ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವೆಂಕಟೇಶ್ವರ ತರುಣ ಮಂಡಳಿ ವತಿಯಿಂದ ಹಮ್ಮಿಕೊಂಡ ನಾಡದೇವಿ ಉತ್ಸವದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿಯಾದ ಶಿಕ್ಷಕರಿಗೆ ಸತ್ಕಾರ ಕಾರ್ಯಕ್ರಮ ನೆರವೇರಿತು.
ಕಕಮರಿಯ ಗುರುದೇವಾಶ್ರಮದ ಆತ್ಮಾನಂದ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಅತ್ಯುತ್ತಮವಾಗಿ ಪ್ರತಿಭೆಯನ್ನು ತೋರ್ಪಡಿಸುವ ವಿದ್ಯಾರ್ಥಿಗಳನ್ನು ಸಮಾಜ ಮೆರವಣಿಗೆ ಮಾಡುತ್ತದೆ. ಅದೇ ಸೊಮಾರಿಗಳಾಗಿ ಎಲ್ಲೋ ಮೂಲೆಯಲ್ಲಿ ಕುಳಿತರೆ ನಿಮ್ಮನ್ನು ಈ ಸಮಾಜ ಗುರುತಿಸುವುದಿಲ್ಲ ಎಂದರು.
ಬಾಪು ದೇವನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಹಾದೇವ ಜಾಧವ, ರಮೇಶ ಕಟೆ, ಸುನೀಲ ಮೋಳೆ ಭಾಗವಹಿಸಿದ್ದರು.
ಶ್ರೀಕಾಂತ್ ಕುಂಬಾರ ನಿರೂಪಿಸಿದರು. ಧರಪ್ಪಾ ಸಿದ್ನಾತ್ ಸ್ವಾಗತಿಸಿದರು.
ಶಿವಾನಂದ ಚಾವರ ಸಂಜಯಕುಮಾರ ಯಚ್ಚಿ ನಿಂಗರಾಜ ಕಾಳಿ ಉಪಸ್ಥಿತರಿದ್ದರು.
Related Posts
Add A Comment