ದೇವರಹಿಪ್ಪರಗಿ: ಸುರಕ್ಷತೆ ಹಾಗೂ ಜಾಗೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಪಿ.ಎಮ್.ಚೌರ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶನಿವಾರ ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಂದಗಿ ಇವರ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಜರುಗಿದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ರಸ್ತೆಯ ಕುರಿತಾದ ನಿಯಮಗಳನ್ನು ಅರಿತು ಇತರರಿಗೂ ತಿಳುವಳಿಕೆ ನೀಡಬೇಕು ಎಂದು ಹೇಳುತ್ತಾ, ತುರ್ತು ಸೇವೆಗೆಂದು ಇರುವ ವಿವಿಧ ಸೇವೆಗಳ ಬಗ್ಗೆ ಸವಿವರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.
ವಕೀಲ ಕಾಶೀನಾಥ ಚವ್ಹಾಣ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅಹಿತಕರ ಘಟನೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸುತ್ತಾ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಅವಶ್ಯಕತೆಯನ್ನು ತಿಳಿಸಿದರು.
ವಕೀಲರುಗಳಾದ ರವಿ ನಾಯಕ, ರಾಜಕುಮಾರ ಬಿರಾದಾರ, ಪ್ರೌಢಶಾಲೆ ಮುಖ್ಯಶಿಕ್ಷಕ ಈರಣ್ಣ ನರೂಣಿ ಹಾಗೂ ಶಿಕ್ಷಕ ಜಿ.ಪಿ.ಬಿರಾದಾರ ಮಾತನಾಡಿದರು.
ವಕೀಲ ಮಲ್ಲಿಕಾರ್ಜುನ ಪಡಗಾನೂರ, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ ಸಾಹೇಬಗೌಡ ನಾಗರಳ್ಳಿ, ಪೊಲೀಸ್ ಇಲಾಖೆಯ ರಮೇಶ. ಕುಂಬಾರ, ಕೆ.ಎಮ್.ರೋಡಗಿ, ಶ್ರೀಕಾಂತ ಸಿನ್ನೂರ, ಶಿಕ್ಷಕರಾದ ಪಿ.ಆರ್.ಜಾಧವ, ರಾಘವೇಂದ್ರ. ಕುಲಕರ್ಣಿ, ಎ.ಎ.ಗಚ್ಚಿನಮಾಲ, ಸುರೇಶ ರಾಠೋಡ, ಮನೋಹರ ಬಡಿಗೇರ, ಶಬ್ಬೀರ ಅಹ್ಮದ, ಈರಣ್ಣ ಬಸರಕೋಡ, ಪ್ರದೀಪ ಹದರಿ, ರಾಜಶೇಖರ ಸನಕಿ, ರೇಣುಕಾ.ತಳಕೇರಿ ಸೇರಿದಂತೆ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

