- ಮಂಜುಳಾ ಹೆಗಡೆ, ಶಿರಸಿ
ತಾರೆಗಳ ಊರಿಂದ ಏರುತ್ತ ಬಂದ
ಜಗವನ್ನು ಬೆಳಗಲು ತನ್ನ ಪ್ರಭೆಯಿಂದ
ಹಾಲ್ಬೆಳಕು ಚೆಲ್ಲುತ್ತ ಆನಂದದಿಂದ
ನವಜೋಡಿ ಭಾವಕ್ಕೆ ಸಡಗರವ ತಂದ
ಚಂದ್ರಮನ ಕಚಗುಳಿ ಮಾಡಿತ್ತು ಮೋಡಿ
ಪ್ರಕೃತಿಯು ಅರಳಿ ಸೌಂದರ್ಯ ಇಮ್ಮಡಿ
ಗೂಡೊಳಗೆ ಬೆಚ್ಚಗೆ ಕುಳಿತ ಬಾನಾಡಿ
ಆಗೊಮ್ಮೆ ಈಗೊಮ್ಮೆ ಇಣುಕಿತ್ತು ನೋಡಿ
ತಣ್ಣನೆಯ ತಂಗಾಳಿ ಕೊಟ್ಟಿತ್ತು ಮುದವ
ಮನದೊಳಗೆ ಮೂಡಿತ್ತು ಮಧುರ ಭಾವ
ನಯನವು ಆಸ್ವಾದಿಸಿ ಬೆಳದಿಂಗಳ ಚೆಲುವ
ಬರೆದೆ ಚಂದ್ರೋದಯ ವರ್ಣಿಸುತ್ತ ಕವನವ