Subscribe to Updates
Get the latest creative news from FooBar about art, design and business.
Author: editor.udayarashmi@gmail.com
press meet ವಿಜಯಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ವರದಿಯನ್ನು ರದ್ದು ಮಾಡುವುದಾಗಿ ಹೇಳಿ ಗೊಂದಲ ಸೃಷ್ಠಿಸುತ್ತಿದೆ. ಕಾರಣ ಈ ಚುನಾವಣೆಯಲ್ಲಿ ರಾಜ್ಯದ 33 ಲಕ್ಷ ಮಾದಿಗ ಸಮುದಾಯವು ಕಾಂಗ್ರೆಸ್‌ನ್ನು ತಿರಸ್ಕರಿಸಿ ಬಿಜೆಪಿಗೆ ಮತನೀಡಿ ಅಧಿಕಾರಕ್ಕೆ ತರಬೇಕೆಂದು ಕರ್ನಾಟಕ ಮಾದಿಗ ಮಹಾಸಭಾ (ಕ್ಷೇಮಾಭಿವೃದ್ಧಿ ಸಂಘ)ದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಕರೆ ನೀಡಿದರು.ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಒಳಮೀಸಲು ವರ್ಗೀಕರಣ ಮಾಡುವುದಾಗಿ 2013ರಲ್ಲಿ ಘೋಷಿಸಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಸಿದ್ರಾಮಯ್ಯನವರ ಸರಕಾರ ಅಸ್ಪçಷ್ಯರ ಸಬಲೀಕರಣಕ್ಕಾಗಿ ಒಳಮೀಸಲಾತಿ ಕುರಿತು ಚರ್ಚೆ ಮಾಡದೆ ಕಾಲಹರಣ ಮಾಡಿತು. ಶೋಷಿತರಿಗೆ ಸಾಮಾಜಿಕ ನ್ಯಾಯ ವಂಚಿಸಿದ ಡೋಂಗಿ ಕಾಂಗ್ರೆಸ್ ನೀತಿಯ ನಡೆಯು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ ಬಿಜೆಪಿಯ ಬೊಮ್ಮಾಯಿ ಸರಕಾರ ಪರಿಶಿಷ್ಟರ ಜನಸಂಖ್ಯಾ ಆಧಾರಿತ 2011ರ ಜನಗಣತಿ ಆಧಾರದಲ್ಲಿ ಮೀಸಲು ಏರಿಸಿ ಐತಿಹಾಸಿಕ ಒಳಮೀಸಲಾತಿ ನಿರ್ಮಾಣ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ನಮಗೆ ನ್ಯಾಯ ಒದಗಿಸಿದ ಕಾರಣ ಬಿಜೆಪಿಯನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ಪರಿಶಿಷ್ಟ…
ತಾಳೀಕೋಟಿ: ಜನವಿರೋಧಿ ಬಿಜೆಪಿ ಸರಕಾರ ಕಿತ್ತೊಗೆಯಲು ಒಕ್ಕಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಅವರನ್ನು ಆಶೀರ್ವಾದ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಆನಂದಗೌಡ ದೊಡ್ಡಮನಿ ಹೇಳಿದರು.ಮಂಗಳವಾರ ದೇವರಹಿಪ್ಪರಗಿ ಮತಕ್ಷೇತ್ರದ ಅಸಂತಾಪೂರ, ವಂದಾಲ, ಹುಣಶ್ಯಾಳ ಸೇರಿದಂತೆ ವಿವಿಧ ಕಡೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಅವರ ಪರವಾಗಿ ಪ್ರಚಾರ ಮಾಡುತ್ತ ಮಾತನಾಡಿದ ಅವರು, ಈಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಸಲ ಕಾಂಗ್ರೆಸ್ ಬಾವುಟ ಹಾರಾಡಲಿದೆ. ನಾವೆಲ್ಲ ಕಾಂಗ್ರೆಸ್ ಮುಖಂಡರು ಒಕ್ಕಟ್ಟಿನಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲವಿಗೆÀ ಶ್ರಮಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಶತಾಯಗತಾಯ ಪ್ರಯತ್ನ ಮಾಡಿ ಗೆಲುವು ನಮ್ಮದಾಗಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ೯ಜನ ಆಕಾಂಕ್ಷಿಗಳೆಲ್ಲರೂ ಒಕ್ಕಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಸಲ ಕಾಂಗ್ರೆಸ್ ಗೆಲುವು ಆಗಲಿದೆ. ಜನಸಾಮಾನ್ಯರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು, ಶರಣಪ್ಪ…
