ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಏಳಿ ಏದ್ದೇಳಿ ! ಎಂದು ವಿವೇಕಾನಂದರು ದೇಶದ ಯುವಕರು ಜಾಗೃತಗೊಳ್ಳಲು ಹೇಳಿದ ಮಾತು ಎಂದು ಜಿ ಆರ್ ಕುಲಕರ್ಣಿ ಹೇಳಿದರು.
ಜ.11 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ ನಡೆದ ವಿವೇಕಾನಂದ 163 ನೇ ಜಯಂತೋತ್ಸವ ಅಂಗವಾಗಿ ಆನಂದ ಗೋಡಸೆ ದಂಪತಿಗಳ ಪ್ರಾಯೋಜಿತ, “ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು (ರಿ) ವಿಜಯಪುರ ಜಿಲ್ಲಾ ಸಮಿತಿ” ಆಯೋಜನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ‘ ವಿವೇಕಾನಂದರಿಗೆ ಹಿಂದೂಧರ್ಮ ಆಳ ಅಧ್ಯಯನ ಜೊತೆಗೆ ಅಪರಿಮಿತವಾದ ದೇಶಭಕ್ತಿ , ರಾಷ್ಟ್ರೀಯ ಕಲ್ಪನೆ ಇತ್ತು. ಮಹಾತ್ಮ ಗಾಂಧಿಜೀ , ಅರವಿಂದರು , ಸುಭಾಷ್ ಚಂದ್ರ ಬೋಸ್ , ಡಾ.ಹೆಡ್ಗೆವಾರ್ , ಸಾವರ್ಕರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು , ರವೀಂದ್ರನಾಥ್ ಟಾಗೋರ್ ಅವರಿಗೂ ವಿವೇಕಾನಂದರು ಪ್ರೇರಣೆಯಾಗಿದ್ದರು. ಅಮೆರಿಕದ ಶಿಕ್ಯಾಗೊ ಭಾಷಣದಿಂದ ಹಿಂದೂಧರ್ಮದ ಸಂಸ್ಕಾರ, ತತ್ವಗಳು ಜಗತ್ತಿಗೆ ಅನಾವರಣವಾದವು. ಅವರ ಗುರುಭಕ್ತಿ, ವಿನಯ , ಸಂಸ್ಕಾರ, ಶ್ರದ್ಧೆ – ಸಂಕಲ್ಪಗಳಿಂದ ಅವರು ಆಧ್ಯಾತ್ಮಿಕ ಸಾಧನೆ ಮಾಡಿದರು. ಇಂದಿನ ಯುವಕರು ವಿವೇಕಾನಂದ ಒಂದು ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ನಾರಾಯಣ ಬಾಬಾನಗರ ವಹಿಸಿದ್ದರು. ನಿರೂಪಣೆ ಶ್ರೀರಂಗ ಕುಲಕರ್ಣಿ, ಸ್ವಾಗತ ಪರಿಚಯ ವಿಠ್ಠಲ ಜಾಧವ , ಪ್ರಾಸ್ತಾವಿಕ ಆನಂದ ಗೋಡಸೆ, ಪ್ರಾರ್ಥನೆ ಕು. ಸುದ್ಞೇತಾ ಕುಲಕರ್ಣಿ, ವಂದನಾರ್ಪಣೆ ಶ್ರೀಮತಿ ವಿದ್ಯಾವತಿ ಬೆಣ್ಣುರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಹರ್ಷವರ್ಧನ ಸರಾಫ್ , ಚಿದಂಬರ ಪಾಟೀಲ, ವಿವೇಕ ಕುಲಕರ್ಣಿ, ಸುಕಾಂತ ಕುಲಕರ್ಣಿ , ಶ್ರೀರಂಗ ಪುರಾಣಿಕ, ಬಳವಂತ ಕುಲಕರ್ಣಿ , ಮಯೂರ ತಿಳಗೂಳಕರ, ಕೃಷ್ಣ ಬಿಡಕರ, ಸಂದೀಪ ದೇಸಾಯಿ , ವಿಶ್ವನಾಥ ಕುಲಕರ್ಣಿ , ಶ್ರೀಮತಿ ಭಾರತಿ ಗೋಡಸೆ , ಶ್ರೀಮತಿ ಮಧುರಿ ಕುಲಕರ್ಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

