ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಹಿಂದೆAದೂ ಕಂಡೂ ಕೇಳರಿಯದ ಮತಗಳನ್ನು ಈ ಬಾರಿ ಕಾಂಗ್ರೇಸ್ ಪಕ್ಷ ತನ್ನ ತೆಕ್ಕೆಗೆ ಬಾಚಿಕೊಂಡು ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿAದ ವಿಜಯಶಾಲಿಯಾಗಿರುವ ಪಟ್ಟಿಯಲ್ಲಿ ಸೇರಲಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೇಳಿದರು.
ಪಟ್ಟಣದ ಭಾರ್ಪೇಟ್ ಗಲ್ಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿ ನೋಡಲಾಗಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಅತೀ ಹೆಚ್ಚು ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ದುರಾಡಳಿತದಿಂದ, ದಬ್ಬಾಳಿಕೆಯಿಂದ ನೊಂದಿದ್ದಾರೆ. ಗುತ್ತಿಗೆದಾರರು, ನಾಯಕರು ಪೇಚಾಡಿದ್ದಾರೆ. ಹಾಗಾಗಿ ಮನನೊಂದ ಎಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ದುಡ್ಡಿನ ಮದದಿಂದ ದುರಾಡಳಿತ ನಡೆಸಿದವರಿಗೆ ಹೀನಾಯವಾಗಿ ಸೋಲುಣಿಸಲು ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಮತಕ್ಷೇತ್ರದಲ್ಲಿ ಕಳೆದ ೨೫ ವರ್ಷಗಳ ನನ್ನ ಆಡಳಿತದಲ್ಲಿ ಯಾವತ್ತಿಗೂ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ ಸ್ಥಳಿಯ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಆದರೆ ಇಂದು ಈ ಎಲ್ಲ ಸ್ಥಳಿಯ ಸಂಸ್ಥೆಗಳಲ್ಲಿ ಬಿಜೆಪಿ ಶಾಸಕರು ಹಸ್ತಕ್ಷೇಪ ಮಾಡಿದ್ದಲ್ಲದೇ ಎಲ್ಲವೂ ನಾನಂದುಕೊಂಡಂತೆಯೇ ನಡೆಯಬೇಕು ಎನ್ನುವ ಸರ್ವಾಧಿಕಾರ ಮನೋಭಾವದಿಂದ ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಯಾವುದೇ ಗೌರವವಿಲ್ಲದಂತಾಗಿದೆ. ಅಲ್ಲದೇ ಅಧಿಕಾರ ನಡೆಸಲು ಸಾದ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆಲ್ಲ ಮುಕ್ತಿ ಸಿಗಬೇಕಾದರೆ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವುದೊಂದೇ ಪರಿಹಾರವಾಗಿದೆ. ಇಲ್ಲದೇ ಹೋದಲ್ಲಿ ಮತಕ್ಷೇತ್ರ ರಾವಣರಾಜ್ಯವಾಗಿ ಪರಿಣಮಿಸುವದರಲ್ಲಿ ಯಾವುದೇ ಸಂದೇಹಗಳಿಲ್ಲ ಎಂದರು.
ಪ್ರಮುಖರಾದ ಮುನ್ನಾ ಮಕಾಂದಾರ, ಹಾಪೀಸ್ ಪಡೇಕನೂರ, ಬೀಬಿಜಾನ್ ಬೀಳಗಿ, ಶಬ್ಬೀರ ಶಹಾಪೂರ, ಸೋನು ಮಕಾಂದಾರ, ಫರ್ವೇಜ್ ಪಠಾಣ, ಸೊಹೇಲ್ ತುರುಕನಗೋರಿ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನೂರಾರು ಜನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು.
ಈ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮೈಬೂಬ ಗೊಳಸಂಗಿ, ಮಾಜಿ ಸದಸ್ಯರಾದ ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ, ಚಾಂದಬಿ ಹಭೀಶಾ ಮಕಾನಂದಾರ, ಮುಖಂಡರಾದ ವಾಸುದೇವ ಶಾಸ್ತ್ರಿ, ಅಬ್ದೂಲಗಫೂರ ಮಕಾನಂದಾರ, ಲಾಳೇಮಶ್ಯಾಕ ನಾಯ್ಕೋಡಿ, ಬಿ.ಎಂ.ಸಜ್ಜನ, ರುದ್ರುಗೌಡ ಅಂಗಡಗೇರಿ, ಬೇಬಿಜಾನ ಬೀಳಗಿ, ಎನ್. ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಹುಲಗಪ್ಪ ನಾಯಕಮಕ್ಕಳ, ಯಾಸೀನ ನಾಲಬಂದ ಸೇರಿದಂತೆ ಮತ್ತಿತರರು ಇದ್ದರು.