ದೇವರಹಿಪ್ಪರಗಿ: ಜನಸಾಮಾನ್ಯರು ಪ್ರಾದೇಶಿಕ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮನವಿ ಮಾಡಿದರು.
ಪಟ್ಟಣದ ಜೆಡಿಎಸ್ ಪ್ರಚಾರ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಭರಮಾಡಿಕೊಂಡು ಮಾತನಾಡಿದರು.
ಈ ಬಾರಿ ಕ್ಷೇತ್ರದ ಜನತೆ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಬಂದಿದೆ. ಮತಕ್ಷೇತ್ರದಲ್ಲಿ ಜೆಡಿಎಸ್ ಕಡೆ ಜನಸಾಗರ ಹರಿದು ಬರುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಡಗಾನೂರ ಗ್ರಾಮದ ಕಾಂಗ್ರೆಸ್ ಮುಖಂಡÀ ಗುರುರಾಜ ಆಕಳವಾಡಿ, ಶಬ್ಬಿರ್ ಮುಲ್ಲಾ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರೆಹಮಾನ್ ಕಣಕಾಲ ಸೇರಿದಂತೆ ಹಲವು ಪ್ರಮುಖರು ತಮ್ಮ ಬೆಂಬಲಿಗರೊAದಿಗೆ ಜೆಡಿಎಸ್ ಪಕ್ಷ ಸೇರಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಮುನೀರ್ ಅಹ್ಮದ್ ಮಳಖೇಡ, ಎ.ಡಿ.ಮುಲ್ಲಾ, ಅಬ್ದುಲ್‌ಜಬ್ಬರ್ ಮೊಮೀನ, ಬಂದೇನವಾಜ ಕತ್ನಳ್ಳಿ, ಜೆಡಿಎಸ್ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಸಂಗನಗೌಡ ಬಿರಾದಾರ, ವಿನೋದಗೌಡ ಪಾಟೀಲ, ಮಹಾಂತೇಶ ವಂದಾಲ, ಅರವಿಂದ ನಾಯ್ಕೋಡಿ, ಕಾಸುಗೌಡ ಜಲಕತ್ತಿ, ಬಸವರಾಜ ಪೂಜಾರಿ, ಸಿಂಧೂರ ಡಾಲೇರ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
Related Posts
Add A Comment