Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೋರವಾರದಿಂದ ದೇವರಹಿಪ್ಪರಗಿವರೆಗೆ ರೈತಸಂಘದ ಪದಾಧಿಕಾರಿಗಳಿಂದ ಪಾದಯಾತ್ರೆ ದೇವರಹಿಪ್ಪರಗಿ: ರೈತರ ಸಂಪೂರ್ಣ ಸಾಲಮನ್ನಾ , ಬರಗಾಲ ನಿಮಿತ್ಯ ತುರ್ತು ಪರಿಹಾರ, ಸೇರಿದಂತೆ ೧೧ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಕೋರವಾರ ಗ್ರಾಮದಿಂದ ದೇವರಹಿಪ್ಪರಗಿವರೆಗೆ ಸುಮಾರು ೬ ಗಂಟೆಗಳ ಕಾಲ ಪಾದಯಾತ್ರೆ ಕೈಗೊಂಡು ನಂತರ ಅಂಬೇಡ್ಕರ್ ವೃತ್ತದಲ್ಲಿ ಒಂದು ಗಂಟೆಗಳ ಕಾಲ ಧರಣಿ ಕುಳಿತು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಕೋರವಾರ ಗ್ರಾಮದ ಕೋರವಾರೇಶ ಗ್ರಾಮದಲ್ಲಿ ಸೇರಿದ ರೈತರು ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಈರಪ್ಪ ಕುಳೇಕುಮಟಗಿ, ಶಿವಾನಂದ ಹಿರೇಮಠ, ಸಂಗಮೇಶ ಹುಣಸಗಿ, ಚೌಕಿಮಠದ ಕಾಶೀಲಿಂಗಶ್ರೀ ನೇತೃತ್ವದಲ್ಲಿ ಜಾಲವಾದ, ಮಣೂರ, ದೇವೂರ ಗ್ರಾಮಗಳ ಮೂಲಕ ಒಟ್ಟು ೨೦ ಕಿ.ಮೀ ಪಾದಯಾತ್ರೆ ನಡೆಸಿ, ಅಂಬೇಡ್ಕರ್ ವೃತ್ತ ತಲುಪಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಸದಯ್ಯನಮಠದ ವೀರಗಂಗಾಧರಶ್ರೀ, ಹುಲಜಂತಿ ಮಾಳಿಂಗರಾಯರು, ರೈತ ಸಂಘದ ಸಂಗಮೇಶ ಸಗರ,…
ವಿಜಯಪುರ: ನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಸಾಮೂಹಿಕ ಬನ್ನಿ-ವಿನಿಮಯ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.ಕೆಎಸ್‌ಆರ್‌ಟಿಸಿ ಡಿಪೋ ಬಳಿ ಇರುವ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಜಯಪುರ, ಜಿಲ್ಲೆಯ ಎಲ್ಲ ತಾಲೂಕಿನ ಜನರು ಬನ್ನಿ ವಿನಿಮಯ ಮಾಡಿ “ನಾವು ನೀವು ಬಂಗಾರದ ಹಾಗೆ ಇರೋಣ” ಎಂದು ಹಬ್ಬದ ಶುಭ ಕೋರಿದರು.ಈ ಸಂದರ್ಭ ಉಮೇಶ ಕಾರಜೋಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಸಹೋದರತೆ, ಭಾವೈಕ್ಯತೆ ಹಾಗೂ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ತಮ್ಮದೇ ಆದ ಪಾತ್ರ ವಹಿಸುತ್ತವೆ. ಅದರಲ್ಲೂ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪವಿತ್ರವಾದ ಶಮಿ ವೃಕ್ಷದ ಎಲೆಗಳನ್ನು ಬಂಗಾರ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವುದರ ಹಿಂದೆ ಅನೇಕ ಅರ್ಥವಿದೆ, ಎಲ್ಲರೂ ಸುಖವಾಗಿರಲಿ, ಎಲ್ಲರೂ ಇರಲಿ ಎನ್ನುವ ಭಾವಾರ್ಥವಿದೆ, ಹಬ್ಬಗಳ ಹಿಂದಿನ ಭಾವವನ್ನು ನಾವು ಅರಿತುಕೊಂಡು ಮುನ್ನಡೆಯಬೇಕಿದೆ ಎಂದರು.ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಶರಣು ಸಬರದ, ಸತೀಶ ಬಾಗಿ, ವಿರೇಶ…
