದರು ಪ್ರೇರಣೆಯಾಗಿದ್ದರು. ಅಮೆರಿಕದ ಶಿಕ್ಯಾಗೊ ಭಾಷಣದಿಂದ ಹಿಂದೂಧರ್ಮದ ಸಂಸ್ಕಾರ, ತತ್ವಗಳು ಜಗತ್ತಿಗೆ ಅನಾವರಣವಾದವು. ಅವರ ಗುರುಭಕ್ತಿ, ವಿನಯ , ಸಂಸ್ಕಾರ, ಶ್ರದ್ಧೆ – ಸಂಕಲ್ಪಗಳಿಂದ ಅವರು ಆಧ್ಯಾತ್ಮಿಕ ಸಾಧನೆ…

Read More

ಸ್ವಾಮಿ ವಿವೇಕಾನಂದ ಜಯಂತಿ | ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಹೇಳಿದರು.ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಸ್ವಾಮಿ ವಿವೇಕಾನಂದರು ಯುವ ಮನಸ್ಸುಗಳಿಗೆ ಪ್ರೇರಣಾಶಕ್ತಿ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಭವ್ಯ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರುಗಳಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟ, ಕುಮಾರ ಗಡಗಿ, ಗಿರೀಶ ಬಿರಾದಾರ, ಮಳುಗೌಡ ಪಾಟೀಲ, ಅಶೋಕ ನ್ಯಾಮಗೌಡ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಚಂದ್ರಶೇಖರ ಚೌದರಿ, ಮುಖಂಡರಾದ ರಾಜು…

Read More

ಉದಯರಶ್ಮಿ ದಿನಪತ್ರಿಕೆ ಹೊನವಾಡ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು ಶಿಕ್ಷಕ ಧರೆಪ್ಪ ಸಿದ್ನಾಥ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಬಸವಂತರಾಯ ಪದವಿ ಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163ನೇ ಜಯಂತಿಯನ್ನು ಆಚರಿಸಲಾಯಿತು.ವಿವೇಕಾನಂದರ ಆದರ್ಶ, ಬೋಧನೆಗಳು ಯುವ ಜನಾಂಗಕ್ಕೆ ಇಂದಿಗೂ, ಎಂದಿಗೂ ಅನುಪಾಲನಾ ಸೂತ್ರಗಳು. ಅವರ ನಡೆ- ನುಡಿ, ಅವರ ಜೀವನದ ಪ್ರಸಂಗಗಳು ದಂತಕಥೆಗಳಾಗಿ ಬೆಳಗುತ್ತಿವೆ ಎಂದು ಉಪನ್ಯಾಸಕರಾದ ಕೃಷ್ಣಾ ಕಾಳೆ ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎಂ ಜಿ ಕುಲಕರ್ಣಿ ಎಂ ಎಸ್ ಹಿರೇಮಠ ಎಸ್ ಎ ವಾಲಿಕಾರ ಮಂಜುನಾಥ ಪಾತ್ರೊಟ ನಿವೇದಿತಾ ಹಿರೇಮಠ ಐ ಕೆ ನದಾಪ ನವೀನ ಹಿರೇಮಠ ರಜನಿ ಗುದಗೇನವರ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಂದೆ ತಾಯಿಗಳ ಸೇವೆಮಾಡುವುದೇ ಬಹಳ ಮುಖ್ಯ ಅವರನ್ನು ಅನಾಥಾಶ್ರಮದಲ್ಲಿಟ್ಟು ನೂರಾರು ದೇವರಿಗೆ ಹರಕ್ಕೆ ಮಾಡಿದರೆ ಪ್ರಯೋಜನವಿಲ್ಲಾ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ಲಿಂಗೈಕ್ಯ ನಿಜಲಿಂಗಪ್ಪ ಅಳ್ಳೊಳ್ಳಿ ಅವರ ತೃತೀಯ ಪುಣ್ಯಸ್ಮರಣಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಗ್ರಾಮದ ಮಹಾಮಹಿಮ ಮುಕ್ತಂಕಾರದ ಪುಣ್ಯ ಭೂಮಿ ಆದಿಶೇಷ ಕೂಸಾದ ಮಹಾತ್ಮ ಅವತರಿಸಿದ ಈ ಭೂಮಿಯಲ್ಲಿ ನ್ಯಾಯವಾದಿ ಅಳ್ಳೊಳ್ಳಿ ಜನಿಸಿ ಹಲವಾರು ರಚನಾತ್ಮಕ ಕಾರ್ಯಮಾಡಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಳಿಯಂದಿರಾದ ಡಿವೈಎಸ್ಪಿ ಬಸವರಾಜ ಯಲಗಾರ ಹಾಗೂ ಡಾ. ಗಜೇಂದ್ರ ಮಹಿಶ್ಯಾಳೆ ಅವರು ಅಳ್ಳೊಳ್ಳಿ ಅವರ ನೆನಪಿನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಿ ಬಿಪಿ ಶುಗರ ಮುಂತಾದ ರೋಗಗಳ ಮುಂಜಾಗ್ರತಾ ಕ್ರಮಗಳ ಕುರಿತು ನುರಿತ ವೈದ್ಯರಿಂದ ಪ್ರಾತ್ಯಕ್ಷೀಕೆ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶೈಲಜಾ ಅಳ್ಳೊಳ್ಳಿ, ದೀಪಾ ಮಹಿಶಾಲೆ ಶಿಲ್ಪಾ ಯಲಿಗಾರ, ಕಾಶಿನಾಥ ಶರಣರು,…

Read More

ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಹೆಚ್ ಡಿ ಕೋಟೆ: ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ರಾಜಕೀಯಕ್ಕೆ ಬರುತ್ತಾರಾ? ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ..? ತೆರೆಮರೆಯಲ್ಲಿ ರಾಜಕೀಯ ಆಗುಹೋಗು ಗಮನಿಸುತ್ತಾ, ಪತಿ ಅನಿಲ್ ಚಿಕ್ಕಮಾದುಗೆ ಸಲಹೆ, ಸೂಚನೆ ನೀಡುತ್ತಾ ಬರುತ್ತಿರುವ ಸೌಮ್ಯ ಅನಿಲ್ ಚಿಕ್ಕಮಾದು ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರಾ.. ಈ ಎಲ್ಲ ಪ್ರಶ್ನೆಗಳು ಹೆಚ್ ಡಿ ಕೋಟೆ ಅಥವಾ ಸರಗೂರು ತಾಲೂಕಿನ ಮತದಾರರ ಪ್ರಭುಗಳಲ್ಲಿ ಮಾತ್ರ ಉದ್ಭವಿಸುತ್ತಿಲ್ಲ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಮಾತಾಡಿಕೊಳ್ಳುತ್ತಿದ್ದಾರೆ. ಸಭೆ ಸಮಾರಂಭಗಳು ಮುಗಿದ ಬಳಿಕ ರಾಜಕೀಯ ಪಡಸಾಲೆಯಲ್ಲಿ ಕುಳಿತು ಚರ್ಚಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸೌಮ್ಯ ಅನಿಲ್ ಚಿಕ್ಕಮಾದು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು. ಜೊತೆಗೆ ಅವರ ಪ್ರಬುದ್ಧ ಮಾತುಗಾರಿಕೆ.ನಂಜನಗೂಡು ತಾಲೂಕಿನ ತಾಂಡವಪುರ ಸಮೀಪದ ಹಳ್ಳಿದಿದ್ದಿ ಗ್ರಾಮದ ಸೌಮ್ಯ ಅನಿಲ್ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಶುಭ ಸಮಾರಂಭಗಳ ಜೊತೆಗೆ ಕೆಲ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲೆಲ್ಲ ಅನಿಲ್…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪ್ರಾಥಮಿಕ ಶಾಲಾ ಹಂತದಲ್ಲೆ ಮಕ್ಕಳು ಶಿಕ್ಷಣ ಪಡೆಯುವದರ ಜೊತೆಗೆ ಅವರಲ್ಲಿ ದೈನಂದಿನ ಜೀವನದಲ್ಲಿ ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಶಾಲೆಯಲ್ಲಿ ಏರ್ಪಡಿಸಿದ ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದು ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಿದಾನಂದ ಅವಟಿ ಹೇಳಿದರು.