ತಿಕೋಟಾ: ಪರಮಾತ್ಮನ ಸ್ವರೂಪವನ್ನು ತೆಗೆದುಕೊಂಡು ಧರೆಗೆ ಬಂದವರು ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ತೊಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀಗಳ ಬದುಕು ನಮಗೆ ಮಾರ್ಗದರ್ಶನವಾಗಿದೆ. ಹುಟ್ಟು ಶ್ರೇಷ್ಠತೆಯೂ ಅಲ್ಲ ಸಾವು ಕನಿಷ್ಠವು ಅಲ್ಲ. ಅಭಿಮಾನದಿಂದ ನೆನೆಸುವದು ಅಲ್ಲ, ಅನುಭಾವದಿಂದ ನೆನೆಸುವದು, ಶ್ರೀಗಳು ರಾಷ್ಟ್ರ ಸಂತರು, ಜಗದಗಲ, ಮುಗಿಲದಗಲ ಎಲ್ಲ ಕಡೆ ಇದ್ದಾರೆ. ಕತ್ತಲು ಇಲ್ಲದ ಬೆಳಕು ಅವರಾಗಿದ್ದಾರೆ. ಸಾವಿರಾರು ವರ್ಷಗಳ ಉಪನಿಷತ್ತು ಉಳಿದಿದೆ, ಶ್ರೀಗಳ ಜ್ಞಾನ ಶಾಶ್ವತ. ಅದಕ್ಕಾಗಿ ಅವರ ಯಾವುದೇ ಕುರುಹುಗಳು ಇರದೇ ಇದ್ದರು ಮುಂದಿನ ಪಿಳಿಗೆಗೆ ಅವರ ಜ್ಞಾನ ಉಳಿಯುತ್ತದೆ. ದೇಹವು ಹೋಗಿದೆ ಅಂತರಂಗದ ತನವು ಎಲ್ಲ ಕಡೆ ಇದೆ. ಯುವಕರು ಧರ್ಮದ ದ್ವಜ ಹಿಡಿಯುವ ಬದಲು ಕಾಯಕದ ದ್ವಜ ಹಿಡಿದು ಬದುಕು ನಡೆಸಬೇಕು. ಅವರ ಚಿಂತನೆಗಳು ಎಲ್ಲ ಭಾಷೆಗಳಲ್ಲಿ ಪ್ರಕಟ ಆಗಬೇಕು. ಅವರ ಅಪ್ಪಟ ಶಿಷ್ಯನಾಗಿಯೆ ನಾನು ಇರುತ್ತೇನೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳು ಬಸವಲಿಂಗ ಮಹಾಸ್ವಾಮೀಜಿ ಜ್ಞಾನ, ಯೋಗ, ಕರ್ಮ ಎಲ್ಲವನ್ನು ಅಳವಡಿಕೊಂಡವರು ಸಿದ್ದೇಶ್ವರ ಶ್ರೀಗಳು, ಅವರ ಬಗ್ಗೆ ಮಾತನಾಡುವದಕ್ಕಿಂತ ಅವರಂತೆ ನಡೆಯಬೇಕು. ಅವರ ಬದುಕು ಶ್ರೇಷ್ಠವಾದುದು. ಅವರ ಜ್ಞಾನ ಅವರ ವಿಚಾರಗಳನ್ನು ನಾವು ಮುಂದಿನ ಪಿಳಿಗೆಗೆ ಕೊಡಬೇಕು. ರೈತರು, ಹಳ್ಳಿಯ ಜನರನ್ನು ಅವರು ಪ್ರೀತಿಸುತ್ತಿದ್ದರು. ಭಾರತದ ಪತಂಪರೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡು ಬಂದವರು ಹಳ್ಳಿಯ ಜನರು ಎಂದು ಸಿದ್ದೇಶ್ವರ ಶ್ರೀಗಳು ಹೇಳುತ್ತಿದ್ದರು ಎಂದು ಅವರ ಒಡನಾಟದ ದಿನಗಳನ್ನು ನೆನೆಪಿಸಿಕೊಂಡರು.
ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ಮಾತನಾಡಿದರು.
ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸದಲಗಾದ ಶೃದ್ದಾನಂದ ಸ್ವಾಮೀಜಿ, ಗ್ರಾಮದ ಹಿರಿಯ ಆರ್.ಎಂ.ಮಸಳಿ ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ಜನಿಸಿದ ಮನೆಯಲ್ಲಿ ಪೂಜಾ ಕಾರ್ಯ ನೆರವೇರಿಸಿದರು. ಎತ್ತಿನ ಬಂಡೆಯಲ್ಲಿ ಅವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮುತೈದೆಯರ ಕುಂಭ ಮೇಳದೊಂದಿಗೆ ಶೃದ್ದಾ ಭಕ್ತಿಯಿಂದ ಮೆರವಣಿಗೆ ಸಾಗುತ್ತಾ ವೇದಿಕೆ ತಲುಪಿತು.
Subscribe to Updates
Get the latest creative news from FooBar about art, design and business.
Related Posts
Add A Comment