ಆಲಮಟ್ಟಿ: ಯುಕೆಪಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಅವಧಿಯನ್ನು ಮತ್ತೆ ಪರಿಷ್ಕರಿಸಲಾಗಿದ್ದು, ವಾರಾಬಂಧಿ ಅವಧಿ ಬದಲಾಯಿಸಿ, ಯುಕೆಪಿಯ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ.ಈಗ ಅಕ್ಟೋಬರ್14 ರಿಂದ ಆರಂಭಗೊಂಡಿರುವ ಕಾಲುವೆಗೆ ನೀರು ಹರಿಸುವ ಅವಧಿ ಯಾವುದೇ ವಾರಾಬಂಧಿ ಅಳವಡಿಸದೇ ನ.18 ರವರೆಗೆ 36 ದಿನಗಳ ಕಾಲ ನಿರಂತರ ನೀರು ಪೂರೈಕೆಯಾಗಲಿದೆ. ನ.19 ರಿಂದ ನ.26 ರವರೆಗೆ 8 ದಿನ ಮಾತ್ರ ಬಂದ್‌ಮಾಡಿ ಮತ್ತೇ ನ.27 ರಿಂದ ಡಿ.4 ರವರೆಗೆ 8ದಿನಗಳ ಕಾಲ ನೀರು ಪೂರೈಕೆಯಾಗಲಿದೆ. ಅ.14 ರಿಂದ 44 ದಿನ ಕಾಲುವೆಗೆ ನೀರು ಹರಿಯಲಿದ್ದು, 8 ದಿನ ಮಾತ್ರ ಬಂದ್ ಇರಲಿದೆ.ಎಂದು ಐಸಿಸಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ನಾಡಹಬ್ಬ ದಸರಾ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿದರು.ಇಂದು ಬುಧವಾರ ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಚಿವರಿಗೆ ಬನ್ನಿ ನೀಡಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಸಚಿವರೂ ಕೂಡ ಎಲ್ಲರಿಗೂ ಬನ್ನಿ ನೀಡಿ ಶುಭ ಕೋರಿದರು. ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಹಿತೈಷಿಗಳು ದಸರಾ ಶುಭಾಷಯ ಕೋರಿದರು.ಜಗನ್ಮಾತೆ ಬರವನ್ನು ದೂರ ಮಾಡಲಿ. ನಾಡಿನಾದ್ಯಂತ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತಸಮಯ ಜೀವನ ಸಾಗಿಸುವಂತಾಗಲಿ ಎಂದು ಸಚಿವರು ಈ ಸಂದರ್ಭದಲ್ಲಿ ಶುಭ ಕೋರಿದರು.ಈ ಸಂದರ್ಭದಲ್ಲಿ ಕೆಲವು ರೈತರ ಸಮಸ್ಯೆಗಳಿಗೂ ಸ್ಪಂದಿಸಿದ ಸಚಿವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕುಡಿಯುವ ನೀರು,…
ವಿಜಯಪುರ: ವಿಜಯ ದಶಮಿ ಅಂಗವಾಗಿ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಮಂಗಳವಾರ ರಾತ್ರಿ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.