ವಿಜಯಪುರ: ಅಲ್ಲಿ ಬೂದು ಚೆಲುವು ಹರಡಿತ್ತು. ತಟಸ್ಥ, ವರ್ಣರಹಿತ ಬಿಂಬದ ಬೂದೋಕಳಿಯ ಬಣ್ಣದ ಉಡುಗೆಯಲ್ಲಿ ಆ ನೀರೆಯರ ಉತ್ಸಾಹ ಭರಿತ ಖುಷ್, ನಲಿವು ರಂಗೇರಿತ್ತು. ಬೂದು ಸ್ಪರ್ಶದ ತೋರಣದಲ್ಲಿ ನಾರಿಲೋಕದ ಅರಗಿಣಿಯರು ಭಕ್ತಿ,ಉನ್ಮಾದದ ಅದಮ್ಯ, ಅನನ್ಯ ತರಂಗದಲ್ಲಿ ತೇಲಿದ್ದರು. ದುಗಾ೯ಮಾತೆಯನ್ನು ಆರಾಧಿಸುತ್ತಾ ಸ್ಮರಣೀಯ ವಿಶೇಷ ಪೂಜಾಭಾವ ಧನ್ಯತೆಯಿಂದ ಮೆರೆದರು.
ದುಗೆ೯ಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಈ ದೇವಿಯನ್ನು ಮನದಲ್ಲಿ ಶ್ರದ್ಧೆಯಿಂದ ನೆನೆಸಿ ಪೂಜಿಸಿದರೆ ಸವೋ೯ ವಿಘ್ನಗಳು ದೂರಾಗುತ್ತವೆ ಅಲ್ಲದೇ ಪುಣ್ಯಲೋಕಭಾವ ದಯಾಪಾಲಿಸುವಳೆಂಬ ಅಚಲ ನಂಬಿಕೆಯಿಂದ ಹೆಂಗಳೆಯರು ನವರಾತ್ರಿಯ ಏಳನೇ ದಿನದಂದು ಬೆಳಗಿನ ಜಾವದಲ್ಲೇ ವಿಶೇಷ ಅವತಾರಿ ದೇವಿಗಳ ಅಂಗಳದಲ್ಲಿ ನೆರೆದು ಭಕ್ತಿ ತರ್ಪಣ ಗೈದರು. ಹಲ ದೇವ,ದೇವತೆಗಳಲ್ಲದೇ ಪೂಜ್ಯತೆಯಿಂದ ಪೂಜಿಸುವ ಬನ್ನಿ ಗಿಡಮರಗಳ ಸುತ್ತಾಕಿ ಮನದಾಳದ ಸಂಕಲ್ಪ ಪೂರೈಸುವಂತೆ ಬೇಡಿಕೊಂಡರು.
ಬಣ್ಣವಿಲ್ಲದ ಬಣ್ಣ ಖ್ಯಾತಿಯ ಬೂದು ಬಣ್ಣದಲ್ಲಿ ಖುಷಿನಗೆ ಉದು ಮಂದಾಕಿನಿಯರು ನಿರಾಳವಾಗಿ, ಸಂತೋಷದಿಂದ ಹೊರಸೂಸಿದರು. ನವರಾತ್ರಿ ಏಳನೇ ದಿನದ ಬೂದು ಬಣ್ಣದ ಸೀರೆಯನ್ನುಟ್ಟು ವಿಜಯಪುರ ಆಲಕುಂಟೆ ನಗರದ ನಾರಿಮಣಿಗಳ ಸ್ನೇಹಿ ಒಡತಿ ಮಾಜಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಅರ್ಚನಾ ಮೋಹನ ಚವ್ಹಾಣ ತಮ್ಮ ಒಡನಾಡಿ ಬಾಂಧವ್ಯದ ಗೆಳತಿಯರಾದ ರೇಖಾ ಪವಾರ, ಪ್ರಿಯಾಂಕಾ ನಾಯಕ, ಜ್ಯೋತಿ ಪವಾರ, ಶ್ರುತಿ ಇಚ್ಚೆಲಗಟ್ಟಿ,ದೀಪಾ, ಅಕ್ಷತಾ,ರೇಣುಕಾ ಇತರರೊಂದಿಗೆ ಧಾಮಿ೯ಕ ಅಂಗಳದಲ್ಲಿ ಪೂಜಾ ಹರ್ಷದಲ್ಲಿ ಸಂತೃಪ್ತಿ ನೋಟ ಚೆಲ್ಲಿದರು. ಆ ವೈಭವದ ಚಿತ್ರಾವಳಿ ತುಣುಕು ಇಲ್ಲಿ ಅಚ್ಚಾಗಿವೆ ನೋಡಿ!
Related Posts
Add A Comment