Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಿಕೋಟಾ: ಪರಮಾತ್ಮನ ಸ್ವರೂಪವನ್ನು ತೆಗೆದುಕೊಂಡು ಧರೆಗೆ ಬಂದವರು ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ತೊಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶ್ರೀಗಳ ಬದುಕು ನಮಗೆ ಮಾರ್ಗದರ್ಶನವಾಗಿದೆ. ಹುಟ್ಟು ಶ್ರೇಷ್ಠತೆಯೂ ಅಲ್ಲ ಸಾವು ಕನಿಷ್ಠವು ಅಲ್ಲ. ಅಭಿಮಾನದಿಂದ ನೆನೆಸುವದು ಅಲ್ಲ, ಅನುಭಾವದಿಂದ ನೆನೆಸುವದು, ಶ್ರೀಗಳು ರಾಷ್ಟ್ರ ಸಂತರು, ಜಗದಗಲ, ಮುಗಿಲದಗಲ ಎಲ್ಲ ಕಡೆ ಇದ್ದಾರೆ. ಕತ್ತಲು ಇಲ್ಲದ ಬೆಳಕು ಅವರಾಗಿದ್ದಾರೆ. ಸಾವಿರಾರು ವರ್ಷಗಳ ಉಪನಿಷತ್ತು ಉಳಿದಿದೆ, ಶ್ರೀಗಳ ಜ್ಞಾನ ಶಾಶ್ವತ. ಅದಕ್ಕಾಗಿ ಅವರ ಯಾವುದೇ ಕುರುಹುಗಳು ಇರದೇ ಇದ್ದರು ಮುಂದಿನ ಪಿಳಿಗೆಗೆ ಅವರ ಜ್ಞಾನ ಉಳಿಯುತ್ತದೆ. ದೇಹವು ಹೋಗಿದೆ ಅಂತರಂಗದ ತನವು ಎಲ್ಲ ಕಡೆ ಇದೆ. ಯುವಕರು ಧರ್ಮದ ದ್ವಜ ಹಿಡಿಯುವ ಬದಲು ಕಾಯಕದ ದ್ವಜ ಹಿಡಿದು ಬದುಕು ನಡೆಸಬೇಕು. ಅವರ ಚಿಂತನೆಗಳು ಎಲ್ಲ ಭಾಷೆಗಳಲ್ಲಿ ಪ್ರಕಟ ಆಗಬೇಕು. ಅವರ…
ಆಲಮಟ್ಟಿ: ಈ ಚಿನ್ಮಯಿ ಬಾಲೆಯರ ಸಂತೋಷಕ್ಕೆ ಪಾರವೇ ಇಲ್ಲ. ನವರಾತ್ರಿ ಸಂಭ್ರಮದ ಉಲ್ಲಾಸದಲ್ಲಿ ಹರ್ಷಚಿಕಿತರಾಗಿ ನಗೆ ಹೊನಲು ಬೀರಿದ್ದಾರೆ. ತಮ್ಮದೇ ಲಯೋತ್ಸಾಹದ ಗುಂಗಿನಲ್ಲಿ ಬೂದೋತ್ಸಾಹದ ರಂಗು ಹಿತೋತ್ಸಾಹದಲ್ಲಿ ಹೊರಹಾಕಿ ಗಮನ ಸೆಳೆದಿದ್ದಾರೆ ಈ ಚಿಕ್ಕ ಬಾಲೆಯರು !ಒಬ್ಬಳು ಸಮೀಕ್ಷಾ, ಇನ್ನೊಬ್ಬಳು ಸ್ಪಂದನಾ. ಈ ಪುಟ್ಟ ಜೋಡಿಗಳು ಶನಿವಾರ ನವರಾತ್ರಿ ಏಳನೇ ದಿನದ ಬೂದು ಬಣ್ಣದ ಉಡುಪು ಧರಿಸಿ ನವೋಲ್ಲಾಸದಲ್ಲಿ ಮಿನುಗಿದ್ದಾರೆ.ನಖರಾ ರಾಣಿ ಸಮೀಕ್ಷಾ, ಸಂತೋಷ-ವಿಜಯಲಕ್ಷ್ಮೀ ಮರಡಿ ದಂಪತಿಗಳ ಮಗಳಾದರೆ ಸ್ಪಂದನಾ ಮಲ್ಲಪ್ಪ-ಸರಸ್ವತಿ ಕಾಖಂಡಕಿ ದಂಪತಿಗಳ ಕುಡಿಯಾಗಿದ್ದಾಳೆ. ಇವರು ಆಲಮಟ್ಟಿ ಬಳಿಯ ಚಿಮ್ಮಲಗಿ ಭಾಗ-೧ ಬಿ ಗ್ರಾಮದ ನಿವಾಸಿಗಳು.