ದೇವರಹಿಪ್ಪರಗಿ: ಜನಸಾಮಾನ್ಯರು ಪ್ರಾದೇಶಿಕ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮನವಿ ಮಾಡಿದರು.ಪಟ್ಟಣದ ಜೆಡಿಎಸ್ ಪ್ರಚಾರ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಭರಮಾಡಿಕೊಂಡು ಮಾತನಾಡಿದರು.ಈ ಬಾರಿ ಕ್ಷೇತ್ರದ ಜನತೆ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಬಂದಿದೆ. ಮತಕ್ಷೇತ್ರದಲ್ಲಿ ಜೆಡಿಎಸ್ ಕಡೆ ಜನಸಾಗರ ಹರಿದು ಬರುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಪಡಗಾನೂರ ಗ್ರಾಮದ ಕಾಂಗ್ರೆಸ್ ಮುಖಂಡÀ ಗುರುರಾಜ ಆಕಳವಾಡಿ, ಶಬ್ಬಿರ್ ಮುಲ್ಲಾ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರೆಹಮಾನ್ ಕಣಕಾಲ ಸೇರಿದಂತೆ ಹಲವು ಪ್ರಮುಖರು ತಮ್ಮ ಬೆಂಬಲಿಗರೊAದಿಗೆ ಜೆಡಿಎಸ್ ಪಕ್ಷ ಸೇರಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಮುನೀರ್ ಅಹ್ಮದ್ ಮಳಖೇಡ, ಎ.ಡಿ.ಮುಲ್ಲಾ, ಅಬ್ದುಲ್‌ಜಬ್ಬರ್ ಮೊಮೀನ, ಬಂದೇನವಾಜ ಕತ್ನಳ್ಳಿ, ಜೆಡಿಎಸ್ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಸಂಗನಗೌಡ ಬಿರಾದಾರ, ವಿನೋದಗೌಡ ಪಾಟೀಲ,…
ವಿಜಯಪುರ: ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ವ್ಯಾಪಕವಾಗಿ ದುಡ್ಡು ಮತ್ತು ಸಾರಾಯಿ ಹಂಚುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿಸಂ ಮತ್ತು ಹೊಡಿಬಡಿ ಸಂಸ್ಕೃತಿ ತಲೆದೋರಿದ್ದು ಬ್ರಿಟಿಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಬಲೇಶ್ವರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಗಂಭೀರ ಆರೋಪ ಮಾಡಿದರು.ಮಂಗಳವಾರ ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೇ ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದರು.ವಿರೋಧಿ ಅಭ್ಯರ್ಥಿಗಳು ನನ್ನನ್ನು ಖರೀಧಿ ಮಾಡುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನನ್ನನ್ನು ಖರೀಧಿ ಮಾಡುವ ಗಂಡಸು ಇನ್ನೂ ಹುಟ್ಟಿಲ್ಲ ಎಂದ ಅವರು, ನನ್ನ ವಿರುದ್ಧ ಅಪಪ್ರಚಾರ ಮಾಡಲು, ಹೆದರಿಸಲು ಬೆಂಗಳೂರು ಸೇರಿದಂತೆ ಇತರೆಡೆಗಳಿಂದ ನೂರಾರು ಜನರನ್ನು ಕರೆಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಬ್ಬರೂ ವಿಜಯಪುರ ನಗರಕ್ಕೆ ಸಂಬಂಧಿಸಿದವರಾಗಿದ್ದು ಅಲ್ಲಿಯೇ ನೆಲೆಸಿದ್ದಾರೆ. ಅವರೊಂದಿಗೆ ರೌಡಿಶೀಟರುಗಳ ಸಂಪರ್ಕವಿದ್ದು ನನ್ನ ಜೀವಕ್ಕೇನಾರೂ ಅಪಾಯ ಒದಗಿದರೆ ಅದಕ್ಕೆ ಎಂ.ಬಿ. ಪಾಟೀಲ ಮತ್ತು ವಿಜುಗೌಡ ಪಾಟೀಲರೇ…
ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಲಿಂಗಾಯತರಿಗೆ ಅವಮಾನ ಮಾಡಿದ್ದಾರೆಂದು ಬಿಜೆಪಿ ಮುಖಂಡರು ಹೇಳುತ್ತಿರುವುದು ಅಪ್ಪಟ ಸುಳ್ಳು. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭ್ರಷ್ಟಾಚಾರ ಕುರಿತಂತೆ ವ್ಯಕ್ತಿಗತವಾಗಿ ಮಾತನಾಡಿದ್ದಾರೆ ವಿನಃ ಲಿಂಗಾಯತ ಸಮುದಾಯಕ್ಕಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿಗೆ ಹೆಚ್ಚು ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದ್ದೇ ಕಾಂಗ್ರೆಸ್ ಪಕ್ಷ. ಈವರೆಗೆ ಹೆಚ್ದು ಲಿಂಗಾಯತ ಶಾಸಕರನ್ನು ಹೊಂದಿರುವ ಪಕ್ಷ ಕಾಂಗ್ರೆಸ್. ಲಿಂಗಾಯತರಿಗೆ ಅಧಿಕಾರ, ಗೌರವ ನೀಡುತ್ತ ಬಂದ ಕಾಂಗ್ರೆಸ್‌ನಿAದ ಲಿಂಗಾಯತರನ್ನು ಕಡೆಗಣಿಸುವ, ಅವಹೇಳನ ಮಾಡುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಚುನಾವಣೆ ಸಮಯದಲ್ಲಿ ಹೇಳಲು ವಿಷಯಗಳಿಲ್ಲದೇ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಖಂಡರು ಸಿದ್ರಾಮಯ್ಯನವರ ಕುರಿತು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.ನಿಜಕ್ಕೂ ಲಿAಗಾಯತರನ್ನು ಅವಮಾನ ಮಾಡಿದ್ದು ಬಿಜೆಪಿ. ಸಕಾರಣವಿಲ್ಲದೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಿ ಅವರು ಕಣ್ಣೀರಾಕುವಂತೆ ಮಾಡಿತು. ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಮತ್ತು…
Udayarashmi kannada daily newspaper
Udayarashmi kannada daily newspaper
ಸಿಂದಗಿಯಲ್ಲಿ ಪಾದಯಾತ್ರೆ | ಮನೆ ಮನೆಗೆ ತೆರಳಿ ಮತಯಾಚನೆ ವಿಜಯಪುರ: ಕಾಂಗ್ರೆಸ್ ಪಕ್ಷದ ಸಿಂದಗಿ ಮತಕ್ಷೇತ್ರದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಗೆಲುವಿಗೆ ಅವರ ಸ್ನೇಹಿತರ ಬಳಗ ಟೊಂಕಕಟ್ಟಿ ನಿಂತಿದೆ.ಈ ಬಾರಿ ಸ್ನೇಹಿತ ಅಶೋಕ ಮನಗೂಳಿ ಅವರ ಗೆಲುವನ್ನು ಯಾರಿಂದಲೂ ತಪ್ಪಿಸಲಿಕ್ಕಾಗುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿರುವ ಅವರ ಗೆಳೆಯರ ಬಳಗ ಅವರ ಗೆಲುವಿಗಾಗಿ ಪಣತೊಟ್ಟಿದೆ. ಅದಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದೆ.ಸೋಮವಾರ ಅಶೋಕ ಮನಗೂಳಿ ಅವರ ಸ್ನೇಹಿತರಾದ ಉಮೇಶ ಜೋಗೂರ, ಸಂಗಯ್ಯ ಮಠ, ಚನ್ನು ಪಟ್ಟಣಶೆಟ್ಟಿ, ವಿಶ್ವನಾಥ ಕಮತಗಿ, ಮುತ್ತು ಮುಂಡೇವಾಡಗಿ, ಸುನೀಲ ಹಳ್ಳೂರ, ರಾಜು ಕುಚಬಾಳ, ಪ್ರಕಾಶ ಗುಣಾರಿ ಸೇರಿದಂತೆ ಹಲವು ಸ್ನೇಹಿತರು ಪಟ್ಟಣದ ವಾರ್ಡುಗಳಲ್ಲಿ ಪಾದಯಾತ್ರೆ ಕೈಗೊಂಡು ಮನೆ ಮನೆಗ ತೆರಳಿ ಮತ ಯಾಚಿಸಿದರು.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅಶೊಕ ಮನಗೂಳಿ ಅವರ ಆಪ್ತ ಸ್ನೇಹಿತರಾದ ಉಮೇಶ ಜೋಗೂರ, ಸಂಗಯ್ಯ ಮಠ, ಚನ್ನು ಪಟ್ಟಣಶೆಟ್ಟಿ ಅವರು, ಸ್ನೇಹಿತ ಅಶೋಕ ಮನಗೂಳಿ ಅವರ ಕುರಿತು ಪಟ್ಟಣದ ಮತದಾರರು ಅಭಿಮಾನ ಹೊಂದಿದವರಾಗಿದ್ದಾರೆ. ಅವರ ತಂದೆ ಮಾಜಿ…
ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಹಿಂದೆAದೂ ಕಂಡೂ ಕೇಳರಿಯದ ಮತಗಳನ್ನು ಈ ಬಾರಿ ಕಾಂಗ್ರೇಸ್ ಪಕ್ಷ ತನ್ನ ತೆಕ್ಕೆಗೆ ಬಾಚಿಕೊಂಡು ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿAದ ವಿಜಯಶಾಲಿಯಾಗಿರುವ ಪಟ್ಟಿಯಲ್ಲಿ ಸೇರಲಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೇಳಿದರು.ಪಟ್ಟಣದ ಭಾರ್ಪೇಟ್ ಗಲ್ಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿ ನೋಡಲಾಗಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಅತೀ ಹೆಚ್ಚು ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ದುರಾಡಳಿತದಿಂದ, ದಬ್ಬಾಳಿಕೆಯಿಂದ ನೊಂದಿದ್ದಾರೆ. ಗುತ್ತಿಗೆದಾರರು, ನಾಯಕರು ಪೇಚಾಡಿದ್ದಾರೆ. ಹಾಗಾಗಿ ಮನನೊಂದ ಎಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ದುಡ್ಡಿನ ಮದದಿಂದ ದುರಾಡಳಿತ ನಡೆಸಿದವರಿಗೆ ಹೀನಾಯವಾಗಿ ಸೋಲುಣಿಸಲು ಕಾತುರದಿಂದ ಕಾಯುತ್ತಿದ್ದಾರೆ ಎಂದರು. ಮತಕ್ಷೇತ್ರದಲ್ಲಿ ಕಳೆದ ೨೫ ವರ್ಷಗಳ ನನ್ನ ಆಡಳಿತದಲ್ಲಿ ಯಾವತ್ತಿಗೂ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ ಸ್ಥಳಿಯ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ.…
ಮುದ್ದೇಬಿಹಾಳ-08, ದೇವರಹಿಪ್ಪರಗಿ-13, ಬಸವನ ಬಾಗೇವಾಡಿ-13, ಬಬಲೇಶ್ವರ-14, ವಿಜಯಪುರ ನಗರ-14, ನಾಗಠಾಣ-15, ಇಂಡಿ-09, ಸಿಂದಗಿ-09 ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯ 8 ಮತಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ 122 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡು 115 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯುವ ದಿನವಾದ ಸೋಮವಾರ ಒಟ್ಟು 20 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಒಟ್ಟು 95 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಹಿಂಪಡೆಯಲು ಕೊನೆಯದಿನವಾದ ಏ.24ರ ಸೋಮವಾರÀ ಮುದ್ದೇಬಿಹಾಳ ಮತಕ್ಷೇತ್ರದಿಂದ 01, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 01, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 08, 30-ಬಿಜಾಪುರ ನಗರ ಮತಕ್ಷೇತ್ರದಿಂದ 01, 31-ನಾಗಠಾಣ ಮತಕ್ಷೇತ್ರದಿಂದ 04, 32-ಇಂಡಿ ಮತಕ್ಷೇತ್ರದಿಂದ 02 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 02 ಸೇರಿದಂತೆ ಒಟ್ಟು 20 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ…
