ತಾಳೀಕೋಟಿ: ಜನವಿರೋಧಿ ಬಿಜೆಪಿ ಸರಕಾರ ಕಿತ್ತೊಗೆಯಲು ಒಕ್ಕಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಅವರನ್ನು ಆಶೀರ್ವಾದ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಆನಂದಗೌಡ ದೊಡ್ಡಮನಿ ಹೇಳಿದರು.
ಮಂಗಳವಾರ ದೇವರಹಿಪ್ಪರಗಿ ಮತಕ್ಷೇತ್ರದ ಅಸಂತಾಪೂರ, ವಂದಾಲ, ಹುಣಶ್ಯಾಳ ಸೇರಿದಂತೆ ವಿವಿಧ ಕಡೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಅವರ ಪರವಾಗಿ ಪ್ರಚಾರ ಮಾಡುತ್ತ ಮಾತನಾಡಿದ ಅವರು, ಈಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಸಲ ಕಾಂಗ್ರೆಸ್ ಬಾವುಟ ಹಾರಾಡಲಿದೆ. ನಾವೆಲ್ಲ ಕಾಂಗ್ರೆಸ್ ಮುಖಂಡರು ಒಕ್ಕಟ್ಟಿನಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲವಿಗೆÀ ಶ್ರಮಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಶತಾಯಗತಾಯ ಪ್ರಯತ್ನ ಮಾಡಿ ಗೆಲುವು ನಮ್ಮದಾಗಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ೯ಜನ ಆಕಾಂಕ್ಷಿಗಳೆಲ್ಲರೂ ಒಕ್ಕಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಸಲ ಕಾಂಗ್ರೆಸ್ ಗೆಲುವು ಆಗಲಿದೆ. ಜನಸಾಮಾನ್ಯರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದಾರೆ. ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು, ಶರಣಪ್ಪ ಸುಣಗಾರ ಆಯ್ಕೆಯಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ದೇವರಹಿಪ್ಪರಗಿ ಉಸ್ತುವಾರಿ ಜಸ್ವಾಲ್ ಮೇಡಮ್, ಮುಖಂಡರಾದ ಡಾ. ನಂದಕುಮಾರ ಭೈರಿ, ಎಪಿಎಂಸಿ ಮಾಜಿ ಅಧ್ಯಕ್ಷ ಹಳ್ಳೆಪ್ಪಣ್ಣ ಚೌಧರಿ, ಮಹೇಶ ಸುಣಗಾರ, ಶರಣಗೌಡ ಬಿರಾದಾರ, ಸರಿತಾ ಚವ್ಹಾಣ, ಲಲಿತಾ ದೊಡ್ಡಮನಿ ರವಿಕುಮಾರ ಹಯ್ಯಾಳ, ಮೈನುದ್ದೀನ ಬಾಗವಾನ, ಶಿವರಾಜ ದೇಶಮುಖ ಮಡಿವಾಳಪ್ಪ ಬ್ಯಾಲಾಳ, ಬಂದಗಿಸಾಬ ವಠಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
Related Posts
Add A Comment