ನಗರದ ಆರಾಧ್ಯ ದೈವ ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ ಶಾಸಕರು, ಪಲ್ಲಕ್ಕಿಯೊಂದಿಗೆ ನೀಲಕಂಠೇಶ್ವರ ದೇವಸ್ಥಾನದ ಬಳಿ ತೆರಳಿ ಬನ್ನಿ ಮುಡಿಯುವ ಕಾರ್ಯದಲ್ಲಿ ಭಾಗಿಯಾದರು. ನಂತರ ಮರಳಿ ಸಿದ್ದೇಶ್ವರ ದೇವಸ್ಥಾನ ಆವರಣಕ್ಕೆ ಆಗಮಿಸಿ, ನಗರವೂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ರೈತರು, ಮುಖಂಡರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಮಕ್ಕಳೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ತಿಳಿಸುವ ಜೊತೆಗೆ ಶ್ರೀ ಸಿದ್ದರಾಮೇಶ್ವರರು ಸುಖ, ಶಾಂತಿ, ಸಮೃದ್ಧಿ ಆರೋಗ್ಯ ದೇವರು ಕರುಣಿಸಲೆಂದು ಹಾರೈಸಿದರು.ಇದೇ ವೇಳೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾದ ನಾಡದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಲಕ್ಷಾಂತರ ಜನರಿಂದ ಆಕರ್ಷಕ ಜಂಬೂ ಸವಾರಿ ವೀಕ್ಷಣೆ! 750 ಕೆಜಿ ತೂಕದ ಚಿನ್ನದ ಅಂಬಾರಿ ಯಶಸ್ವಿಯಾಗಿ ಹೊತ್ತುನಡೆದ ಅಭಿಮನ್ಯು ಆನೆ | ದೇವಿಗೆ ಸಿಎಂ ಸಿದ್ದರಾಮಯ್ಯರಿಂದ ಪುಷ್ಪಾರ್ಚನೆ ಮೈಸೂರು: ನಗರದಲ್ಲಿ ನಡೆದ ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಮಂಗಳವಾರ ಲಕ್ಷಾಂತರ ಜನರು ವೀಕ್ಷಿಸಿ ಕಣ್ತುಂಬಿಕೊಂಡರು.ನಾಡದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಅಭಿಮನ್ಯು ಆನೆ ಯಶಸ್ವಿಯಾಗಿ ಹೊತ್ತು ಸಾಗಿತು. ಇತರ 14 ಗಜಪಡೆಗಳು ಅಭಿಮನ್ಯುವಿಗೆ ಸಾಥ್ ನೀಡಿದವು. ಕರ್ನಾಟಕದ ಅಶ್ವದಳ ಪೊಲೀಸರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಕಲಾತಂಡಗಳು, ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು.ಅರಮನೆ ಮುಂಭಾಗದಿಂದ ನಡೆದ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳು ಮತ್ತು ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ಭವ್ಯವಾದ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು.ಬಳ್ಳಾರಿ…
ಢವಳಗಿ: ಸಮೀಪದ ಹಂದ್ರಾಳ ಗ್ರಾಮದ ಶ್ರೀ ಸೋಮನಾಥ ದೇವಾಲಯದ ಪುನರುಜ್ಜೀವನ ಹಾಗೂ ಗೋಪುರ ಕಳಸಾರೋಹಣವನ್ನು ಚೆನ್ನಬಸವ ಮಹಾಸ್ವಾಮಿಗಳು ಇಂಗಳೇಶ್ವರ ಅವರು ಅ.24 ಮಂಗಳವಾರದಂದು ಲೋಕಾರ್ಪಣೆಗೊಳಿಸಿದರು.ಗುರುಬಸವ ಮಹಾಸ್ವಾಮಿಗಳು ನಂದವಾಡಗಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪಡೇಕನೂರ, ಘನಮಠೇಶ್ವರ ಮಹಾಸ್ವಾಮಿಗಳು ಢವಳಗಿ ಅವರು ಉದ್ಘಾಟಿಸಿದರು.ಗಣ್ಯರಾದ ಸಿ ಎಸ್ ನಾಡಗೌಡ ಅಪ್ಪಾಜಿ ಶಾಸಕರು ಮುದ್ದೇಬಿಹಾಳ, ಆರ್ ಎಸ್ ಪಾಟೀಲ ಕೂಚಬಾಳ, ಪ್ರಭುಗೌಡ ದೆಸಾಯಿ, ಸಿ ಬಿ ಅಸ್ಕಿ, ಬಸವರಾಜ ಅಸ್ಕಿ, ಬಿ ಬಿ ಹಂದ್ರಾಳ ಸೇರಿದಂತೆ ಗ್ರಾಮಸ್ಥರು ಇದ್ದರು.
