press meet
ವಿಜಯಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ವರದಿಯನ್ನು ರದ್ದು ಮಾಡುವುದಾಗಿ ಹೇಳಿ ಗೊಂದಲ ಸೃಷ್ಠಿಸುತ್ತಿದೆ. ಕಾರಣ ಈ ಚುನಾವಣೆಯಲ್ಲಿ ರಾಜ್ಯದ 33 ಲಕ್ಷ ಮಾದಿಗ ಸಮುದಾಯವು ಕಾಂಗ್ರೆಸ್‌ನ್ನು ತಿರಸ್ಕರಿಸಿ ಬಿಜೆಪಿಗೆ ಮತನೀಡಿ ಅಧಿಕಾರಕ್ಕೆ ತರಬೇಕೆಂದು ಕರ್ನಾಟಕ ಮಾದಿಗ ಮಹಾಸಭಾ (ಕ್ಷೇಮಾಭಿವೃದ್ಧಿ ಸಂಘ)ದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಕರೆ ನೀಡಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಳಮೀಸಲು ವರ್ಗೀಕರಣ ಮಾಡುವುದಾಗಿ 2013ರಲ್ಲಿ ಘೋಷಿಸಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಸಿದ್ರಾಮಯ್ಯನವರ ಸರಕಾರ ಅಸ್ಪçಷ್ಯರ ಸಬಲೀಕರಣಕ್ಕಾಗಿ ಒಳಮೀಸಲಾತಿ ಕುರಿತು ಚರ್ಚೆ ಮಾಡದೆ ಕಾಲಹರಣ ಮಾಡಿತು. ಶೋಷಿತರಿಗೆ ಸಾಮಾಜಿಕ ನ್ಯಾಯ ವಂಚಿಸಿದ ಡೋಂಗಿ ಕಾಂಗ್ರೆಸ್ ನೀತಿಯ ನಡೆಯು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ ಬಿಜೆಪಿಯ ಬೊಮ್ಮಾಯಿ ಸರಕಾರ ಪರಿಶಿಷ್ಟರ ಜನಸಂಖ್ಯಾ ಆಧಾರಿತ 2011ರ ಜನಗಣತಿ ಆಧಾರದಲ್ಲಿ ಮೀಸಲು ಏರಿಸಿ ಐತಿಹಾಸಿಕ ಒಳಮೀಸಲಾತಿ ನಿರ್ಮಾಣ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ನಮಗೆ ನ್ಯಾಯ ಒದಗಿಸಿದ ಕಾರಣ ಬಿಜೆಪಿಯನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಪರಿಶಿಷ್ಟ ಜಾತಿಯವರ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತದ ಸಂವಿಧಾನ ಪರಿಚ್ಛೇದ 15 ಮತ್ತು 16 ರ ಅಡಿ ನೀಡುತ್ತಿರುವ ವಿವಿಧ ಸೌಲಭ್ಯಗಳು ಪರಿಶಿಷ್ಟರ ಎಲ್ಲ 101 ಜಾತಿಗಳಿಗೆ ಸಮಾನಾಂತರವಾಗಿ ತಲುಪುತ್ತಿರುವ ಕುರಿತು ತಿಳಿಯುವ ಉದ್ದೇಶದಿಂದ 2005 ರಲ್ಲಿ ನೇಮಕಗೊಂಡಿದ್ದ ನ್ಯಾ.ಎ.ಜೆ. ಸದಾಶಿವ ವಿಚಾರಣಾ ಏಕಸದಸ್ಯ ಆಯೋಗಕ್ಕೆ ಅನುದಾನ ನೀಡದೇ ವಂಚಿಸಿದ ಕಾಂಗ್ರೆಸ್ ನೀತಿ ಖಂಡನೀಯವಾಗಿದೆ ಎಂದರು.
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಂತೆ ಬಿಜೆಪಿ ಸರಕಾರವು ನಾಗಮೋಹನದಾಸ ಆಯೋಗ ರಚಿಸಿ ಪರಿಶಿಷ್ಟರಿಗೆ ಶೇ 2ರಷ್ಟು ಮೀಸಲು ಏರಿಸಲು ಕ್ರಮವಹಿಸಿ, ಅದರ ಆಧಾರದಲ್ಲಿ ಒಟ್ಟು ಈಗಿರುವ ಶೇ.17 ರಷ್ಟು ಮೀಸಲಾತಿಯಲ್ಲಿ ಒಳಮೀಸಲಾಗಿ ನಿರ್ಣಯ ಕೈಗೊಂಡು ಜನಸಂಖ್ಯೆಗನುಗುಣವಾಗಿ ಮೈಜ್ಞಾನಿಕ ಒಳಮೀಸಲಾತಿ ಸೂತ್ರ ರಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇ ಬಿಜೆಪಿ ಸರಕಾರ ಎಂದು ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.
ಮಾದಿಗ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕ ಪರಶುರಾಮ ಹೊನ್ನಳ್ಳಿ ಮಾತನಾಡಿ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮನ್ನು ಭೇಟಿಯಾದ ಒಳಮೀಸಲಾತಿ ವಿರೋಧಿಸುವ ಗುಂಪಿನೊAದಿಗೆ ಮಾತನಾಡುತ್ತ, “ನಾನು ನಿಮ್ಮ ಹಿತಕಾಯಲೆಂದೇ ಈ ವಿಷಯದಲ್ಲಿ ಏನೂ ಕ್ರಮ ಕೈಗೊಳ್ಳಲಿಲ್ಲ” ಎಂದು ಹೇಳಿದ್ದು ಕಾಂಗ್ರೆಸ್‌ನ ಅಂತರಾಳವನ್ನು ಬಿಚ್ಚಿಟ್ಟಿದೆ.
ಇನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ರದ್ದು ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರು ತಮ್ಮ ಹಿಂಬಾಲಕರ ಮೂಲಕ ಸಂವಿಧಾನದ ಆಶಯಗಳ ವಿರುದ್ಧ ಅಪಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಆದ್ದರಿಂದ ಮಾದಿಗ ಸಮುದಾಯವು ಒಳಮೀಸಲಾತಿ ಸಂರಕ್ಷಿಸಿಕೊಳ್ಳುವುದಕ್ಕಾಗಿ, ಅಸ್ಪçಶ್ಯರ ಅಸ್ಮಿತೆಗಾಗಿ ಕಾಂಗ್ರೆಸ್ ಸೋಲಿಸಿ, ಬಿಜೆಪಿ ಬೆಂಬಲಿಸಬೇಕೆAದು ಕರೆ ನೀಡಿದರು.
ಮಾದಿಗ ಮಹಾಸಭಾ ರಾಜ್ಯ ಕಾರ್ಯದರ್ಶಿ ಬಾಲಪ್ಪ ಗೂಗಿಹಾಳ, ಬಾಗಲಕೋಟೆ ಜಿಲ್ಲಾಧ್ಯಕ್ಷ ಸತೀಶ ಸೂಳಿಕೇರೆ, ಕಿರಣ ಆಸಂಗಿ ಮತ್ತು ಸೋಮನಾಥ ನಡುಮನಿ ಇದ್ದರು.