ವಿಜಯಪುರ: ಅಲ್ಲಿ ಬೂದು ಚೆಲುವು ಹರಡಿತ್ತು. ತಟಸ್ಥ, ವರ್ಣರಹಿತ ಬಿಂಬದ ಬೂದೋಕಳಿಯ ಬಣ್ಣದ ಉಡುಗೆಯಲ್ಲಿ ಆ ನೀರೆಯರ ಉತ್ಸಾಹ ಭರಿತ ಖುಷ್, ನಲಿವು ರಂಗೇರಿತ್ತು. ಬೂದು ಸ್ಪರ್ಶದ ತೋರಣದಲ್ಲಿ ನಾರಿಲೋಕದ ಅರಗಿಣಿಯರು ಭಕ್ತಿ,ಉನ್ಮಾದದ ಅದಮ್ಯ, ಅನನ್ಯ ತರಂಗದಲ್ಲಿ ತೇಲಿದ್ದರು. ದುಗಾ೯ಮಾತೆಯನ್ನು ಆರಾಧಿಸುತ್ತಾ ಸ್ಮರಣೀಯ ವಿಶೇಷ ಪೂಜಾಭಾವ ಧನ್ಯತೆಯಿಂದ ಮೆರೆದರು.ದುಗೆ೯ಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಈ ದೇವಿಯನ್ನು ಮನದಲ್ಲಿ ಶ್ರದ್ಧೆಯಿಂದ ನೆನೆಸಿ ಪೂಜಿಸಿದರೆ ಸವೋ೯ ವಿಘ್ನಗಳು ದೂರಾಗುತ್ತವೆ ಅಲ್ಲದೇ ಪುಣ್ಯಲೋಕಭಾವ ದಯಾಪಾಲಿಸುವಳೆಂಬ ಅಚಲ ನಂಬಿಕೆಯಿಂದ ಹೆಂಗಳೆಯರು ನವರಾತ್ರಿಯ ಏಳನೇ ದಿನದಂದು ಬೆಳಗಿನ ಜಾವದಲ್ಲೇ ವಿಶೇಷ ಅವತಾರಿ ದೇವಿಗಳ ಅಂಗಳದಲ್ಲಿ ನೆರೆದು ಭಕ್ತಿ ತರ್ಪಣ ಗೈದರು. ಹಲ ದೇವ,ದೇವತೆಗಳಲ್ಲದೇ ಪೂಜ್ಯತೆಯಿಂದ ಪೂಜಿಸುವ ಬನ್ನಿ ಗಿಡಮರಗಳ ಸುತ್ತಾಕಿ ಮನದಾಳದ ಸಂಕಲ್ಪ ಪೂರೈಸುವಂತೆ ಬೇಡಿಕೊಂಡರು.ಬಣ್ಣವಿಲ್ಲದ ಬಣ್ಣ ಖ್ಯಾತಿಯ ಬೂದು ಬಣ್ಣದಲ್ಲಿ ಖುಷಿನಗೆ ಉದು ಮಂದಾಕಿನಿಯರು ನಿರಾಳವಾಗಿ, ಸಂತೋಷದಿಂದ ಹೊರಸೂಸಿದರು. ನವರಾತ್ರಿ ಏಳನೇ ದಿನದ ಬೂದು ಬಣ್ಣದ ಸೀರೆಯನ್ನುಟ್ಟು ವಿಜಯಪುರ ಆಲಕುಂಟೆ ನಗರದ ನಾರಿಮಣಿಗಳ…
ವಿಜಯಪುರ: ಗವಿಸಿದ್ದಪ್ಪ ಅಂಗಡಿ ಅವರನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆ(ಎನ್.ಸಿ.ಟಿ.ಇ) ದಕ್ಷಿಣ ವಲಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 2006 ರಿಂದ 2017ರ ವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು. ಸದ್ಯಕ್ಕೆ ಅವರು ಗುಜರಾತ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಎನ್.ಸಿ.ಟಿ.