ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು ಶಿಕ್ಷಕ ಧರೆಪ್ಪ ಸಿದ್ನಾಥ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಬಸವಂತರಾಯ ಪದವಿ ಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163ನೇ ಜಯಂತಿಯನ್ನು ಆಚರಿಸಲಾಯಿತು.
ವಿವೇಕಾನಂದರ ಆದರ್ಶ, ಬೋಧನೆಗಳು ಯುವ ಜನಾಂಗಕ್ಕೆ ಇಂದಿಗೂ, ಎಂದಿಗೂ ಅನುಪಾಲನಾ ಸೂತ್ರಗಳು. ಅವರ ನಡೆ- ನುಡಿ, ಅವರ ಜೀವನದ ಪ್ರಸಂಗಗಳು ದಂತಕಥೆಗಳಾಗಿ ಬೆಳಗುತ್ತಿವೆ ಎಂದು ಉಪನ್ಯಾಸಕರಾದ ಕೃಷ್ಣಾ ಕಾಳೆ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎಂ ಜಿ ಕುಲಕರ್ಣಿ ಎಂ ಎಸ್ ಹಿರೇಮಠ ಎಸ್ ಎ ವಾಲಿಕಾರ ಮಂಜುನಾಥ ಪಾತ್ರೊಟ ನಿವೇದಿತಾ ಹಿರೇಮಠ ಐ ಕೆ ನದಾಪ ನವೀನ ಹಿರೇಮಠ ರಜನಿ ಗುದಗೇನವರ ಉಪಸ್ಥಿತರಿದ್ದರು.

