ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯವರು ಶ್ರೀ ಮರಗಮ್ಮದೇವಿ ದೇವಸ್ಥಾನದ ಎದುರಿನ ಮುಖ್ಯರಸ್ತೆಯಲ್ಲಿ ಭವ್ಯಮಂಟಪ ನಿರ್ಮಿಸಿ ಶುಕ್ರವಾರ ನಾಡದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಶ್ರದ್ಧಾ-ಭಕ್ತಿಯಿಂದ ದೇವಿಯ ಆರಾಧನೆ ನಡೆದಿದೆ.
ನಾಡದೇವಿ ಮಂಟಪಕ್ಕೆ ಹಾಗೂ ಮಂಟಪದ ಮುಂದೆ ರಸ್ತೆಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಆದರೆ, ಈ ಬಾರಿ ಡಿಜೆ ಹಾಗೂ ಮೈಕಾಸುರನ ಅಬ್ಬರವಿಲ್ಲದೆ ಅತ್ಯಂತ ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ಇಲ್ಲಿ ದಸರಾ ಉತ್ಸವ ಆಚರಿಸುವ ಜೊತೆಗೆ ಪರಿಸರ ಸ್ವಚ್ಛತೆಗೂ ಹೆಚ್ಚಿನ ಗಮನ ಹರಿಸಿರುವುದು ವಿಶೇಷವಾಗಿದೆ.
ನಾಡದೇವಿ ಉತ್ಸವದ ಅಂಗವಾಗಿ ಶನಿವಾರ ನಾಡದೇವಿ ಮಂಟಪದ ಮುಂಭಾಗದಲ್ಲಿ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮ ವೈಭವದಿಂದ ನಡೆಯಿತು. ಇನ್ನೂರಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ನೀಡಲಾಯಿತು.
ಇಬ್ರಾಹಿಂಪುರ ಗಣ್ಯ ಮನೆತನದ ಶ್ರೀಮತಿ ಶೋಭಾ ರುದ್ರಗೌಡ ಬಿರಾದಾರ, ಶ್ರೀಮತಿ ಲಕ್ಮೀ ರೇವಣಕುಮಾರ ಬಗಲಿ, ಶ್ರೀಮತಿ ರೇಣುಕಾ ಸುರೇಶ ಬಗಲಿ ಅವರು ಉಡಿ ತುಂಬುವ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿಯ ಅಧ್ಯಕ್ಷ ಸುನೀಲ ನುಚ್ಚಿ, ಪದಾಧಿಕಾರಿಗಳಾದ ಸಂಪತ್ ಕೋವಳ್ಳಿ, ರೇವಣಕುಮಾರ ಬಗಲಿ, ಸೂರ್ಯಕಾಂತ ಹಳ್ಳಿ, ವೊನೋದ ನುಚ್ಚಿ, ಗಿರೀಶ ಕವಟಗಿ, ಸುರೇಶ ಬಗಲಿ, ಸಂತೋಷ ಪಾಟೀಲ, ಶಂಕರ ಡಂಬಳ, ಕಲ್ಲಪ್ಪ ಜುಮನಾಳ ಅವರ ನೇತೃತ್ವದಲ್ಲಿ ಐದು ದಿನಗಳವರೆಗೆ ಇಲ್ಲಿ ನಾಡದೇವಿ ಉತ್ಸವ ಆಚರಿಸುತ್ತಿದ್ದು, ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Related Posts
Add A Comment