ಯಡ್ರಾಮಿ ಗ್ರಾಮದೇವತೆ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಯಡ್ರಾಮಿ : ಪಟ್ಟಣದ ಶ್ರೀ ಗ್ರಾಮದೇವತೆ ದೇವಸ್ಥಾನದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನವರಾತ್ರಿ ಉತ್ಸವ ಅದ್ಧೂರಿಯಾಗಿ ಜರುಗುತ್ತಿದೆ.
ನಿತ್ಯವೂ ಗ್ರಾಮದೇವಿಗೆ ವಿಧವಿಧ ಹೂವು, ಹಣ್ಣಿನ ಅಲಂಕಾರ ಮಾಡಿ, ಭಕ್ತಸಮೂಹ ಶ್ರೀ ದೇವತೆಯನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ.
ಶುಕ್ರವಾರ ಗ್ರಾಮದೇವತೆಗೆ ಮಹಾ ರುದ್ರಾಭಿಷೇಕ ನೆರವೇರಿದ ನಂತರ ಸಿಂದಗಿಯ ರಾಮಚಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಗಾಯತ್ರಿ ಹೋಮ ನಡೆಯಿತು. ಬಳಿಕ ಹರಿನೀತಾ ಡಂಬಳ ಹಾಗೂ ಸಂಗಡಿಗರಿಂದ ನಡೆದ ಕೋಲಾಟ ಕಾರ‍್ಯಕ್ರಮ ಭಕ್ತರನ್ನು ಆಕರ್ಷಿಸಿತು. ಕೊನೆಗೆ ಗ್ರಾಮದೇವತಾ ಟ್ರಸ್ಟ್ ವತಿಯಿಂದ ಮಹಾಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಸಿದ್ಧನಗೌಡ ಮಾಲಿಪಾಟೀಲ, ಶಿವಶರಣಯ್ಯ ಪುರಾಣಿಕ, ವಿಠ್ಠಲ ಸಾಹು ಪತ್ತಾರ, ಲಕ್ಷ್ಮಿಕಾಂತ ಸೋನಾರ, ಆನಂದ ಯತ್ನಾಳ, ಚಂದ್ರಶೇಖರ ಬಂಡೆಪ್ಪಗೋಳ, ಸಂತೋಷ ಲಗಳಿ, ಸಂತೋಷ ಪಡಶೆಟ್ಟಿ, ಈರಣ್ಣ ಅಂಕಲಕೋಟಿ, ರಾಘವೇಂದ್ರ ಕುಲಕರ್ಣಿ, ಬಸಯ್ಯ ಹೊರಗಿನಮಠ, ಅರ್ಚಕ ಕಾಳು ಬಡಿಗೇರ, ಪಟ್ಟಣದ ಭಕ್ತರಿದ್ದರು.