ಇ ದಕ್ಷಿಣ ವಲಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿರುವ ಗವಿಸಿದ್ದಪ್ಪ ಅಂಗಡಿ ಅವರಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಜೆ. ಎಸ್. ಎಸ್ ಶಿಕ್ಷಣ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯವರು ಶ್ರೀ ಮರಗಮ್ಮದೇವಿ ದೇವಸ್ಥಾನದ ಎದುರಿನ ಮುಖ್ಯರಸ್ತೆಯಲ್ಲಿ ಭವ್ಯಮಂಟಪ ನಿರ್ಮಿಸಿ ಶುಕ್ರವಾರ ನಾಡದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಶ್ರದ್ಧಾ-ಭಕ್ತಿಯಿಂದ ದೇವಿಯ ಆರಾಧನೆ ನಡೆದಿದೆ.ನಾಡದೇವಿ ಮಂಟಪಕ್ಕೆ ಹಾಗೂ ಮಂಟಪದ ಮುಂದೆ ರಸ್ತೆಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಆದರೆ, ಈ ಬಾರಿ ಡಿಜೆ ಹಾಗೂ ಮೈಕಾಸುರನ ಅಬ್ಬರವಿಲ್ಲದೆ ಅತ್ಯಂತ ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ಇಲ್ಲಿ ದಸರಾ ಉತ್ಸವ ಆಚರಿಸುವ ಜೊತೆಗೆ ಪರಿಸರ ಸ್ವಚ್ಛತೆಗೂ ಹೆಚ್ಚಿನ ಗಮನ ಹರಿಸಿರುವುದು ವಿಶೇಷವಾಗಿದೆ.ನಾಡದೇವಿ ಉತ್ಸವದ ಅಂಗವಾಗಿ ಶನಿವಾರ ನಾಡದೇವಿ ಮಂಟಪದ ಮುಂಭಾಗದಲ್ಲಿ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮ ವೈಭವದಿಂದ ನಡೆಯಿತು. ಇನ್ನೂರಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ನೀಡಲಾಯಿತು.ಇಬ್ರಾಹಿಂಪುರ ಗಣ್ಯ ಮನೆತನದ ಶ್ರೀಮತಿ ಶೋಭಾ ರುದ್ರಗೌಡ ಬಿರಾದಾರ, ಶ್ರೀಮತಿ ಲಕ್ಮೀ ರೇವಣಕುಮಾರ ಬಗಲಿ, ಶ್ರೀಮತಿ ರೇಣುಕಾ ಸುರೇಶ ಬಗಲಿ ಅವರು ಉಡಿ ತುಂಬುವ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯ ಅಧ್ಯಕ್ಷ ಸುನೀಲ ನುಚ್ಚಿ,…
ತಾರೆಗಳ ಊರಿಂದ ಏರುತ್ತ ಬಂದಜಗವನ್ನು ಬೆಳಗಲು ತನ್ನ ಪ್ರಭೆಯಿಂದಹಾಲ್ಬೆಳಕು ಚೆಲ್ಲುತ್ತ ಆನಂದದಿಂದನವಜೋಡಿ ಭಾವಕ್ಕೆ ಸಡಗರವ ತಂದ ಚಂದ್ರಮನ ಕಚಗುಳಿ ಮಾಡಿತ್ತು ಮೋಡಿಪ್ರಕೃತಿಯು ಅರಳಿ ಸೌಂದರ್ಯ ಇಮ್ಮಡಿಗೂಡೊಳಗೆ ಬೆಚ್ಚಗೆ ಕುಳಿತ ಬಾನಾಡಿಆಗೊಮ್ಮೆ ಈಗೊಮ್ಮೆ ಇಣುಕಿತ್ತು ನೋಡಿ ತಣ್ಣನೆಯ ತಂಗಾಳಿ ಕೊಟ್ಟಿತ್ತು ಮುದವಮನದೊಳಗೆ ಮೂಡಿತ್ತು ಮಧುರ ಭಾವನಯನವು ಆಸ್ವಾದಿಸಿ ಬೆಳದಿಂಗಳ ಚೆಲುವಬರೆದೆ ಚಂದ್ರೋದಯ ವರ್ಣಿಸುತ್ತ ಕವನವ
