ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಂದೆ ತಾಯಿಗಳ ಸೇವೆಮಾಡುವುದೇ ಬಹಳ ಮುಖ್ಯ ಅವರನ್ನು ಅನಾಥಾಶ್ರಮದಲ್ಲಿಟ್ಟು ನೂರಾರು ದೇವರಿಗೆ ಹರಕ್ಕೆ ಮಾಡಿದರೆ ಪ್ರಯೋಜನವಿಲ್ಲಾ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ಲಿಂಗೈಕ್ಯ ನಿಜಲಿಂಗಪ್ಪ ಅಳ್ಳೊಳ್ಳಿ ಅವರ ತೃತೀಯ ಪುಣ್ಯಸ್ಮರಣಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಗ್ರಾಮದ ಮಹಾಮಹಿಮ ಮುಕ್ತಂಕಾರದ ಪುಣ್ಯ ಭೂಮಿ ಆದಿಶೇಷ ಕೂಸಾದ ಮಹಾತ್ಮ ಅವತರಿಸಿದ ಈ ಭೂಮಿಯಲ್ಲಿ ನ್ಯಾಯವಾದಿ ಅಳ್ಳೊಳ್ಳಿ ಜನಿಸಿ ಹಲವಾರು ರಚನಾತ್ಮಕ ಕಾರ್ಯಮಾಡಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಳಿಯಂದಿರಾದ ಡಿವೈಎಸ್ಪಿ ಬಸವರಾಜ ಯಲಗಾರ ಹಾಗೂ ಡಾ. ಗಜೇಂದ್ರ ಮಹಿಶ್ಯಾಳೆ ಅವರು ಅಳ್ಳೊಳ್ಳಿ ಅವರ ನೆನಪಿನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಿ ಬಿಪಿ ಶುಗರ ಮುಂತಾದ ರೋಗಗಳ ಮುಂಜಾಗ್ರತಾ ಕ್ರಮಗಳ ಕುರಿತು ನುರಿತ ವೈದ್ಯರಿಂದ ಪ್ರಾತ್ಯಕ್ಷೀಕೆ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶೈಲಜಾ ಅಳ್ಳೊಳ್ಳಿ, ದೀಪಾ ಮಹಿಶಾಲೆ ಶಿಲ್ಪಾ ಯಲಿಗಾರ, ಕಾಶಿನಾಥ ಶರಣರು, ಮಠಪತಿ, ವಿ.ಎಸ್.ಪಾಟೀಲ, ನೀಲಕಂಠ ಅಳ್ಳೊಳ್ಳಿ, ಎನ್.ಜಿ. ಹಿಪ್ಪರಗಿ, ಕೃಷ್ಣಾ ಕುಲಕರ್ಣಿ ಅಶೋಕ ಗದ್ಯಾಳ, ಭೀಮನಗೌಡ ಪಾಟೀಲ, ರಾಮಗೋಂಡ ರಾಮತೀರ್ಥ ಮಲ್ಲಪ್ಪ ಹಿಪ್ಪರಗಿ, ಸಂಗೋಂಡ ಹಿರಂಡಗಿ, ಕೈಯುಂ ನೀಲೇಶ ಕುರ್ಪಿ, ಡಾ. ಮಧುಚಂದ್ರ, ಕಾಶೀನಾಥ ಕಾಖಂಡಕಿ ಇದ್ದರು.

