ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಲಿಂಗಾಯತರಿಗೆ ಅವಮಾನ ಮಾಡಿದ್ದಾರೆಂದು ಬಿಜೆಪಿ ಮುಖಂಡರು ಹೇಳುತ್ತಿರುವುದು ಅಪ್ಪಟ ಸುಳ್ಳು. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭ್ರಷ್ಟಾಚಾರ ಕುರಿತಂತೆ ವ್ಯಕ್ತಿಗತವಾಗಿ ಮಾತನಾಡಿದ್ದಾರೆ ವಿನಃ ಲಿಂಗಾಯತ ಸಮುದಾಯಕ್ಕಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.
ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿಗೆ ಹೆಚ್ಚು ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದ್ದೇ ಕಾಂಗ್ರೆಸ್ ಪಕ್ಷ. ಈವರೆಗೆ ಹೆಚ್ದು ಲಿಂಗಾಯತ ಶಾಸಕರನ್ನು ಹೊಂದಿರುವ ಪಕ್ಷ ಕಾಂಗ್ರೆಸ್. ಲಿಂಗಾಯತರಿಗೆ ಅಧಿಕಾರ, ಗೌರವ ನೀಡುತ್ತ ಬಂದ ಕಾಂಗ್ರೆಸ್‌ನಿAದ ಲಿಂಗಾಯತರನ್ನು ಕಡೆಗಣಿಸುವ, ಅವಹೇಳನ ಮಾಡುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಚುನಾವಣೆ ಸಮಯದಲ್ಲಿ ಹೇಳಲು ವಿಷಯಗಳಿಲ್ಲದೇ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಖಂಡರು ಸಿದ್ರಾಮಯ್ಯನವರ ಕುರಿತು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ನಿಜಕ್ಕೂ ಲಿAಗಾಯತರನ್ನು ಅವಮಾನ ಮಾಡಿದ್ದು ಬಿಜೆಪಿ. ಸಕಾರಣವಿಲ್ಲದೇ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಿ ಅವರು ಕಣ್ಣೀರಾಕುವಂತೆ ಮಾಡಿತು. ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಲಕ್ಷö್ಮಣ ಸವದಿ ಅವರಿಗೆ ಟಿಕೆಟ್ ಕೊಡದೆ ಪಕ್ಷದಿಂದ ಹೊರನಡೆಯುವಂತೆ ಮಾಡಿತು. ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಮತೀಯ ಭಾವನೆಗಳನ್ನು ಕೆರಳಿಸುವ ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಲಿಂಗಾಯತ ದಿ.ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅವಮಾನ ಮಾಡಿಲ್ಲ. ಅವರು ದಿ.ಇಂದಿರಾಗಾಂಧಿಯವರ ವಿರುದ್ಧ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರೂ ಸಹ ಅವರನ್ನು ಮತ್ತೆ ಪಕ್ಷದಲ್ಲಿ ಸೇರಿಕೊಂಡು ಕೇಂದ್ರದ ಮಂತ್ರಿ ಮಾಡಿದ್ದು, ಬಳಿಕ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಒಂದು ವರ್ಷದ ಬಳಿಕ ಅವರು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದಾಗ ಅನಿವಾರ್ಯವಾಗಿ ಅವರನ್ನು ಬದಲಿಸುವಂತಾಯಿತು ಎಂದು ಎಸ್.ಎಂ.ಪಾಟೀಲ ವಿವರಿಸಿದರು.
ಕಾAಗ್ರೆಸ್ ಮುಖಂಡ ಡಾ.ರವಿ ಬಿರಾದಾರ ಮಾತನಾಡಿದರು.
ಮುಖಂಡರಾದ ಫಯಾಜ ಕಲಾದಗಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ ಸೇರಿದಂತೆ ಹಲವರಿದ್ದರು.
Related Posts
Add A Comment