ಈ ವರ್ಷದ ಮೈಸೂರು ದಸರಾ 413 ನೇ ವರ್ಷದ ದಸರಾ ಮಹೋತ್ಸವಾಗಿದೆ. ಈ ಮೈಸೂರು ದಸರಾ ಆರಂಭದಿಂದ ಮೈಸೂರು ದಸರಾ ಆಗಿರಲಿಲ್ಲ. ಇದರ ಮೂಲ 14ನೇ ಶತಮಾನದ ಹಂಪಿಯ ವಿಜಯನಗರ ಸಾಮ್ರಾಜ್ಯವಾಗಿದೆ.ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ‘ಮಹಾನವಮಿ’ ಎಂಬ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಹಂಪಿಯ ‘ಹಜಾರರಾಮ’ ದೇವಸ್ಥಾನದ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಇದರ ಉಲ್ಲೇಖವಿದೆ. ಅಂದಿನ ಇಟಲಿಯ ವಿದೇಶಿ ಪ್ರವಾಸಿಗ ‘ನಿಕೋಲೋ ಡಿ ಕೌಂಟಿ’ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ಅಂದಿನ ಮಹಾನವಮಿಯನ್ನು “ರಾಜರ ಬೆಂಬಲದಿಂದ ನಡೆಯುವ ವೈಭವದ ನಾಡಹಬ್ಬ” ಎಂದು ತನ್ನ ಪ್ರವಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.ಹೀಗೆ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾ ನವಮಿಯು ದಖ್ಖನ್ನಿನ ಸುಲ್ತಾನರ ದಾಳಿಯಿಂದ ಪತನವಾದ ಮೇಲೆ ನಿಂತು ಹೋಯಿತು. ಅದಾದ ಮೇಲೆ ಅಳಿದುಳಿದ ದಕ್ಷಿಣ ಕರ್ನಾಟಕದ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ಕಟ್ಟಿ ಮೈಸೂರಿನ ಮಹಾರಾಜರು ರಾಜ್ಯಭಾರವನ್ನು ಮುಂದುವರಿಸಿದರು. ಹಾಗೆಯೇ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾನವಮಿಯನ್ನು ಮೈಸೂರಿನ ದಸರಾ ಉತ್ಸವವಾಗಿ ಮುಂದುವರಿಸಿದರು.1610 ರಲ್ಲಿ ಶ್ರೀರಾಜ ಒಡೆಯರ್ ರವರು…
