ಆಲಮಟ್ಟಿ: ಯುಕೆಪಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಅವಧಿಯನ್ನು ಮತ್ತೆ ಪರಿಷ್ಕರಿಸಲಾಗಿದ್ದು, ವಾರಾಬಂಧಿ ಅವಧಿ ಬದಲಾಯಿಸಿ, ಯುಕೆಪಿಯ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ.
ಈಗ ಅಕ್ಟೋಬರ್14 ರಿಂದ ಆರಂಭಗೊಂಡಿರುವ ಕಾಲುವೆಗೆ ನೀರು ಹರಿಸುವ ಅವಧಿ ಯಾವುದೇ ವಾರಾಬಂಧಿ ಅಳವಡಿಸದೇ ನ.18 ರವರೆಗೆ 36 ದಿನಗಳ ಕಾಲ ನಿರಂತರ ನೀರು ಪೂರೈಕೆಯಾಗಲಿದೆ. ನ.19 ರಿಂದ ನ.26 ರವರೆಗೆ 8 ದಿನ ಮಾತ್ರ ಬಂದ್‌ಮಾಡಿ ಮತ್ತೇ ನ.27 ರಿಂದ ಡಿ.4 ರವರೆಗೆ 8ದಿನಗಳ ಕಾಲ ನೀರು ಪೂರೈಕೆಯಾಗಲಿದೆ. ಅ.14 ರಿಂದ 44 ದಿನ ಕಾಲುವೆಗೆ ನೀರು ಹರಿಯಲಿದ್ದು, 8 ದಿನ ಮಾತ್ರ ಬಂದ್ ಇರಲಿದೆ.
ಎಂದು ಐಸಿಸಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment