Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026

ಬಸವನಾಡಿನ ಸಾಧಕ ಮಿಥುನ ಸುಸಲಾದಿ

ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದಸರಾ ಆರಂಭದ ಇತಿಹಾಸ
(ರಾಜ್ಯ ) ಜಿಲ್ಲೆ

ದಸರಾ ಆರಂಭದ ಇತಿಹಾಸ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp
  • ಡಾ.ರಾಜಶೇಖರ ನಾಗೂರ

ಈ ವರ್ಷದ ಮೈಸೂರು ದಸರಾ 413 ನೇ ವರ್ಷದ ದಸರಾ ಮಹೋತ್ಸವಾಗಿದೆ. ಈ ಮೈಸೂರು ದಸರಾ ಆರಂಭದಿಂದ ಮೈಸೂರು ದಸರಾ ಆಗಿರಲಿಲ್ಲ. ಇದರ ಮೂಲ 14ನೇ ಶತಮಾನದ ಹಂಪಿಯ  ವಿಜಯನಗರ ಸಾಮ್ರಾಜ್ಯವಾಗಿದೆ.
ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ‘ಮಹಾನವಮಿ’ ಎಂಬ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಹಂಪಿಯ ‘ಹಜಾರರಾಮ’ ದೇವಸ್ಥಾನದ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಇದರ ಉಲ್ಲೇಖವಿದೆ. ಅಂದಿನ ಇಟಲಿಯ ವಿದೇಶಿ ಪ್ರವಾಸಿಗ ‘ನಿಕೋಲೋ ಡಿ ಕೌಂಟಿ’ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ಅಂದಿನ ಮಹಾನವಮಿಯನ್ನು “ರಾಜರ ಬೆಂಬಲದಿಂದ ನಡೆಯುವ ವೈಭವದ ನಾಡಹಬ್ಬ” ಎಂದು ತನ್ನ ಪ್ರವಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.
ಹೀಗೆ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾ ನವಮಿಯು ದಖ್ಖನ್ನಿನ ಸುಲ್ತಾನರ ದಾಳಿಯಿಂದ ಪತನವಾದ ಮೇಲೆ ನಿಂತು ಹೋಯಿತು. ಅದಾದ ಮೇಲೆ ಅಳಿದುಳಿದ ದಕ್ಷಿಣ ಕರ್ನಾಟಕದ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ಕಟ್ಟಿ ಮೈಸೂರಿನ ಮಹಾರಾಜರು ರಾಜ್ಯಭಾರವನ್ನು ಮುಂದುವರಿಸಿದರು. ಹಾಗೆಯೇ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾನವಮಿಯನ್ನು ಮೈಸೂರಿನ ದಸರಾ ಉತ್ಸವವಾಗಿ ಮುಂದುವರಿಸಿದರು.
1610 ರಲ್ಲಿ ಶ್ರೀರಾಜ ಒಡೆಯರ್ ರವರು ಶ್ರೀರಂಗಪಟ್ಟಣದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆರಂಭಿಸಿದರು. ಅಂದು ಶುರುವಾದ ಮೈಸೂರು ದಸರಾವನ್ನು ಇಂದಿನವರೆಗೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯ ನಂತರ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಾದ ಮೇಲೆ 1971ರಲ್ಲಿ ರಾಜ್ಯ ಸರ್ಕಾರವು ವಿಶೇಷ ಕಾಯ್ದೆಯೊಂದನ್ನು ತಂದು ರಾಜ ಮನೆತನದವರ ವಿಶೇಷ ಹಕ್ಕುಗಳನ್ನು ವಾಪಸ್ ಪಡೆದು ದಸರಾವನ್ನು ನಾಡ ಹಬ್ಬವಾಗಿ ರಾಜ್ಯ ಸರ್ಕಾರವೇ ಆಚರಿಸುತ್ತಾ ಬರುತ್ತಿದೆ.

ದಸರಾ ಪದ ಹೇಗೆ ಬಂದಿತು?*
ಸಂಸ್ಕೃತ ಪದಗಳಾದ ‘ದಶ’ ಎಂದರೆ ಹತ್ತು ‘ಹರ’ ಎಂದರೆ ಸೋಲಿಸುವುದು.  ಇವೆರಡು ಪದಗಳು ಸೇರಿ  ‘ದಶಹರ’ ಆಯ್ತು. ಮುಂದೆ ಈ ದಶಹರ ಕನ್ನಡದಲ್ಲಿ ದಸರಾ ಆಗಿ ಮಾರ್ಪಟ್ಟಿತು.
ಮೈಸೂರು ದಸರಾವು ಭಾರತದಲ್ಲಿ ಕರ್ನಾಟಕ ರಾಜ್ಯದ ನಾಡಹಬ್ಬವಾಗಿದೆ. ಇದು ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗಿ ಕೊನೆಯ ದಿನ ವಿಜಯದಶಮಿ. ಹಬ್ಬವನ್ನು ಹಿಂದೂ ಕ್ಯಾಲೆಂಡರ್ ತಿಂಗಳ ಅಶ್ವಿನ್‌ನಲ್ಲಿ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸಿದ ದಿನವಾಗಿ ಇದನ್ನು ಸಾಂಕೇತಿಕವಾಗಿ  ಆಚರಿಸುತ್ತೇವೆ.

ಡಾ.ರಾಜಶೇಖರ ನಾಗೂರ

*

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026

ಬಸವನಾಡಿನ ಸಾಧಕ ಮಿಥುನ ಸುಸಲಾದಿ

ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ

5E ಮಾದರಿ ಪಾಠ ಯೋಜನೆ ಕಾರ್ಯಗಾರಕ್ಕೆ ಚಾಲನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026
    In ದಿನಪತ್ರಿಕೆ
  • ಬಸವನಾಡಿನ ಸಾಧಕ ಮಿಥುನ ಸುಸಲಾದಿ
    In (ರಾಜ್ಯ ) ಜಿಲ್ಲೆ
  • ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • 5E ಮಾದರಿ ಪಾಠ ಯೋಜನೆ ಕಾರ್ಯಗಾರಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಗೋವುಗಳ ಸಾಗಾಟಕ್ಕೆ ತಡೆ: ವಾಹನ ವಶಕ್ಕೆ ಪಡೆದ ಪೊಲೀಸರು
    In (ರಾಜ್ಯ ) ಜಿಲ್ಲೆ
  • ರಾಜೀನಾಮೆ ಹಿಂಪಡೆದ ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
  • ದಲಿತರ ಮೇಲಿನ ದೌರ್ಜನ್ಯ ತಡೆಯಲು ಅಪ್ಪುರಾಜ್ ಆಗ್ರಹ
    In (ರಾಜ್ಯ ) ಜಿಲ್ಲೆ
  • ಆ.೮ ರಂದು ವಿಜಯಪುರದಲ್ಲಿ ಕ್ರಿಯೋಸ್ಫಿಯರ್ ಶೃಂಗಸಭೆ
    In (ರಾಜ್ಯ ) ಜಿಲ್ಲೆ
  • ನಿಡಗುಂದಿ ತಾಲ್ಲೂಕಿನ ಶಾಲೆಗಳಿಗೆ ೧೫,೦೦೦ ನೋಟ್‌ಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಅಂಗನವಾಡಿಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.