ವೀಣಾಂತರಂಗ ಬೇಲೂರಿನ ದೇವಾಲಯದ ಒಳಾವರಣ ಮತ್ತು ಹಳೆಬೀಡಿನ ದೇವಾಲಯದ ಹೊರಾವರಣ ನೋಡಿದರೆ ಜಗತ್ತಿನ ಯಾವುದೇ ಶಿಲ್ಪ ಕಲೆಯ ಸ್ಮಾರಕವು ಇದರ ಮುಂದೆ ಸರಿದೂಗುವುದಿಲ್ಲ. ಇಡೀ ಜಗತ್ತು ಅಂಧಕಾರದಲ್ಲಿರುವಾಗ ಗುಲಾಮಗಿರಿಯ ದಾಸ್ಯದ ನೆಲೆಬೀಡಾಗಿದ್ದಾಗ ಭಾರತವು 64 ವಿದ್ಯೆಗಳಿಂದ ಪ್ರಕಾಶಿಸುತ್ತಿತ್ತು. ಕಲೆ, ಸಂಸ್ಕೃತಿ, ಸಾಹಿತ್ಯ, ಅಧ್ಯಯನ, ವೇದ, ಆಗಮ, ಪುರಾಣಗಳು ನಮ್ಮ ಜ್ಞಾನ ಸಿರಿಯನ್ನು ಹೆಚ್ಚಿಸಿದ್ದವು. ಮಾನವೀಯ ಮೌಲ್ಯಗಳು ಭಾರತಕ್ಕೆ ಕಳಶಪ್ರಾಯ ಎನಿಸಿದ್ದವು.. ಇಡೀ ಜಗತ್ತಿನ ಜನರು ಭಾರತಕ್ಕೆ ಜ್ಞಾನ, ವಿಜ್ಞಾನ, ಲಲಿತಕಲೆ ಮತ್ತು ಇತರ ವಿದ್ಯಗಳ ಜೊತೆ ಜೊತೆಗೆ ಶಾಂತಿಯನ್ನರಸಿ ಬರುತ್ತಿದ್ದರು. ವಸುದೈವ ಕುಟುಂಬಕಂ ಎಂಬ ಉಕ್ತಿಯಂತೆ ಭಾರತವು ವಿಶ್ವ ಭ್ರಾತೃತ್ವವನ್ನು ಸಾರುವ ಏಕೈಕ ದೇಶವಾಗಿತ್ತು. ಅದರಲ್ಲೂ ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ, ಪಲ್ಲವ ಮುಂತಾದ ರಾಜವಂಶಗಳು ಯುದ್ಧದಲ್ಲಿನ ತಮ್ಮ ಗೆಲುವಿನ ಸಂಭ್ರಮದ ವಿಜಯ ಸಂಕೇತಗಳಾಗಿ ದೇವಾಲಯಗಳನ್ನು ನಿರ್ಮಿಸಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಂತರು. ಈ ಎಲ್ಲ ಶಿಲ್ಪ ಕಲೆಯ ಬೀಡುಗಳಲ್ಲಿ ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳು ಮೇರು ಶಿಖರವಾಗಿ ನಿಲ್ಲುತ್ತವೆ. ಈ ಎರಡು ದೇವಾಲಯಗಳನ್ನು…
ಪ್ರತಿಭಟನೆಯಲ್ಲಿ ರೈತರೊಂದಿಗೆ ಶಾಸಕ ರಾಜುಗೌಡ ಪಾಟೀಲ ಭಾಗಿ ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯ ನಾಗಠಾಣ ಶಾಖಾ ಕಾಲುವೆಗಳ ಮೂಲಕ ದೇವರಹಿಪ್ಪರಗಿ ತಾಲ್ಲೂಕಿನ 7 ಕೆರೆಗಳ ಭರ್ತಿಗೆ ನೀರು ಒದಗಿಸಲು ಆಗ್ರಹಿಸಿ ಆ ಭಾಗದ ನೂರಾರು ರೈತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಚಿಮ್ಮಲಗಿ ಏತ ನೀರಾವರಿ ಯೋಜನೆಗೆ ನೀರು ಕಾಲುವೆಯ ಕೊನೆಯ ಭಾಗ 137 ಕಿ.ಮೀ ವರೆಗೆ ತಲುಪುವುದಿಲ್ಲ. ಇದರಿಂದ ಆ ಭಾಗದ ಕೆರೆಗಳ ಭರ್ತಿ ಆಗಿಯೇ ಇಲ್ಲ. ಅಲ್ಲಿ ಕುಡಿಯಲು ನೀರಿನ ಸಮಸ್ಯೆಯಿದೆ. ಕಾಲುವೆಯ ಕೊನೆ ಹಂತದವರೆಗೂ ನೀರು ಪೂರೈಕೆಯ ಬಗ್ಗೆ ಲಿಖಿತ ಭರವಸೆ ನೀಡುವವರೆಗೂ ಕದಲುವುದಿಲ್ಲ ಎಂದು ಅವರು ಹೇಳಿದರು.