ಮಹಾರಾಷ್ಟ್ರದ ಗಡಿಗ್ರಾಮದಲ್ಲಿ ಭಾಷಾಭಿಮಾನ ಮೂಡಿಸುವ ನವರಾತ್ರಿ ಸಂಭ್ರಮಕ್ಕೆ ತೆರೆ ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೭ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟ್ರಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ ನಡೆಯಿತು. ಮಕ್ಕಳು ರಾಷ್ಟ್ರಧ್ವಜ…
ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಜಿ.ಪಂ. ಸಿಇಓ ರಾಹುಲ್ ಶಿಂಧೆ ಕರೆ ವಿಜಯಪುರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಶೈಲಿ ಮತ್ತು ಅವರ ತತ್ವ ಸಿದ್ದಾಂತವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಜಲನಗರದ ಬುದ್ಧ ವಿಹಾರ ಆವರಣದಲ್ಲಿ ರವಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳ ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂಬೇಡ್ಕರ್ ಅವರು ಮಹಾನ್ ಜ್ಞಾನಿಗಳು. ಅವರ ಆದರ್ಶ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಹಾಗಾಗಿ ನಾವು ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ ಅವರು ಮಾತನಾಡಿ, ಪ್ರತಿ ವರ್ಷ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ ಎಂಬ ಕಾರ್ಯಕ್ರಮದಡಿ ಅಂಬೇಡ್ಕರ್ ಅವರು ದೀಕ್ಷೆ ಪಡೆದ…
ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವೆಂಕಟೇಶ್ವರ ತರುಣ ಮಂಡಳಿ ವತಿಯಿಂದ ಹಮ್ಮಿಕೊಂಡ ನಾಡದೇವಿ ಉತ್ಸವದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿಯಾದ ಶಿಕ್ಷಕರಿಗೆ ಸತ್ಕಾರ ಕಾರ್ಯಕ್ರಮ ನೆರವೇರಿತು.ಕಕಮರಿಯ ಗುರುದೇವಾಶ್ರಮದ ಆತ್ಮಾನಂದ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಅತ್ಯುತ್ತಮವಾಗಿ ಪ್ರತಿಭೆಯನ್ನು ತೋರ್ಪಡಿಸುವ ವಿದ್ಯಾರ್ಥಿಗಳನ್ನು ಸಮಾಜ ಮೆರವಣಿಗೆ ಮಾಡುತ್ತದೆ. ಅದೇ ಸೊಮಾರಿಗಳಾಗಿ ಎಲ್ಲೋ ಮೂಲೆಯಲ್ಲಿ ಕುಳಿತರೆ ನಿಮ್ಮನ್ನು ಈ ಸಮಾಜ ಗುರುತಿಸುವುದಿಲ್ಲ ಎಂದರು.ಬಾಪು ದೇವನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಹಾದೇವ ಜಾಧವ, ರಮೇಶ ಕಟೆ, ಸುನೀಲ ಮೋಳೆ ಭಾಗವಹಿಸಿದ್ದರು.ಶ್ರೀಕಾಂತ್ ಕುಂಬಾರ ನಿರೂಪಿಸಿದರು. ಧರಪ್ಪಾ ಸಿದ್ನಾತ್ ಸ್ವಾಗತಿಸಿದರು.ಶಿವಾನಂದ ಚಾವರ ಸಂಜಯಕುಮಾರ ಯಚ್ಚಿ ನಿಂಗರಾಜ ಕಾಳಿ ಉಪಸ್ಥಿತರಿದ್ದರು.