ತಾಲ್ಲೂಕಿನ ಕನಮಡಿ ಗ್ರಾಮದ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ ಮಕ್ಕಳ‌ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಕ್ಕಳು ಸ್ಚಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಈ ಸಂತೆ ಮೇಳ ಮಕ್ಕಳ ಬದುಕಿಗೆ ಸಹಕಾರಿಯಾಗಲಿದೆ ಎಂದರು.ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಮಾತನಾಡಿ ಮಕ್ಕಳ ಸಂತೆ ಏರ್ಪಡಿಸುವದರಿಂದ ಮಕ್ಕಳಿಗೆ ತೂಕ, ಲೀಟರ್ ಮಾಪನ, ಸಂಕಲನ, ವ್ಯವಕಲನ , ಗುಣಾಕಾರ ಸೇರಿದಂತೆ ಇತರೆ ಮೌಖಿಕವಾಗಿ ಲೆಕ್ಕ ಮಾಡುವ ಕಲೆ ಬೆಳೆಯುವದು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ಹೊಸಮನಿ, ಶಂಕರಗೌಡ ಬಿರಾದಾರ, ರಾಮು ಚಡಚಣ, ಮುಖ್ಯೋಪಾಧ್ಯಾಯ ಬಿ.ಎಸ್‌.ಪಡನೂರ, ಗ್ರಾಮಸ್ಥರು ಮಕ್ಕಳು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇಶಕ್ಕೆ ಸ್ವಾಮಿ ವಿವೇಕಾನಂದರು ದೊಡ್ಡ ಘನತೆಯಾಗಿದ್ದಾರೆ. ಇವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರವಾದ ಜೀವನ ಸಾಗಿಸಬಹುದು ಎಂದು ದೇವರಹಿಪ್ಪರಗಿಯ ಜಿ.ಎಫ್.ಜಿ.ಸಿ. ಕಾಲೇಜಿನ ದೈಹಿಕ ನಿರ್ದೇಶಕ ಮಲ್ಲಿಕಾರ್ಜುನ ಲಕ್ಷ್ಮೀಶ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್.ಎಸ್.ಎಸ್. ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಅಮೇರಿಕಾದ ಚಿಕ್ಯಾಗೋ ಸರ್ವಧರ್ಮದಲ್ಲಿ ವಿವೇಕಾನಂದರ ಭಾಷಣವು ಭಾರತದ ಬಗ್ಗೆ ಮೂಡಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ದೇಶಕ್ಕೊಂದು ಘನತೆ ಗೌರವ ತಂದುಕೊಡುವಲ್ಲಿ ಯಶಸ್ವಿಯಾಯಿತು. ಇದು ಇಡೀ ಪಾಶ್ಚಿಮಾತ್ಯ ದೇಶಗಳು ಭಾರತದ ಪಾದಕ್ಕೆರಗಿದ್ದು ಐತಿಹಾಸಿಕ ದಿನವಾಗಿದೆ ಎಂದರು.ಜ್ಞಾನ, ವಿಜ್ಞಾನ, ಆಧ್ಯಾತ್ಮಿಕತೆ, ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ತವರು ಮನೆಯಂತಿದ್ದ ಭಾರತದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತುಚ್ಛ ಭಾವನೆಯನ್ನುಇಟ್ಟುಕೊಂಡಿದ್ದವು. ಪ್ರಾಚೀನ ಕಾಲದಿಂದಲೂ ಭಾರತ ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಅಪಾರವಾದ ಜ್ಞಾನವನ್ನು ಜಗತ್ತಿಗೆ ಧಾರೆಯೆದಿದೆ. ಭಾರತದ ತತ್ವ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಸ್ಪೀಡ್ ಲಿಮಿಟ್ ಅಳವಡಿಸುವಂತೆ ವಿವೇಕ ಬ್ರಿಗೇಡ್ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಪಟ್ಟಣದಲ್ಲಿ ಜನಸಂದಣಿ ಮತ್ತು ವಾಹನಗಳ ಸಂಚಾರವು ಕೂಡ ಹೆಚ್ಚಾಗಿದೆ. ವೃದ್ಧರು, ಮಕ್ಕಳು ನಡೆದಾಡುವ ಸ್ಥಳಗಳಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಕೆಲವೊಂದು ಅಪಘಾತಗಳು ಆಗುತ್ತಿವೆ. ಪಟ್ಟಣ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್ ಕಚೇರಿಯಿಂದ ವಿಜಯಪುರ ರಸ್ತೆಯ ಬಸವೇಶ್ವರ ಮಹಾವಿದ್ಯಾಲಯದವರೆಗೆ ಮತ್ತು ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ವಾಹನಗಳ ಚಾಲನೆ ಮಿತಿ 40 ಕಿ.ಮೀ. ಗಂಟೆಗೆ ಸ್ಪೀಡ್ ಲಿಮಿಟ್ ಅಳವಡಿಸಬೇಕು. ಜನ ದಟ್ಟಣೆಯ ಪ್ರದೇಶವಾದ ಬಸವೇಶ್ವರ ದೇವಾಲಯ ಎದುರಿಗೆ ಮತ್ತು ಬಸ್ ನಿಲ್ದಾಣದ ಎದುರಿಗೆ ಹಾಗೂಅಂಬೇಡ್ಕರ್ ವೃತ್ತ, ಸರ್ಕಾರಿ ಆಸ್ಪತ್ರೆ, ಅರಳಿಕಟ್ಟಿ ಮತ್ತು ಬಸವ ಭವನ ಹತ್ತಿರ ಜೀಬ್ರಾ ಕ್ರಾಸ್ ಗಳನ್ನು ಹಾಕಿಸಿ ಅಪಘಾತವನ್ನು ತಡೆಗಟ್ಟಬೇಕೆಂದು ವಿನಂತಿಸಲಾಗಿದೆ.ಈ ಸಂದರ್ಭದಲ್ಲಿ ವಿವೇಕ್ ಬ್ರಿಗೇಡ್ ಸಂಘಟನೆಯ ವಿನುತ ಕಲ್ಲೂರ, ಶಂಕರ ಬೈಕೋಳ, ರವಿ ಚಿಕ್ಕೊಂಡ,ಶಶಿಕಾಂತ ಸ್ಥಾವರಮಠ,ಪ್ರಜ್ವಲ ಕಾರಕೂನ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಮಾಜದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ಸರ್ಕಾರಕ್ಕಿಂತ ಹೆಚ್ಚು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜೀವನದ ಕಷ್ಟಕಾರ್ಪಣ್ಯಗಳಿಗೆ ಪರಿಹಾರವಾಗಿ ಶ್ರೀಸತ್ಯನಾರಾಯಣ ಪೂಜೆ ಕೈಗೊಳ್ಳುವುದು ಹಿಂದಿನಿAದಲೂ ಬಂದಿದೆ. ಈಗ ಸಮಾಜದಲ್ಲಿ ಸಾಮೂಹಿಕ ಪೂಜೆ ಕೈಗೊಂಡು ಉತ್ತಮ ಕಾರ್ಯ ಮಾಡಿದೆ ಎಂದರು.ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ಧರ್ಮಸ್ಥಳ ಟ್ರಸ್ಟ್ ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೇ ಕೆರೆ ಹೂಳು ತೆಗೆಯುವ ಕಾರ್ಯ ನಿರ್ವಹಿಸಿ ನೀರಾವರಿ ಕ್ಷೇತ್ರಕ್ಕೂ ತನ್ನ ಸೇವೆ ವಿಸ್ತರಿಸಿದೆ ಎಂದು ಹೇಳಿ ಬಳ್ಳಾರಿಯಲ್ಲಿ…

Read More