ಅವರ ಪ್ರತಿಭಟನೆಗೆ ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಕೂಡಾ ಸಾಥ್ ನೀಡಿದರು.ಸಭೆ: ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳು, ರೈತರ ಮಧ್ಯೆ ಸಭೆ ನಡೆದು, ಅಲ್ಲಿ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಯಿತು.ಕೊನೆಗೆ ಅ.28 ರಿಂದ ನ.4 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ನೀರು ಸರಾಗವಾಗಿ…
ಯಡ್ರಾಮಿ ಗ್ರಾಮದೇವತೆ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಯಡ್ರಾಮಿ : ಪಟ್ಟಣದ ಶ್ರೀ ಗ್ರಾಮದೇವತೆ ದೇವಸ್ಥಾನದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ಜರುಗುತ್ತಿದೆ.ನಿತ್ಯವೂ ಗ್ರಾಮದೇವಿಗೆ ವಿಧವಿಧ ಹೂವು, ಹಣ್ಣಿನ ಅಲಂಕಾರ ಮಾಡಿ, ಭಕ್ತಸಮೂಹ ಶ್ರೀ ದೇವತೆಯನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ.ಶುಕ್ರವಾರ ಗ್ರಾಮದೇವತೆಗೆ ಮಹಾ ರುದ್ರಾಭಿಷೇಕ ನೆರವೇರಿದ ನಂತರ ಸಿಂದಗಿಯ ರಾಮಚಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಗಾಯತ್ರಿ ಹೋಮ ನಡೆಯಿತು. ಬಳಿಕ ಹರಿನೀತಾ ಡಂಬಳ ಹಾಗೂ ಸಂಗಡಿಗರಿಂದ ನಡೆದ ಕೋಲಾಟ ಕಾರ‍್ಯಕ್ರಮ ಭಕ್ತರನ್ನು ಆಕರ್ಷಿಸಿತು. ಕೊನೆಗೆ ಗ್ರಾಮದೇವತಾ ಟ್ರಸ್ಟ್ ವತಿಯಿಂದ ಮಹಾಪ್ರಸಾದ ಜರುಗಿತು.ಈ ಸಂದರ್ಭದಲ್ಲಿ ಸಿದ್ಧನಗೌಡ ಮಾಲಿಪಾಟೀಲ, ಶಿವಶರಣಯ್ಯ ಪುರಾಣಿಕ, ವಿಠ್ಠಲ ಸಾಹು ಪತ್ತಾರ, ಲಕ್ಷ್ಮಿಕಾಂತ ಸೋನಾರ, ಆನಂದ ಯತ್ನಾಳ, ಚಂದ್ರಶೇಖರ ಬಂಡೆಪ್ಪಗೋಳ, ಸಂತೋಷ ಲಗಳಿ, ಸಂತೋಷ ಪಡಶೆಟ್ಟಿ, ಈರಣ್ಣ ಅಂಕಲಕೋಟಿ, ರಾಘವೇಂದ್ರ ಕುಲಕರ್ಣಿ, ಬಸಯ್ಯ ಹೊರಗಿನಮಠ, ಅರ್ಚಕ ಕಾಳು ಬಡಿಗೇರ, ಪಟ್ಟಣದ ಭಕ್ತರಿದ್ದರು.
